ಸರ್ಕಾರಿ ನೌಕರನು ತನ್ನ ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿಯಲ್ಲಿ ಗರಿಷ್ಠ ಮಿತಿಯನ್ನು ದಾಟಿದಾಗ ಆ ನೌಕರನು ಈ ಮಿತಿಯ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಬಡ್ತಿಯ ಪ್ರಮಾಣದಲ್ಲೇ ನಿರ್ದಿಷ್ಟಾವಧಿ ನಂತರ ಮಂಜೂರು ಮಾಡುವ ವೇತನ ಬಡ್ತಿಯನ್ನೇ ಸ್ಥಗಿತ ವೇತನ ಬಡ್ತಿ ಎನ್ನಬಹುದು.
ದಿನಾಂಕ 31-10-79ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 52 ಎಸ್.ಆರ್.ಪಿ. 79ರ ಮೇರೆಗೆ ಸರ್ಕಾರಿ ನೌಕರನು ವೇತನ ಶ್ರೇಣಿಯ ಗರಿಷ್ಠ ಮಿತಿ ದಾಟಿ ವೇತನ ಬಡ್ತಿಯನ್ನು ಎರಡು ವರ್ಷಗಳವರೆಗೆ ಪಡೆಯದಿದ್ದರೆ, ಅವನಿಗೆ ಮೊದಲ ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಅಲ್ಲದೆ, ಎರಡನೇ ಸ್ಥಗಿತ ವೇತನಬಡ್ತಿಯನ್ನು ಮತ್ತೊಂದು ವರ್ಷದ ನಂತರ ನೀಡಬೇಕೆಂದು ಸೂಚಿಸಲಾಗಿತ್ತು. ಈ ನಿಯಮಾವಳಿ ಪ್ರಕಾರ ಸರ್ಕಾರಿ ನೌಕರನು ವಾರ್ಷಿಕ ವೇತನ ಬಡ್ತಿ ಹೊಂದಿದ ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತವನ್ನು ದಾಟಿದ್ದರೆ ಅಂತಹ ನೌಕರನಿಗೆ ಅವನು ಪಡೆದಿದ್ದ ವಾರ್ಷಿಕ ವೇತನ ಬಡ್ತಿಯ ದರದ ಪ್ರಮಾಣದಲ್ಲಿ ದಿನಾಂಕ 1-4-2012ನೇ ಸಾಲಿನ ಎಂಟು ವಾರ್ಷಿಕ ಸ್ಥಗಿತ ವೇತನ ಬಡ್ತಿಗಳನ್ನು ಮಂಜೂರು ಮಾಡಬೇಕು. ಇದನ್ನು ಎಲ್ಲ ಉದ್ದೇಶಗಳಿಗಾಗಿ ‘ವೇತನ’ ಎಂದು ಪರಿಗಣಿಸಲು ತಿಳಿಸಲಾಗಿದೆ.
ಸ್ಥಗಿತ ವೇತನ ಬಡ್ತಿ ಮಂಜೂರಾತಿಗೆ ನಿಬಂಧನೆಗಳು
ಅ) ಸರ್ಕಾರಿ ನೌಕರನು ತೃಪ್ತಿದಾಯಕ ಸೇವಾ ದಾಖಲೆ ಹೊಂದಿರಬೇಕು. ಅಲ್ಲದೆ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪದಿದ್ದರೆ, ಅವನಿಗೆ ಅನ್ವಯವಾಗುವ ಕಾಲಿಕ ವೇತನ ಶ್ರೇಣಿಯಲ್ಲಿ ಸಾಮಾನ್ಯ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರಬೇಕು.
ಆ) ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡುವ ಉದ್ದೇಶಕ್ಕೆ ತೃಪ್ತಿಕರ ಸೇವೆಯ ಸ್ವರೂಪವನ್ನು ಪದೋನ್ನತಿಗೆ ಅರ್ಹತೆಯನ್ನು ಪರಿಗಣಿಸುವ ರೀತಿಯಲ್ಲೇ ನಿರ್ಧರಿಸಬೇಕು.
ಇ) ತೃಪ್ತಿಕರ ಸೇವೆ ಪರಿಗಣಿಸುವಾಗ ಸರ್ಕಾರಿ ನೌಕರನು ಪದೋನ್ನತಿಗೆ ಯಾವುದೇ ಇಲಾಖಾ ಪರೀಕ್ಷೆಗಳನ್ನು ನಿಗದಿಪಡಿಸಿದಲ್ಲಿ, ಅವುಗಳಲ್ಲಿ ತೇರ್ಗಡೆಯಾಗಿದ್ದಾನೆಯೇ ಅಥವಾ ಇಲ್ಲವೇ ಎಂಬಂಶವನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ.
ಈ) ಸ್ವಇಚ್ಛೆಯಿಂದ ಪದೋನ್ನತಿ ಬಿಟ್ಟುಕೊಡುವ ಅಥವಾ ಪದೋನ್ನತಿ ನಂತರ ಸ್ವಂತ ಇಚ್ಛೆ ಮೇರೆಗೆ ಹಿಂಬಡ್ತಿಯನ್ನು ಬಯಸುವ ಸರ್ಕಾರಿ ನೌಕರನಿಗೆ ಈ ಸ್ಥಗಿತ ವೇತನ ಬಡ್ತಿಯನ್ನು ನೀಡಬಾರದು.
ಇನ್ನು ಜನವರಿ ಅಥವಾ ಜುಲೈನಲ್ಲಿ ವಾರ್ಷಿಕ ವೇತನ ಬಡ್ತಿ
ಆರನೇ ವೇತನ ಆಯೋಗದ (ಮೊದಲ ಸಂಪುಟ) ವರದಿಯ ಶಿಫಾರಸುಗಳನ್ನು ಅಂಗೀಕರಿಸಿರುವ ರಾಜ್ಯ ಸರಕಾರ, ಸರಕಾರಿ ನೌಕರರಿಗೆ ಇನ್ನು ಮುಂದೆ ಪ್ರತಿ ವರ್ಷ ಜನವರಿ 1 ...
ಆರನೇ ವೇತನ ಆಯೋಗದ (ಮೊದಲ ಸಂಪುಟ) ವರದಿಯ ಶಿಫಾರಸುಗಳನ್ನು ಅಂಗೀಕರಿಸಿರುವ ರಾಜ್ಯ ಸರಕಾರ, ಸರಕಾರಿ ನೌಕರರಿಗೆ ಇನ್ನು ಮುಂದೆ ಪ್ರತಿ ವರ್ಷ ಜನವರಿ 1 ಅಥವಾ ಜುಲೈ 1ರಂದು ವಾರ್ಷಿಕ ವೇತನ ಬಡ್ತಿ ನಿಗದಿಪಡಿಸಲು ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಜನವರಿಯಿಂದ ಜೂನ್‌ವರೆಗೆ ಸೇವೆಗೆ ಸೇರ್ಪಡೆಗೊಂಡ ನೌಕರರಿಗೆ ಜನವರಿ 1 ಹಾಗೂ ಜುಲೈನಿಂದ ಡಿಸೆಂಬರ್‌ವರೆಗೆ ಸೇರ್ಪಡೆಗೊಂಡ ನೌಕರರಿಗೆ ಜುಲೈ 1ರಂದೇ ವಾರ್ಷಿಕ ವೇತನ ಬಡ್ತಿ ಲಭ್ಯವಾಗಲಿದೆ. ಸೇವೆಗೆ ಸೇರ್ಪಡೆಗೊಂಡ ದಿನಾಂಕ ಆಧರಿಸಿ ಸಂದರ್ಭಾನುಸಾರ ಆಯಾ ತಿಂಗಳಲ್ಲಿ ವಾರ್ಷಿಕ ವೇತನ ಬಡ್ತಿ ನೀಡಲಾಗುತ್ತಿತ್ತು. ಈ ಸಂಬಂಧ ಆರ್ಥಿಕ ಇಲಾಖೆಯ (ಸೇವೆ-1) ಉಪ ಕಾರ್ಯದರ್ಶಿ ಜಿ.ಬಿ.ಹೇಮಣ್ಣ ಆದೇಶ ಹೊರಡಿಸಿದ್ದಾರೆ.
Click here to Download the PDF file
No comments:
Post a Comment
If You Have any Doubts, let me Comment Here