JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Wednesday, October 19, 2022

Why has the PM Kisan money not reached many farmers?

  Jnyanabhandar       Wednesday, October 19, 2022
Why has the money not reached many farmers?


ಹಲವು ರೈತರಿಗೆ ಹಣ ತಲುಪಿಲ್ಲವೇಕೆ?

ಈ ಪ್ರಮಾಣದಲ್ಲಿ ಹಣ ವರ್ಗಾವಣೆ ಆದರೂ ಕೂಡ ಅನೇಕ ರೈತರ ಖಾತೆಗೆ ಕೆಲವು ಕಂತುಗಳ ನೆರವು ಸಂದಾಯವಾಗಿಲ್ಲ. 17-10-2022ರಂದು ವರ್ಗಾವಣೆಯಾದ 12ನೇ ಕಂತಿನ ಮೊತ್ತದಿಂದಲೂ ಬಹಳಷ್ಟು ರೈತರು ವಂಚಿತರಾಗಿದ್ದಾರೆ. ಇಕೆವೈಸಿ ಮಾಡಲು ಮೇಲಿಂದ ಮೇಲೆ ಗಡವು ನೀಡಿದರು ಬಹಳಷ್ಟು ರೈತರು ಈ ಕಾರ್ಯ ಮಾಡಿಲ್ಲ. ಇಕೆವೈಸಿ ಮಾಡಿಯೂ ಕೆಲವು ರೈತರಿಗೆ 12ನೇ ಕಂತಿನ 2000 ತಲುಪಿಲ್ಲ.

ಹೀಗೆ 12ನೇ ಕಂತಿನ ಹಣ ರೈತರ ಖಾತೆಗೆ ತಲುಪದೇ ಇರುವುದಕ್ಕೆ ಹಲವು ಕಾರಣಗಳಿವೆ. ಈ ಕಾರಣಗಳನ್ನು ತಿಳಿಯದೆ ಬಹಳಷ್ಟು ರೈತರು ಪರಿತಪಿಸುತ್ತಿದ್ದಾರೆ. ಗೊಂದಲ ಬೇಡ ನಿಮಗೆ ಯಾಕೆ ಬಂದಿಲ್ಲ? ಅದಕ್ಕೆ ಕಾರಣವೇನು? ಸರಿಪಡಿಸಿಕೊಳ್ಳಲು ಇರುವ ಪರಿಹಾರವೇನು? ಎಂಬುದನ್ನು ಹೀಗೆ ಪರಿಶೀಲಿಸಿಕೊಳ್ಳಿ.
ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ www.pmkisan.gov.in ಪಿಎಂ ಕಿಸಾನ್ ಅಧಿಕೃತ ವೆಬ್ ತಾಣ ತೆರೆದುಕೊಳ್ಳುತ್ತದೆ. ಅದರಲ್ಲಿ Farmers Corner ನಲ್ಲಿ Beneficiary Status ಮೇಲೆ ಒತ್ತಿ. ಬಳಿಕ Mobile Number ಮೇಲೆ Click ಮಾಡಿ, ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು. ಆನಂತರ Captch Type ಮಾಡಿ Get Data ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೂ ಬಂದಿರುವ ಮತ್ತು ಬರದೇ ಇರುವ ಕಂತಿನ ಕುರಿತ ಸಂಪೂರ್ಣ ಮಾಹಿತಿ ಕಾಣಿಸುತ್ತದೆ.

ಮೊಬೈಲ್ ನಂಬರ್ ಬದಲು Farmer Registration ನಂಬರ್ Select ಮಾಡಿ Farmer Registration ನಂಬರ್ ಹಾಕಿ Captch type ಮಾಡಿ Get Data ಮೇಲೆ ಕ್ಲಿಕ್ ಮಾಡಿಯೂ ಕೂಡ ಪಿಎಂ ಕಿಸಾನ್ ಯೋಜನೆಯ ನಿಮ್ಮ ಖಾತೆಯ ಸ್ಥಿತಿಗತಿಯನ್ನು ತಿಳಿಯಬಹುದು.

ಆಕಸ್ಮಾತ ನಿಮಗೆ ನಿಮ್ಮ Farmer Registration ನಂಬರ್ ಗೊತ್ತಿಲ್ಲ ಎಂದರೆ Click Here To Know Your Registration ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಹಾಕಿದರೆ ನಿಮ್ಮ Farmer Registration ನಂಬರ್ ಸಿಗುತ್ತದೆ. ಈ Farmer Registration Number ಬಳಸಿ ನಿಮಗೆ ಪಿಎಂ ಕಿಸಾನ್ ಹಣ ಏಕೆ ಬಂದಿಲ್ಲ ಎಂಬುವ ಕಾರಣವನ್ನು ಕೂಡಾ ತಿಳಿದುಕೊಳ್ಳಬಹುದು.


👉ಹಣ ಬರದೇ ಇರುವುದಕ್ಕೆ ಕಾರಣಗಳು.

ನೀವು ಮೊಬೈಲ್ ನಂಬರ್ ಅಥವಾ Farmer Registration ನಂಬರ್ ಬಳಸಿ ಪಿಎಂ ಕಿಸಾನ್ ಹಣ ಏಕೆ ಬಂದಿಲ್ಲ ಎಂಬುದನ್ನು ಪರಿಶೀಲಿಸುವ ಹಂತದಲ್ಲಿ ಬೇರೆ ಬೇರೆ ಕಾರಣಗಳು ಗೋಚರಿಸುತ್ತವೆ.

1. Installment Payment Stopped by state on Request Of District ಎಂದು ತೋರಿಸುತ್ತಿದ್ದರೆ, ತಾಲೂಕಿನಲ್ಲಿ Revarification ಮಾಡಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕಳಿಸಿ ಸರಿಪಡಿಸಬೇಕು.

2. Aadhar number is not verified ಎಂದು ತೋರಿಸುತ್ತಿದ್ದರೆ ಜಂಟಿ ಕೃಷಿ ನಿರ್ದೇಶಕರ Login ಮೂಲಕ Authentication ಮಾಡಿಸಬೇಕು.

3. NPCI IS NOT MAPPED ಎಂದು ತೋರಿಸುತ್ತಿದ್ದರೆ ನಿಮ್ಮ ಆಧಾರ್ ನಂಬರ್ ಲಿಂಕ್ ಇರುವ ಬ್ಯಾಂಕಿಗೆ ಹೋಗಿ ಆಧಾರ್ ಜೋಡಣೆಯನ್ನು Delink ಮಾಡಿ ನಂತರ Relink ಮಾಡಿಸಬೇಕು.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
logoblog

Thanks for reading Why has the PM Kisan money not reached many farmers?

Previous
« Prev Post

No comments:

Post a Comment

If You Have any Doubts, let me Comment Here