Field Education Officer's Office Muddebihal G. Regarding disciplinary action against office staff in case of irregular payment of salary to teachers in Vijayapur area
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುದ್ದೇಬಿಹಾಳ ಜಿ. ವಿಜಯಪುರ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ನಿಯಮಬಾಹಿರವಾಗಿ ವೇತನ ಪಾವತಿಸಿದ ಪ್ರಕರಣದಡಿ ಕಚೇರಿ ಸಿಬ್ಬಂದಿ ಮೇಲಿನ ಶಿಸ್ತು ಕ್ರಮದ ಕುರಿತು
ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುದ್ದೇಬಿಹಾಳ ವ್ಯಾಪ್ತಿಯಲ್ಲಿನ ಶಿಕ್ಷಕರ ನಿಯಮಬಾಹಿರ ಅಮಾನತ್ತ ಹಾಗೂ ಕೆಲಸಕ್ಕೆ ಗೈರು ಉಳಿದ ಶಿಕ್ಷಕರಿಗೆ ವೇತನ ಪಾವತಿ ಮತ್ತು ನಿವೃತ್ತಿ ಹೊಂದಿದ ಶಿಕ್ಷಕರಿಗೂ ಸಹ ವೇತನ ಪಾವತಿ ಆದ ಬಗ್ಗೆ ಮಾದ್ಯಮದಲ್ಲಿ ಪ್ರಕಟವಾದ ವರದಿ ಆಧರಿಸಿ ಸದರಿ ಕಚೇರಿಯ ತಪಾಸಣೆ ನಡೆಸಿ ಶ್ರೀ ಆನಂದಗೌಡರ ಸ.ಶಿ ಸ.ಹಿ.ಪ್ರಾ.ಶಾಲೆ, ಅಡವಿ ಹುಲಗಬಾಳ ಇವರ ಅಮಾನತ್ತ ಪ್ರಕರಣ, ಶ್ರೀಮತಿ: ಜಹೀದಾಬೇಗಂ ಡಿ ಅಗ್ನಿ ಮು.ಶಿ ಸ.ಹಿ.ಪ್ರಾ.ಉರ್ದು ಶಾಲೆ ಕೊಣ್ಣೂರು, ಇವರ ಅಮಾನತ್ತ ಪ್ರಕರಣ, ಶ್ರೀ: ಟಿ.ಎಸ್. ಸಾತಿಹಾಳ, ನಿವೃತ್ತ ಮುಶಿ ಸ.ಹಿ.ಪ್ರಾ.ಶಾಲೆ ಬಿಟ್ಟೂರು ಇವರು ದಿನಾಂಕ: 31-7-2020 ರಂದು ವಯೋನಿವೃತ್ತಿ ಹೊಂದಿದ್ದರೂ ಸಹಿತ ಅಗತ್ಯ ಸಪ್ಟೆಂಬರ, ಅಕ್ಟೋಬರ-2020 03 ತಿಂಗಳ ವೇತನ ಪಾವತಿಸಿರುವುದು ಈ ಪ್ರಕರಣಗಳಲ್ಲಿ ಸಂಬಂಧಿಸಿದ ಸಿಬ್ಬಂದಿಯಿಂದ ಕರ್ತವ್ಯಲೋಪ ಆಗಿರುವ ಬಗ್ಗೆ ಉಲ್ಲೇಖ [1] ರ ಪ್ರಕಾರ ವರದಿ ಸಲ್ಲಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಕಚೇರಿಯ ಕೆಳಗಿನ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here