In GPSTR recruitment
Regarding submission of details of selected candidates by submitting income certificate of parents
2022ರ 15000 GPSTR ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಮಾರ್ಚ್ 8, 2023 ಆಯ್ಕೆ ಪಟ್ಟಿಯಂತೆ ನೇಮಕಾತಿ ಅಂತಿಮಗೊಳಿಸಲು ಹೈಕೋರ್ಟ್ ಸೂಚನೆ ನೀಡಿದೆ. ಸರ್ಕಾರದ ಅಧಿಸೂಚನೆಯಂತೆ ಆದಾಯ ಪ್ರಮಾಣ ಪತ್ರ ಸಲ್ಲಿಸಿದವರ ಆಯ್ಕೆ ಅಂತಿಮವಾಗಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಆಯ್ಕೆ ಮುಂದೂಡಲಾಗಿದೆ. ನೊಂದ ಅಭ್ಯರ್ಥಿಗಳು ಕೆಎಟಿಯಲ್ಲಿ ದಾವೆ ಹೂಡಬಹುದಾಗಿದೆ. ದಾವೆ ಇತ್ಯರ್ಥವಾಗುವವರೆಗೆ ವಿವಾದಿತ ಅಭ್ಯರ್ಥಿಗಳ ಆಯ್ಕೆ ಮುಂದೂಡಿಕೆ ಆಗಿರುತ್ತದೆ.
ಜೂನ್ 8, 2023 ಆಯ್ಕೆ ಪಟ್ಟಿಯಲ್ಲಿ 450 ಅಭ್ಯರ್ಥಿಗಳ ಬದಲಾವಣೆ ಆಗಿದೆ. ಹೊಸ ನೀತಿಯಲ್ಲಿ 450 ಅಭ್ಯರ್ಥಿಗಳಿಗೆ ಬದಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕೆಎಟಿ ಆದೇಶದ ಬಳಿಕ ಬದಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಹಿಂದುಳಿದ ವರ್ಗದಲ್ಲಿ ಪರಿಗಣಿಸುವಾಗ ವಿವಾಹಿತ ಮಹಿಳೆಯರಿಗೆ ಪತಿಯ ಆದಾಯ ಪರಿಗಣನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ನಿಯಮ ಅನ್ವಯಿಸಿತ್ತು.
ಕೋರ್ಟ್ ತೀರ್ಪಿನ ನಂತರ ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ಇವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರುಗಳಿಗೆ ಪೋಷಕರ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿ ಆಯ್ಕೆಯಾಗಿರುವ ವಿವಾಹಿತ ಮಹಿಳೆಯರ ವಿವರಗಳನ್ನು ದಿನಾಂಕ 16-10-2023ರೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅಲ್ಲಿ ಇರುವ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here