Sim Card Buying New Rules
New Rules for Buying Sim cards india no more extra sim. india ban 52 Lakh sim card for Cyber Crime Cases
The government is leaving no stone unturned in its ongoing efforts to combat the rising tide of scams and frauds. To protect people from falling prey to fraudulent activities, the Department of Telecommunications has announced changes in the rules governing the purchase of SIM cards. These new rules will take effect nationwide from December 1, 2023, with the aim of putting an end to the excessive purchase of SIM cards using a single ID.
ದೇಶದಲ್ಲಿ ಅಂತರ್ಜಾಲ ವಂಚನೆ(Cyber Crime) ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಹೊಸ ಸಿಮ್ ಕಾರ್ಡ್ ಖರೀದಿಗೆ (New Sim Card Purchase Rules) ಹೊಸ ರೂಲ್ಸ್ ಜಾರಿ ಮಾಡಿದೆ. ಹೊಸ ನಿಯಮದ ಮೂಲಕ ಹೆಚ್ಚುವರಿ ಸಿಮ್ ಬಳಕೆಗೆ ನಿಯಮ ರೂಪಿಸಲಾಗಿದೆ.
ಹಾಗಾದ್ರೆ ಒಬ್ಬ ವ್ಯಕ್ತಿ ಒಂದು ದಾಖಲೆಯಲ್ಲಿ (ID Card) ಎಷ್ಟು ಸಿಮ್ ಪಡೆಯಬಹುದು ಅನ್ನೋ ಡಿಟೇಲ್ಸ್ ಇಲ್ಲಿದೆ.
2023 ರ ಡಿಸೆಂಬರ್ 1 ರಿಂದ ಹೊಸ ರೂಲ್ಸ್ ಜಾರಿಗೆ ಬರುತ್ತಿದೆ. ಈ ನಿಯಮದ ಪ್ರಕಾರ ಸಿಮ್ ಕಾರ್ಡ್ ಖರೀದಿಗೆ ದೇಶದಾದ್ಯಂತ ಹೊಸ ನಿಮಯ ಒಳಪಡಲಿದೆ. ಇನ್ಮುಂದೆ ಒಂದು ಐಡಿಯನ್ನು ಬಳಸಿಕೊಂಡು ಅನಿಯಮಿತ ಸಿಮ್ ಖರೀದಿಗೆ ಅವಕಾಶ ನಿರಾಕರಿಸಲಾಗುತ್ತದೆ. 2023 ರ ಅಕ್ಟೋಬರ್ 1 ರಿಂದಲೇ ಈ ರೂಲ್ಸ್ ಜಾರಿಗೆ ಬರಬೇಕಾಗಿತ್ತು.
ಆದರೆ ಕೇಂದ್ರ ಸರಕಾರ ದೂರಸಂಪರ್ಕ ಇಲಾಖೆ ಟೆಲಿಕಾಂ ಕಂಪೆನಿಗಳಿಗೆ ಹೆಚ್ಚುವರಿಯಾಗಿ 2 ತಿಂಗಳ ಕಾಲಾವಕಾಶವನ್ನು ನೀಡಿತ್ತು. ಹೊಸ ರೂಲ್ಸ್ ಜಾರಿಯಾದ ನಂತರ ಸಿಮ್ ಖರೀದಿ, ಮಾರಾಟಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಅದ್ರಲ್ಲೂ ಸಿಮ್ ಮಾರಾಟಗಾರರಿಗೆ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ.
52 ಲಕ್ಷ ಸಿಮ್ ಕಾರ್ಡ್ ನಿಷೇಧ :
ಈ ಹಿಂದೆಯೇ ಕೇಂದ್ರ ಸಚಿವ ಅಶ್ಚಿನ್ ವೈಷ್ಣವ್ ಅವರು ಹೊಸ ನಿಯಮದ ಕುರಿತು ಮಾತನಾಡಿದ್ದಾರೆ. ಪ್ರಮುಖವಾಗಿ ಸೈಬರ್ ವಂಚನೆಯನ್ನು ತಡೆಯುವ ಸಲುವಾಗಿ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ವಂಚನೆ ಕರೆಗಳ ದೂರಿನ ಆಧಾರದ ಮೇಲೆ ಸುಮಾರು 52 ಲಕ್ಷ ಸಿಮ್‌ಗಳನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ.
ಡಿಜಿಟಲ್ ವಂಚನೆ ಪ್ರಕರಣಗಳ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ. ಹೊಸ ನಿಯಮದ ಪ್ರಕಾರ ಅನಿಯಮಿತವಾಗಿ ಸಿಮ್‌ಗಳ ಮಾರಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಹೆಚ್ಚುವರಿ ಸಿಎಂ ಕಾರ್ಡ್‌ಗಳನ್ನು ಏಕಕಾಲದಲ್ಲಿ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಅನಧಿಕೃವಾಗಿ ಸಿಮ್ ಮಾರಾಟ ಮಾಡಿದ 67,000 ಡೀಲರ್ ಗಳ ಮೇಲೆ ಸರಕಾರವು ನಿಷೇಧ ಹೇರಿದೆ.
ಹಳೆಯ ಸಂಖ್ಯೆ ಹೊಸ ಸಿಮ್ ಕಾರ್ಡ್‌ಗೂ ಹೊಸ ರೂಲ್ಸ್ !
ಇನ್ನು ಗ್ರಾಹಕರು ತಮ್ಮ ಬಳಿಯಲ್ಲಿ ಇರುವ ಹಳೆಯ ಮೊಬೈಲ್ ಸಂಖ್ಯೆಯ ಮೇಲೆ ಹೊಸ ಸಿಎಮ್ ಖರೀದಿ ಮಾಡಬೇಕು ಎಂದು ಬಯಸಿದ್ರೆ ಅಂತ ಸಂದರ್ಭದಲ್ಲಿ ಹೊಸ ನಿಯಮ ಪಾಲಿಸ ಬೇಕಾಗಿದೆ. ಹೊಸ ಸಿಎಮ್ ಪಡೆದುಕೊಳ್ಳುವ ವೇಳೆಯಲ್ಲಿ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಡೇಟಾ ಸಂಗ್ರಹ ಮಾಡಲಾಗುತ್ತದೆ.
ಒಂದು ಐಡಿ ಪ್ರೂಫ್‌ಗೆ ಎಷ್ಟು ಸಿಮ್ ಕಾರ್ಡ್ ಖರೀದಿಸಬಹುದು ?
ಇನ್ನು ಸಿಮ್ ಕಾರ್ಡ್ ಖರೀದಿಗೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿಯಾಗಲಿದೆ. ಹಿಂದೆಲ್ಲಾ ಒಬ್ಬ ವ್ಯಕ್ತಿ ಸರಕಾರದ ಯಾವುದೇ ದಾಖಲೆಯನ್ನು ನೀಡಿ ಎಷ್ಟು ಸಿಎಮ್ ಬೇಕಾದ್ರೂ ಖರೀದಿ ಮಾಡಬಹುದಾಗಿತ್ತು. ಆದ್ರೀಗ ಸರಕಾರ ಸಿಎಂ ಖರೀದಿಗೂ ಹೊಸ ರೂಲ್ಸ್ ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಒಂದು ದಾಖಲೆಯನ್ನು ಬಳಸಿ ೯ಸಿಎಮ್ ಖರೀದಿ ಮಾಡಬಹುದು.
ಇದಕ್ಕಿಂತ ಹೆಚ್ಚಿನ ಸಿಎಮ್ ಖರೀದಿ ಮಾಡುವುದು ಅಪರಾಧ. ಮಾತ್ರವಲ್ಲ ಗ್ರಾಹಕರು ತಮ್ಮ ಸಿಎಮ್ ಕಾರ್ಡ್ ಬಳಕೆ ಮಾಡುವುದನ್ನು ನಿಲ್ಲಿಸಿದ್ರೆ. ಆ ಸಂಖ್ಯೆಯನ್ನು 90 ದಿನಗಳ ನಂತರವೇ ಮತ್ತೊಬ್ಬರ ಗ್ರಾಹಕರಿಗೆ ಟೆಲಿಕಾಂ ಕಂಪೆನಿಗಳು ಮಾರಾಟ ಮಾಡಬಹುದು ಎಂದು ಹೊಸ ನಿಯಮದಲ್ಲಿ ತಿಳಿಸಲಾಗಿದೆ.
No comments:
Post a Comment
If You Have any Doubts, let me Comment Here