Farmer Registration and Unified beneficiary InformaTion System -PM-KISAN
ಆತ್ಮೀಯ ರೈತ ಬಾಂಧವರೇ ನಿಮಗೆ ಸಿಹಿ ಸುದ್ದಿ. ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು 2019ರಲ್ಲಿ ರೈತರ ಆರ್ಥಿಕ ಸಬಲತೆಗೆ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಕ್ಕೆ ತಂದರು. ಅವರು ಯೋಜನೆಯಂತೆ ರೈತರಿಗೆ ನೆರವಾಗಲು ವರ್ಷಕ್ಕೆ 3 ಕಂತಿನಂತೆ, ಒಂದು ಕಂತಿಗೆ ₹2000 ಹಣವನ್ನು ಅರ್ಹ ಫಲಾನಭವಿಗಳ ಖಾತೆಗೆ ನೇರವಾಗಿ ಜಮಾ ಮಾಡುತಿದ್ದಾರೆ. ಈಗಾಗಲೇ ರೈತರ ಖಾತೆಗೆ 13ನೇ ಕಂತಿನ ಹಣ ಜಮೆಯಾಗಿದ್ದು, 14ನೇ ಕಂತಿನ ಹಣ ಮುಂದಿನ ತಿಂಗಳಲ್ಲಿ ಬರುವ ನಿರೀಕ್ಷೆ ಇದೆ.
ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಯಾಕೆ ಬಂದಿಲ್ಲ, ಪಿಎಂ ಕಿಸಾನ್ ಹಣ ಬರಲು ಏನು ಮಾಡಬೇಕು ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಕೆ ಕಿಸಾನ್ ಯೋಜನೆಯಿಂದ 4000 ರೂಪಾಯಿ.
ಅದರಂತೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಸರ್ಕಾರದಲ್ಲಿ ಪಿಎಂ ಕಿಸಾನ್ ಯೋಜನೆಯ ಅರ್ಹ ಎಲ್ಲ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದಲೂ ಸಹ ವರ್ಷಕ್ಕೆ ಕೆ ಕಿಸಾನ್ ಯೋಜನೆಯಡಿಯಲ್ಲಿ ₹4000 ನೀಡುವುದಾಗಿ ಘೋಷಣೆ ಮಾಡಿದ್ದರು.
ಅದರಂತೆ ಕಳೆದ ವರ್ಷ ರೈತರ ಖಾತೆಗೆ 4 ಸಾವಿರ ರೂಪಾಯಿಗಳು ಜಮೆ ಆಗಿದ್ದು, 2023ನೇ ಸಾಲಿನ ಕೆ ಕಿಸಾನ್ ಹಣವನ್ನು ಮಾನ್ಯ ಮುಖ್ಯಮಂತ್ರಿಗಳು ಇಂದು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಹಾಗಾಗಿ ರೈತ ಮಿತ್ರರು ಸರ್ಕಾರದ ಅಧಿಕೃತ ವೆಬ್ಸೈಟ್ ಆದಂತಹ Fruits ತಂತ್ರಾಂಶದಲ್ಲಿ ಪಿಎಂ ಕೆಐಡಿ ಮೂಲಕ ತಮ್ಮ ಕಂತಿನ ಹಣವನ್ನು ಪರಿಶೀಲನೆ ಮಾಡಿಕೊಳ್ಳಬಹುದು.
ಪಿಎಂ ಕಿಸಾನ್ 14ನೇ ಕಂತಿನ ಫಲಾನುಭವಿಗಳ ಪಟ್ಟಿಯನ್ನು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ಅಲ್ಲಿ ನೀವು ಸರಳವಾಗಿ ಕೆ ಕಿಸಾನ್ ಹಣದ ಬಗ್ಗೆ ಪರಿಶೀಲನೆ ಮಾಡಬಹುದು.
ಕೆ ಕಿಸಾನ್ ಹಣದ 2000 ಹಣದ ಮಾಹಿತಿಗೆ ಈ ವಿಧಾನವನ್ನು ಅನುಸರಿಸಿ.
1. ಮೊದಲಿಗೆ ನೀವು ಸರ್ಕಾರದ ಅಧಿಕೃತ ಈ ವೆಬ್ಸೈಟ್'ಗೆ ಬೇಟಿ ನೀಡಿ, ಅಲ್ಲಿ Get By Details Aadhar ಎಂದು ಬರುತ್ತದೆ.
2.ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ಕಿಸಾನ್ ಯೋಜನೆಗೆ ನೀಡಿದ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ , Submit ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ನಿಮಗೆ ಪಿಎಂ ಕೆಐಡಿ ನಂಬರ್ ದೊರೆಯುತ್ತದೆ.
3. ಅದನ್ನು ಬರೆದಿಟ್ಟುಕೊಂಡು ನಂತರ ನೀವು ಅಧಿಕೃತ ಜಾಲತಾಣದ ಮುಖಪುಟಕ್ಕೆ ಹಿಂದುರುಗಿ ಅಲ್ಲಿ ಸ್ಥಿತಿ ಪರಿಶೀಲನೆ( Check Status) ಆಯ್ಕೆ ಹುಡುಕಿಕೊಂಡು, ಅದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಬರೆದಿಟ್ಟುಕೊಂಡ ನಂಬರ್ ನಮೂದಿಸಿ, ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಹೆಸರು, ಆಧಾರ್ ಕಾರ್ಡ್ ನಂಬರ್ ಮಾನ್ಯತೆ ಹೊಂದಿದೆ ಇಲ್ಲವೇ ಎಂದು ತೋರಿಸುತ್ತದೆ .
4. ಅದರ ಕೆಳಗೆ ನಿಮ್ಮ ಬ್ಯಾಂಕ್ ಖಾತೆಗೆ ಯಾವ ವರ್ಷ ಎಷ್ಟು ಹಣ ಜಮೆ ಆಗಿದೆ ಅಥವಾ ಇಲ್ಲ ಎಂಬ ಮಾಹಿತಿಯನ್ನು ತೋರಿಸುತ್ತದೆ.
No comments:
Post a Comment
If You Have any Doubts, let me Comment Here