JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, December 9, 2023

MINISTER Answer Regarding Government employees Childcare leave

  Jnyanabhandar       Saturday, December 9, 2023
Hedding : Answer from Hon'ble Minister of Education to the question asked in the House about Government employees Childcare leave...

ಸರ್ಕಾರಿ ನೌಕರರ ರಜೆ; ಶಿಶುಪಾಲನಾ, ಗಳಿಕೆ ರಜೆಗಳ ವಿವರಗಳು...


ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವಿವಿಧ ರಜೆಗಳನ್ನು ಪಡೆಯಬಹುದು. ರಜೆಗಳಲ್ಲಿ ಸಹ ಹಲವು ವಿಧಗಳಿವೆ ಅವುಗಳನ್ನು ನೌಕರರು ತಿಳಿದಿರುವುದು ಅಗತ್ಯವಾಗಿದೆ. ನಿಯಮಗಳ ಅನ್ವಯ ರಜೆಗಳ ವಿವರಗಳು ಇಲ್ಲಿವೆ.


ಕೆಲವೊಂದು ಸಂದರ್ಭದಲ್ಲಿ ತಾತ್ಕಾಲಿಕ ಸರ್ಕಾರಿ ನೌಕರ ಮಾರಣಾಂತಿಕ ಕಾಯಿಲೆಗಳು ಆದಂತಹ ಕ್ಷಯ, ಕ್ಯಾನ್ಸರ್ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲಿದರೆ ಅವನ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 360 ದಿವಸಗಳವರಗೆ ಗಳಿಸದ ರಜೆಯನ್ನು ಮಂಜೂರು ಮಾಡಬಹುದು.


ಆದರೆ ಈ ರಜೆ ಪಡೆಯಲು ಷರತ್ತುಗಳು ಇವೆ. ನೌಕರನು ಒಂದು ವರ್ಷಕ್ಕಿಂತ ಕಡಿಮೆಯಿಲ್ಲದೇ ನಿರಂತರ ಸೇವೆಯನ್ನು ಸಲ್ಲಿಸಿರಬೇಕು. ಸರ್ಕಾರಿ ನೌಕರನು ಯಾವ ಹುದ್ದೆಯಿಂದ ರಜೆಯ ಮೇಲೆ ತೆರಳುವನೋ ಆ ಹುದ್ದೆಯು ಅವನು ಕೆಲಸಕ್ಕೆ ಹಿಂತಿರುಗುವತನಕ ಮುಂದುವರೆಯುವ ಸಾಧ್ಯತೆಯಿರಬೇಕು.



ಅಂಥ ರಜೆ ಮಂಜೂರಾತಿಯ ಕೋರಿಕೆಯನ್ನು ಜಿಲ್ಲೆಯ ಸಿವಿಲ್ ಸರ್ಜನ್ ಅಥವಾ ಜಿಲ್ಲಾ ವೈದ್ಯಾಧಿಕಾರಿಯ ದರ್ಜೆಗೆ ಕಡಿಮೆ ಇರದ ಸಂಬಂಧಪಟ್ಟ ಕಾಯಿಲೆಯ ತಜ್ಞನು ನೀಡಿದ ವೈದ್ಯಕೀಯ ಪ್ರಮಾಣ ಪತ್ರವು ಸಮರ್ಥಿಸಬೇಕು ಹಾಗೂ ಶಿಫಾರಸ್ಸು ಮಾಡಿರುವ ರಜೆ ಮುಕ್ತಾಯವಾದ ಮಲೆ ಸರ್ಕಾರಿ ನೌಕರನು ಗುಣಮುಖನಾಗುವ ಸಂಭವವಿದೆ ಎಂಬುದನ್ನು ಪ್ರಮಾಣ ಪತ್ರವು ನಿರ್ದಿಷ್ಟಪಡಿಸಬೇಕು.


ಶಿಶುಪಾಲನ ರಜೆಯ ವಿವರಗಳು

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಷರತ್ತುಗಳಿಗೆ ಒಳಪಟ್ಟು ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 180 ದಿನಗಳ ಶಿಶುಪಾಲನ ರಜೆ ನೀಡಬಹುದು. ಮಹಿಳಾ ಸರ್ಕಾರಿ ನೌಕರರು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೇ ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗೆ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಪ್ರತಿ ಬಾರಿಯೂ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳಿಗಿಂದ ಕಡಿಮೆ ಇರಬಾರದು. ಬುದ್ಧಿಮಾಂಧ್ಯ/ ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನ ರಜೆಯನ್ನು ಆಯ್ಕೆ ಮಾಡಿಕೊಳ್ಳಬೇಕು.


ಪೂರಕ ದಾಖಲೆಗಳ ಅವಶ್ಯಕತೆ ಇಲ್ಲ, ಸೇವಾ ಪುಸ್ತಕದಲ್ಲಿನ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು. ಈ ಪೂರ್ವದಲ್ಲಿ ಮಂಜೂರಾಗಿರುವ ಯಾವುದೇ ರಜೆಯನ್ನು ಶಿಶುಪಾಲನ ರಜೆಯನ್ನಾಗಿ ಪರಿವರ್ತಿಸತಕ್ಕದ್ದಲ್ಲ.



ಸರ್ಕಾರಿ ನೌಕರರ ಗಳಿಕೆ ರಜೆ

ಸರ್ಕಾರಿ ನೌಕರರ ರಜೆ ನಿಯಮ 113, ರಜಾ (ಬಿಡುವಿರುವ) ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ಗಳಿಕೆ ರಜೆ ವಿವರಗಳಿವೆ. ಬಿಡುವಿರುವ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರನ ಗಳಿಕೆ ರಜೆಯನ್ನು ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳ ಮೊದಲನೇ ದಿನದಂದು 5 ದಿನಗಳಂತೆ ಎರಡು ಕಂತುಗಳಲ್ಲಿ ಅವನ ಗಳಿಕೆ ರಜೆ ಲೆಕ್ಕಕ್ಕೆ ಮುಂಚಿತವಾಗಿ ಜಮಾ ಹಾಕತಕ್ಕದ್ದು.

ಬಿಡುವಿರುವ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರನು ಅರ್ಧವರ್ಷದ ಅವಧಿಯಲ್ಲಿ ಯಾವುದೇ ಅಸಾಧಾರಣ ರಜೆಯನ್ನು ಬಳಸಿಕೊಂಡಿದ್ದರೆ ಅಥವ ಗೈರುಹಾಜರಿಯ ಕೆಲವು ದಿವಸಗಳನ್ನು ಕೆಲಸ ಮಾಡದ ಅಥವ ಕರ್ತವ್ಯವಲ್ಲದ ಅವಧಿಯೆಂದು ಪರಿಗಣಿಸಿದ್ದಲ್ಲಿ ಮುಂದಿನ ಅರ್ಧವರ್ಷದಲ್ಲಿ ಪ್ರಾರಂಭದಲ್ಲಿ ಗಳಿಕೆರಜೆಯನ್ನು ನೀಡುವಾಗ ಗರಿಷ್ಠ 5 ದಿನಗಳ ಅವಧಿಗೆ ಒಳಪಟ್ಟು ಕೆಲಸಮಾಡದ ಅವಧಿಯ 1/30 ಭಾಗದಷ್ಟು ಕಡಿಮೆ ಮಾಡತಕ್ಕದ್ದು.


ಯಾವುದೇ ಸರ್ಕಾರಿ ನೌಕರನು ಅರ್ಧವರ್ಷದ ಮಧ್ಯದಲ್ಲಿ ಸೇವೆಗೆ ಸೇರಿದರೆ ಆ ಅರ್ಧವರ್ಷ ಮುಗಿಯುವ ವರೆಗೆ 5/6 ದರದಲ್ಲಿ ಪ್ರತಿ ಒಂದು ತಿಂಗಳು ಪೂರ್ಣಗೊಂಡ ನಂತರ ಜಮೆ ಕೊಡಬಹುದು. ಸರ್ಕಾರಿ ನೌಕರನು ಬಿಡುವನ್ನು ಭಾಗಶಃ ಬಳಸಿಕೊಂಡಲ್ಲಿ ಬಳಸಿರದ ಬಿಡುವಿನ ದಿವಸಗಳಿಗೆ 30 ದಿವಸಗಳ ಅನುಪಾತದಲ್ಲಿ ಗಳಿಕೆ ರಜೆಯನ್ನು ಪಡೆಯುತ್ತಾನೆ.


ರಜೆಯ ನಿಯಮಗಳು ಅನುಬಂಧ ಬಿ ನಿಯಮ 10

ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಹಾಗೂ ಇಂಡಿಯನ್ ಒಲಂಪಿಕ್ಸ್ ಅಸೋಸಿಯೇಷನ್‌ಗಳಿಂದ ನಡೆಸಲ್ಪಡುವ ಕ್ರೀಡಾಕೂಟಗಳಿಗೆ ಭಾಗವಹಿಸುವ ಸರ್ಕಾರಿ ನೌಕರು ವಾಸ್ತವ ದಿನಗಳಿಗೆ ವಿಶೇಷ ಸಾಂಧರ್ಬಿಕ ರಜೆಯನ್ನು ಮಂಜೂರು ಮಾಡಬಹುದು.

ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಅವರಿಂದ ಸಂಘಟಿಸಲ್ಪಡುವ ಪರ್ವತಾರೋಹಣ ಯಾತ್ರೆಗಳಿಗೆ ಭಾಗವಹಿಸುವ ಸರ್ಕಾರಿ ನೌಕರರು ಒಂದು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳ ಕಾಲಾವಧಿಗೆ ಇಡಿ ಸೇವಾ ಅವಧಿಯಲ್ಲಿ ಒಟ್ಟು 3 ಬಾರಿ ವಿಶೇಷ ಸಾಂಧರ್ಬಿಕ ರಜೆಯನ್ನು ಪಡೆಯಬಹುದು.


ವ್ಯಾಸಕ್ಟಮಿ ಅಥವಾ ಟ್ಯುಬೆಕ್ಟಮಿ ಲೆಪ್ರೋಸ್ಕೋಪಿ ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಸರ್ಕಾರಿ ನೌಕರರಾದ ಗಂಡಸರು ಮತ್ತು ಹೆಂಗಸರಿಗೆ ವೈದ್ಯಾಧಿಕಾರಿಗಳ ಪ್ರಮನಾಣ ಪತ್ರದ ಆಧಾರದ ಮೇಲೆ 7 ದಿನಗಳು ವಿಶೇಷ ಸಾಂಧರ್ಭಿಕ ರಜೆಯನ್ನು ಮಂಜೂರು ಮಾಡಬಹುದು.


ಮಹಿಳಾ ಶಿಕ್ಷಕರ ರಜೆ ವಿವಿರಗಳು

ಒಂದು ಶಾಲೆಯಲ್ಲಿ 2 ಅಥವಾ 2ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕರು ರಜೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಗುವಿನ ಶಿಕ್ಷಕಿಗೆ ಸೇವಾ ಪುಸ್ತಕದಲ್ಲಿ ಈಗಾಗಲೇ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ರೊಟೇಷನ್ ಪದ್ಧತಿಯಲ್ಲಿ ಆದ್ಯತೆಯ ಮೇಲೆ ರಜೆ ಮಂಜೂರು ಮಾಡುವುದು.

ತಾಲೂಕಿನಲ್ಲಿ ರಜೆ ಮಂಜೂರಾತಿ ಕೋರಿರುವ ಎಲ್ಲಾ ಅರ್ಜಿಗಳನ್ನು ಪ್ರಾಧಿಕಾರವು ಅರ್ಹತೆಯ ಆಧಾರದ ಮೇಲೆ ತೀರಾ ಅನಿವಾರ್ಯತೆ ಇರುವ ಹಾಗೂ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ ಆದ್ಯತೆಯ ಮೇಲೆ ಮಂಜೂರಾತಿಗೆ ಕ್ರಮವಹಿಸುವುದು.


ಸದರಿ ಸೌಲಭ್ಯವನ್ನು ಹಕ್ಕು ಎಂಬುದಾಗಿ ಪರಿಗಣಿಸಿ ಕ್ಲೇಮು ಮಾಡಲು ಅವಕಾಶ ಇರುವುದಿಲ್ಲ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಸದರಿ ರಜೆಯನ್ನು ಕೋರಿ ಅರ್ಜಿ ಸಲ್ಲಿಸಿದಾಗ ರಜೆ ಮಂಜೂರಾತಿ ಪ್ರಾಧಿಕಾರವು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಜೆ ಮಂಜೂರಾತಿಗಾಗಿ ಕ್ರಮವಹಿಸಬಹುದಾಗಿದೆ.


ಪ್ರತಿ ಬಾರಿ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳು ಗರಿಷ್ಠ 30 ದಿನಗಳು ಮೀರದಂತೆ ಇರಬೇಕು.



logoblog

Thanks for reading MINISTER Answer Regarding Government employees Childcare leave

Previous
« Prev Post

No comments:

Post a Comment

If You Have any Doubts, let me Comment Here