Cancelled Suspended Ration Card List
ಪ್ರತಿಯೊಬ್ಬರಿಗೂ ಪಡಿತರ ಚೀಟಿ ಹಾಗೂ ಆಧಾರ್‌ಕಾರ್ಡ್ (Ration Card, Aadhaar Card) ಮೌಲ್ಯ ಇನ್ನಷ್ಟು ಹೆಚ್ಚಿಗೆ ಆಗಿದೆ. ಇದಕ್ಕೆ ಕಾರಣ ಸರ್ಕಾರದ ಗ್ಯಾರಂಟಿ ಯೋಜನೆಗಳು (Government Guarantee Scheme) ಮತ್ತು ಇತರೆ ಪ್ರಮುಖ ದಾಖಲಾತಿಗಳನ್ನು ಸಿದ್ದ ಮಾಡಿಕೊಳ್ಳುವದಕ್ಕೆ. ಈ ನಡುವೆ ಗೃಹ ಲಕ್ಷ್ಮಿ ಯೋಜನೆಗೆ (Gruhlaxmi scheme) ಪಡಿತರ ಚೀಟಿ ಕಡ್ಡಾಯವಾಗಿದ್ದು, ಸರ್ಕಾರ ಮನೆಯ ಯಜಮಾನಿ ಯಾರು ಎಂದು ತಿದ್ದುಪಡಿ ಮಾಡಲು ಹಲವು ದಿನಗಳವರೆಗೆ ಅವಕಾಶ ಸಹ ನೀಡಿತ್ತು.
ಹೌದು, ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಪಡಿತರ ಪಡೆದುಕೊಳ್ಳಲು ಹಾಗೂ ಸರ್ಕಾರದ ಅನೇಕ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಈ ನಡುವೆ ಸರ್ಕಾರ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೂ ಸಹ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವವರನ್ನು ಪರಿಶೀಲನೆ ಮಾಡಲಾಗಿದೆ. ಅದರಂತೆ ಯಾರ್ಯಾರ ರೇಷನ್ ಕಾರ್ಡ್ ಮನವಿ ತಿರಸ್ಕೃತ ಆಗಿದೆ ಎಂಬ ಲಿಸ್ಟ್ ಅನ್ನು ನೀವು ಸುಲಭವಾಗಿ ವೀಕ್ಷಣೆ ಮಾಡಬಹುದು.
ಹಾಗಿದ್ರೆ, ಬನ್ನಿ ಈಗಾಗಲೇ ನೀವು ರೇಶನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ ಅದು ಯಾವ ಹಂತದಲ್ಲಿದೆ, ನಿಮ್ಮ ಮನವಿ ಸ್ವೀಕಾರ ಆಗಿದೆಯಾ ಅಥವಾ ತಿರಸ್ಕೃತ ಆಗಿದೆಯಾ ಎಂದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ತಿಳಿದುಕೊಳ್ಳಿ.
ಮೊದಲಿಗೆ ಕರ್ನಾಟಕ ಆಹಾರ ಇಲಾಖೆಯ ವೆಬ್ಸೈಟ್'ಗೆ ಬೇಟಿ ನೀಡಿ. ahara.kar.nic.in
2.ನಂತರ ಎಡಗಡೆ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
3.ನಂತರ ಇ ಪಡಿತರ ಚೀಟಿ ( E Ration Card) ಆಪ್ಷನ್ ಮೇಲೆ ಕ್ಲಿಕ್ ಮಾಡಿ.
4. ನಂತರ ಅಲ್ಲಿ ರದ್ದುಗೊಳಿಸಲಾದ / ತಡೆಹಿಡಿಯಲಾದ (Cancelled/ Suspended List) ಪಟ್ಟಿಯ ಮೇಲೆ ಕ್ಲಿಕ್ ಮಾಡಿ.
5.ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ .
6. ನಿಮ್ಮ ತಾಲೂಕು ಆಯ್ಕೆ ಮಾಡಿ.
7. ತಿಂಗಳು ಮತ್ತು ವರ್ಷ ಸೆಲೆಕ್ಟ್ ಮಾಡಿ.
8.ನಂತರ Go ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ತಾಲೂಕಿನಲ್ಲಿ ರದ್ದುಪಡಿಸಲಾದ ಎಲ್ಲ ಪಡಿತರ ಚೀಟಿ ಹೊಂದಿದವರ ಮಾಹಿತಿ ದಿನಾಂಕ ಮತ್ತು ರದ್ದತಿ ಕುರಿತು ಇತರೆ ಪ್ರಮುಖ ಮಾಹಿತಿ ದೊರೆಯುತ್ತದೆ.
How to check Cancelled or Suspended List of Karnataka Ration Card?
Select 'Show Cancelled/ Suspended List' under 'e-Ration Card' option.
Enter the required details.
Click on 'Go' option.
A list will appear that shows the names of rejected applicants along with the reasons for rejection.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here