Additional select list for the post of First Division Assistant 2017 is published
ಅಧಿಸೂಚನೆ ದಿನಾಂಕ 01-09-2017ರಲ್ಲಿ ಅಧಿಸೂಚಿಸಲಾದ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆಯ ಸಹಾಯಕರ ಉಳಿಕೆ ಮೂಲ ವೃಂದದ 810 ಮತ್ತು ಹೈದರಾಬಾದ್ ಕರ್ನಾಟಕ ವೃಂದದ 150 ಒಟ್ಟು 960 ಹುದ್ದೆಗಳ ನೇಮಕಾತಿಗೆ ದಿನಾಂಕ 02-06-2020ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಂತೆ ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳು 1978ರನ್ವಯ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿಗೆ ಶೇ.10ರಷ್ಟು ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಿ ದಿನಾಂಕ 28-03-2023ರಂದು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತ್ತು. ಪ್ರಥಮ ಹಂತದಲ್ಲಿ ಸದರಿ ಹುದ್ದೆಗಳ ನೇಮಕಾತಿಗೆ ಉಳಿಕೆ ಮೂಲ ವೃಂದದ 17 ನೇಮಕಾತಿ ಪ್ರಾಧಿಕಾರಗಳಿಗೆ 78 ಹುದ್ದೆಗಳನ್ನು ಮತ್ತು ಹೈದರಾಬಾದ್ ಕರ್ನಾಟಕ ವೃಂದದ 8 ನೇಮಕಾತಿ ಪ್ರಾಧಿಕಾರಗಳಿಗೆ 17 ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಉಲ್ಲೇಖ 3ರಲ್ಲಿ ಪ್ರಕಟಿಸಲಾಗಿರುತ್ತದೆ.
ಮುಂದುವರೆದು 2ನೇ ಹಂತವಾಗಿ ಉಳಿಕೆ ಮೂಲ ವೃಂದದ 9 ಮತ್ತು ಹೈದರಾಬಾದ್ ಕರ್ನಾಟಕ ವೃಂದದ 4 ನೇಮಕಾತಿ ಪ್ರಾಧಿಕಾರಗಳಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆ ಪಟ್ಟಿಗಾಗಿ ಪ್ರಸ್ತಾವನೆಗಳು ಸ್ವೀಕೃತವಾಗಿದ್ದು, ನಿಯಮಾನುಸಾರ ಶೇ.10ರ ವರ್ಗೀಕರಣಕ್ಕೆ ಸೀಮಿತಗೊಳಿಸಿ ಇಲಾಖಾ ಪ್ರಸ್ತಾವನೆಗಳ ಕಾಲಾನುಕ್ರಮಣಿಕೆ ಅನುಸಾರ ಉಳಿಕೆ ಮೂಲ ವೃಂದದ 5 ನೇಮಕಾತಿ ಪ್ರಾಧಿಕಾರಗಳಿಗೆ 12 ಹುದ್ದೆಗಳು ಮತ್ತು ಹೈದರಾಬಾದ್ ಕರ್ನಾಟಕ ವೃಂದದ 1 ನೇಮಕಾತಿ ಪ್ರಾಧಿಕಾರದ 7 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
No comments:
Post a Comment
If You Have any Doubts, let me Comment Here