Karnataka State 7th Pay Commission KSGEA President Shadakshari Sir Speech
ರಾಜ್ಯ ಸರ್ಕಾರವು 7 ನೇ ವೇತನ ಆಯೋಗದ ಗಡುವು ಮತ್ತೆ 6 ತಿಂಗಳು ವಿಸ್ತರಿಸಿದೆ. ವೇತನ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ನೌಕರರಿಗೆ ರಾಜ್ಯ ಸರ್ಕಾರದ ನಿಲುವು ನಿರಾಸೆ ಮೂಡಿಸಿದೆ ಎಂಬ ಹೇಳಿಕೆಗೆ ನೌಕರರ ಸಂಘದ ಅಧ್ಯಕ್ಷರಾದ ಮಾನ್ಯ ಶ್ರೀ ಷಡಕ್ಷರಿ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಬಿಜೆಪಿ ಸರ್ಕಾರವು 2022 ರ ನವೆಂಬರ್ 19 ರಂದು ಒಂದು ಆಯೋಗವನ್ನು ರಚನೆ ಮಾಡಿತ್ತು. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಈ ಆಯೋಗ ರಚನೆಯಾಗಿತ್ತು. 6 ತಿಂಗಳಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿತ್ತು. ನವೆಂಬರ್ 19 ಕ್ಕೆ ಆಯೋಗದ ಅವಧಿ ಅಂತ್ಯ ವಾಗಲಿದೆ. ಆದರೆ ಇದರ ಮಧ್ಯೆ ಈ ಅವಧಿಯನ್ನು ಮತ್ತೆ 6 ತಿಂಗಳು ಕಾಲ ಸರ್ಕಾರ ಹೆಚ್ಚು ಮಾಡಿದೆ. ಹೀಗಾಗಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ.
ಮಾನ್ಯ ರಾಜ್ಯಾಧ್ಯಕ್ಷರ ಹೇಳಿಕೆ ವೀಕ್ಷಿಸಲು ಈ ಕೆಳಗಿನ ಯೂಟ್ಯೂಬ್ ವಿಡಿಯೋ ವೀಕ್ಷಿಸಿ.
No comments:
Post a Comment
If You Have any Doubts, let me Comment Here