Compulsory retirement order for school education department officials under corruption charges
ಭ್ರಷ್ಟಾಚಾರ ಆರೋಪದಡಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಂತ ಶಿಕ್ಷಕರೊಬ್ಬರು, ಸತತ 11 ತಿಂಗಳು ಶಾಲೆಗೆ ಗೈರಾಗಿದ್ದರು. ಹೀಗಿದ್ದರೂ ಅವರಿಗೆ ವೇತನ ಬಿಡುಗಡೆ ಮಾಡಲಾಗಿತ್ತು. ಹೀಗೆ ಸತತ ಗೈರಾಗಿದ್ದಂತ ಶಿಕ್ಷಕನಿಗೆ ವೇತನ ಬಿಡುಗಡೆ ಮಾಡಿದಂತ ಬಿಇಓ, ಎಫ್ ಡಿಎಯನ್ನು ಶಿಕ್ಷಣ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದೆ.
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೇಣುಕಾಚಾರ್ಯ ಎಂಬುವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅವರು 2011ರ ಅಕ್ಟೋಬರ್ ನಿಂದ 2012ರ ಆಗಸ್ಟ್ ವರೆಗೆ ಶಾಲೆಗೆ ಸತತ ಗೈರಾಗಿದ್ದರು.
ಶಾಲೆಗೆ ಸತತ ಗೈರಾಗಿದ್ದರೂ ಶಿಕ್ಷಕ ರೇಣುಕಾಚಾರ್ಯ ಅವರಿಗೆ ಮಾತ್ರ ವೇತನವನ್ನು ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿತ್ತು.
ಈ ದೂರು ಆಧರಿಸಿ ಶಿಕ್ಷಣ ಇಲಾಖೆಯಿಂದ ತನಿಖೆಗೆ ಒಳಪಡಿಸಿದಾಗ ಬಿಇಓ ಚಿತ್ರಶೇಖರ ದೇಹಲಮಡಿ ಹಾಗೂ ಎಫ್ ಡಿಎ ಲೋಕಶೇಖರಪ್ಪ ತಪ್ಪೆಸಗಿರುವುದು ಸಾಭೀತಾಗಿತ್ತು. ಗುರುರಾಜ ರಾವ್ ಕುಲಕರ್ಣಿ ಸೇರಿದಂತೆ ಮೂವರನ್ನು ಇದೀಗ ಶಆಲಾ ಶಿಕ್ಷಣ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಿದೆ.
ಅಂದಹಾಗೆ ಶಾಲೆಗೆ ಸತತ ಗೈರಾಗಿದ್ದಂತ ಶಿಕ್ಷಕ ರೇಣುಕಾಚಾರ್ಯ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗ ಅವರ ಸಹೋದರರಾಗಿದ್ದಾರೆ. ಇದೇ ಕಾರಣಕ್ಕೆ ಶಾಲೆಗೆ 11 ತಿಂಗಳು ಗೈರಾಗಿದ್ರೂ ವೇತನ ಪಾವತಿಸಲಾಗಿದೆ ಎನ್ನಲಾಗುತ್ತಿದೆ. ಆದ್ರೇ ತನಿಖೆಯಲ್ಲಿ ಸಾಭೀತಾದ ಹಿನ್ನಲೆಯಲ್ಲಿ ಮೂವರನ್ನು ಶಾಲಾ ಶಿಕ್ಷಣ ಇಲಾಖೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಿದೆ.
No comments:
Post a Comment
If You Have any Doubts, let me Comment Here