Allow correction of 'SSLC marks card names in schools
10ನೇ ತರಗತಿಯ ವಿದ್ಯಾರ್ಥಿಗಳಿಗೆ ( SSLC Students ) ವರ್ಷಕ್ಕೆ ಮೂರು ಬಾರಿ ವಾರ್ಷಿಕ ಪರೀಕ್ಷೆಯಂತ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿತ್ತು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಈ ಕ್ರಮ ಕೈಗೊಂಡಿತ್ತು. ಇದೀಗ ಮತ್ತೊಂದು ಕ್ರಮವಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ( SSLC Marks Card ) ಶಾಲೆಗಳಲ್ಲಿಯೇ ತಿದ್ದುಪಡಿ ಮಾಡಿಕೊಳ್ಳೋದಕ್ಕೆ ಅವಕಾಶ ನೀಡಿ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ.
ಹೌದು ಶಿಕ್ಷಣ ಇಲಾಖೆಯಿಂದ ( Education Department ) ವಿದ್ಯಾರ್ಥಿ ಸ್ನೇಹಿ ಕ್ರಮಕ್ಕೆ ಒತ್ತು ನೀಡೋ ಸಲುವಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ ತಿದ್ದುಪಡಿಗೆ ಶಾಲೆಯಲ್ಲೇ ಅವಕಾಶ ನೀಡಲಾಗಿದೆ. ಈ ಮೂಲಕ ಬೆಂಗಳೂರು ಕೇಂದ್ರ ಕಚೇರಿಗೆ ವಿದ್ಯಾರ್ಥಿಗಳು ಅಲೆಯೋ ಅಲೆದಾಟವನ್ನು ತಪ್ಪಿಸಿದೆ.
ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಿದ್ದುಪಡಿ ಪ್ರಸ್ತಾವನೆ ಸಲ್ಲಿಸಲು ಲಾಗಿನ್ ಸೌಲಭ್ಯವನ್ನು ನೀಡಲಾಗಿದೆ. ಈ ಲಾಗಿನ್ ಅಡಿಯಲ್ಲಿ ಮುಖ್ಯ ಶಿಕ್ಷಕರು ಲಾಗಿನ್ ಆಗಿ, ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿನ ಹೆಸರು, ತಂದೆ-ತಾಯಿಗಳ ಹೆಸರು, ಜನ್ಮ ದಿನಾಂಕ ಸೇರಿದಂತೆ ಇತರೆ ತಪ್ಪುಗಳಿದ್ದಲ್ಲೇ ಸರಿ ಮಾಡೋದಕ್ಕೆ ಅವಕಾಶ ನೀಡಲಾಗಿದೆ.
ರಾಜ್ಯದ ಎಲ್ಲಾ ಶಾಲೆಗಳ ( School ) ಮುಖ್ಯ ಶಿಕ್ಷಕರು ಸಲ್ಲಿಸೋ ಎಸ್ ಎಸ್ ಎಲ್ ಸಿ ಅಂಕಪಟ್ಟಿ ತಿದ್ದುಪಡಿಯ ಮಾಹಿತಿಯನ್ನು ಪರಿಶೀಲನೆ ನಡೆಸಲಿರುವಂತ ಪರೀಕ್ಷಾ ಮಂಡಳಿಯು, ಅವುಗಳನ್ನು ಸರಿ ಪಡಿಸಲಿದೆ. ಆ ಬಳಿಕ ಸರಿ ಪಡಿಸಲಾದಂತ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಶಾಲೆಗಳಿಗೆ ಕಳುಹಿಸಿ ಕೊಟ್ಟು, ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ಅಲೆದಾಡದಂತೆ ತಲುಪಿಸೋ ಕ್ರಮ ವಹಿಸಲಾಗಿದೆ.
No comments:
Post a Comment
If You Have any Doubts, let me Comment Here