JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, September 30, 2023

Women Reservation Bill 2023

  Jnyanabhandar       Saturday, September 30, 2023

Heading: Women Reservation Bill 2023

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ.

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಶುಕ್ರವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದೆ.

ಈ ಮಸೂದೆಯನ್ನು ಇನ್ನು ಮುಂದೆ ಅಧಿಕೃತ ಸಂವಿಧಾನ ಕಾಯ್ದೆ (106ನೇ ತಿದ್ದುಪಡಿ) ಎಂದು ಕರೆಯಲಾಗುವುದು ಎಂದಿದೆ.

'ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಮೂಲಕ ಪ್ರಕಟಿಸುವ ದಿನಾಂಕದಿಂದ ಮೀಸಲಾತಿ ಜಾರಿಗೆ ಬರಲಿದೆ' ಎಂದು ಹೇಳಲಾಗಿದೆ.

'ಮುಂದಿನ ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆ ನಡೆಯಬೇಕಿರುವುದರಿಂದ ಈ ಕಾಯ್ದೆ ಜಾರಿಗೂ ಪೂರ್ವದಲ್ಲಿ ಕಾನೂನು ಇಲಾಖೆ ಒಂದಷ್ಟು ಸಮಯ ತೆಗೆದುಕೊಳ್ಳಲಿದೆ. ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡನೆ ನಂತರ ಮಹಿಳೆಯರಿಗಾಗಿ ನಿರ್ದಿಷ್ಟ ಕ್ಷೇತ್ರಗಳನ್ನು ಮೀಸಲಿಡಲಾಗುವುದು. ಈ ಮೀಸಲಾತಿ ಮುಂದಿನ 15 ವರ್ಷದವರೆಗೆ ಮುಂದುವರಿಯಲಿದೆ. ನಂತರ ಇದನ್ನು ವಿಸ್ತರಿಸಲು ಸಾಧ್ಯವಿದೆ' ಎಂದು ಸಚಿವಾಲಯ ಹೇಳಿದೆ.

ಈ ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಒಳ ಮೀಸಲಾತಿಯೂ ಇದೆ. ಹಿಂದುಳಿದ ವರ್ಗಗಳಿಗೂ ಮೀಸಲಾತಿ ವಿಸ್ತರಿಸಬೇಕು ಎಂಬುದು ವಿರೋಧ ಪಕ್ಷಗಳ ಬೇಡಿಕೆಯಾಗಿತ್ತು. 1996ರಿಂದ ಈ ಮಸೂದೆ ಜಾರಿಗೆ ಬಹಳಷ್ಟು ಪ್ರಯತ್ನಗಳು ನಡೆದಿದ್ದವು. 2010ರಲ್ಲೂ ಮಸೂದೆ ಮಂಡನೆ ಪ್ರಯತ್ನ ನಡೆದಿತ್ತು. ಆದರೆ ಆಗ ಅದು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲಿಲ್ಲ.

ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ಶೇ 15ರಷ್ಟು ಹಾಗೂ ವಿಧಾನಸಭೆಯಲ್ಲಿ ಶೇ 10ರಷ್ಟು ಮಾತ್ರ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ಸಂಸತ್ ವಿಶೇಷ ಅಧಿವೇಶನದಲ್ಲಿ 'ನಾರಿ ಶಕ್ತಿ ವಂದನಾ ಅಧಿನಿಯಮ'ವನ್ನು ಮಂಡಿಸಿದ್ದರು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಮಸೂದೆಯು ಬಹುಮತದೊಂದಿಗೆ ಅಂಗೀಕಾರಗೊಂಡಿತು.

logoblog

Thanks for reading Women Reservation Bill 2023

Previous
« Prev Post

No comments:

Post a Comment

If You Have any Doubts, let me Comment Here