KPSC Departmental Passing Certificate
Departmental Examination Pass Certificates
ರಾಜ್ಯ ಸರ್ಕಾರಿ ನೌಕರರು ಬಡ್ತಿ ಸೇರಿದಂತೆ ವಿವಿಧ ಭತ್ಯೆ ಪಡೆಯೋದಕ್ಕೆ ಇಲಾಖಾ ಪರೀಕ್ಷೆ ಪಾಸ್ ಮಾಡುವದು ಕಡ್ಡಾಯ. ಹೀಗೆ ಇಲಾಖಾ ಪರೀಕ್ಷೆಗೆ ಹಾಜರಾಗಿ, ಉತ್ತೀರ್ಣರಾಗಿರುವಂತ ಅಭ್ಯರ್ಥಿಗಳಿಗೆ ಉತ್ತೀರ್ಣತಾ ಪ್ರಮಾಣಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗ ಇದೀಗ ಬಿಡುಗಡೆ ಮಾಡಿದೆ.
ಈ ಕುರಿತಂತೆ ಕರ್ನಾಟಕ ಲೋಕಸೇವಾ ಆಯೋಗದ ಉಪ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ (ವಿಷಯ ಸಂಕೇತ-47ಮತ್ತು73 ಹೊರತುಪಡಿಸಿ) ಅಭ್ಯರ್ಥಿಗಳು ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು ಆಯೋಗದ "http://kpsc.kar.nic.in" ಗೆ ಭೇಟಿ ನೀಡುವುದು.
ಆ ನಂತರ "Departmental Examination 2021 II session" ಲಿಂಕ್ ನಲ್ಲಿ ಉತ್ತೀರ್ಣತಾ ಪತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಡಿಜಿಲಾಕರ್ ಅಕೌಂಟ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಿ ನಂತರ ಅಭ್ಯರ್ಥಿಯ ನೋಂದಣಿ ಸಂಖ್ಯೆ (7 ಅಂಕಿಗಳು) ಯನ್ನು Username ಆಗಿ ಮತ್ತು ಪಾನ್‌ಕಾರ್ಡ್ ನಂಬರ್‌ನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಿ ಪ್ರಮಾಣ ಪತ್ರಗಳನ್ನು ಲಾಗಿನ್ ಆದ 3 ರಿಂದ 4 ಗಂಟೆಗಳೊಳಗಾಗಿ ಪಡೆಯಬಹುದಾಗಿದೆ ಎಂದಿದ್ದಾರೆ.
ಈ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹಂತದಲ್ಲಿ ಯಾವುದಾದರೂ ತಾಂತ್ರಿಕ ದೋಷ ಉಂಟಾದಲ್ಲಿ ಸೇವಾಸಿಂಧು ಸಹಾಯವಾಣಿ ಸಂಖ್ಯೆಗಳು 080-22279954, 8088304855 ಮತ್ತು 9380206704 ಅನ್ನು ಸಂಪರ್ಕಿಸಬಹುದು. ಅಭ್ಯರ್ಥಿಗಳು ದಿನಾಂಕ:07.12.2023 ರಿಂದ ಮೇಲಿನ ವಿಧಾನವನ್ನು ಅನುಸರಿಸಿ ಉತ್ತೀರ್ಣತಾ ಪ್ರಮಾಣ ಪತ್ರಗಳನ್ನು Download ಮಾಡಿಕೊಳ್ಳಬಹುದು ಎಂದಿದ್ದಾರೆ.
No comments:
Post a Comment
If You Have any Doubts, let me Comment Here