Penalties that may be imposed on state government employees for proven charges
ರಾಜ್ಯ ಸರ್ಕಾರಿ ನೌಕರರಿಗೆ ಸಾಬೀತಾದಂತ ಆರೋಪಗಳಿಗೆ ವಿಧಿಸಬಹುದಾದ ದಂಡನೆಗಳ ಮಾಹಿತಿ.
ರಾಜ್ಯದ ಅನೇಕ ಸರ್ಕಾರಿ ನೌಕರರಿಗೆ ತಮ್ಮ ವಿರುದ್ಧ ಸಾಬೀತಾದಂತ ಆರೋಪಗಳಿಗೆ ಯಾವೆಲ್ಲ ಶಿಕ್ಷೆ ಆಗಲಿವೆ ಅಂತ ಗೊತ್ತಿಲ್ಲ. ಇಂತಹ ರಾಜ್ಯ ಸರ್ಕಾರಿ ನೌಕರರಿಗೆ ನೌಕರನ ವಿರುದ್ಧ ಸಾಬೀತಾದ ಆರೋಪಗಳಿಗೆ ಅನುಗುಣವಾಗಿ ಯಾವೆಲ್ಲ ದಂಡನೆಗಳನ್ನು ವಿಧಿಸಬಹುದಾಗಿದೆ ಅಂತ ಮುಂದೆ ಓದಿ.
ಈ ಬಗ್ಗೆ 2001ರಲ್ಲಿ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಮಾಹಿತಿ ನೀಡಿದ್ದು, ಅದರಲ್ಲಿ ರಾಜ್ಯ ಸರ್ಕಾರಿ ನೌಕರನು ಸೇವೆಯಲ್ಲಿ ಎಸಗುವ ಅಪರಾಧಗಳ ಕುರಿತು ವಿಚಾರಣೆ ನಡೆಸಿ, ಸಾಬೀತಾದ ಪ್ರಕರಣಗಳಲ್ಲಿ ಆರೋಪಿ ನೌಕರನಿಗೆ ವಿಧಿಸಬಹುದಾದಂತಹ ದಂಡನೆಗಳ ಬಗ್ಗೆ ಕರ್ನಾಟಕ ಸಿವಿಲ್ ಸೇವಾ ನಿಯಮದಲ್ಲಿ ನಿರ್ದಿಷ್ಟ ಪಡಿಸಲಾಗಿದೆ ಅಂತ ತಿಳಿಸಿದ್ದಾರೆ.
ಇನ್ನೂ ಸದರಿ ನಿಯಮದಲ್ಲಿ ಯಾವ ಆರೋಪಕ್ಕೆ ಯಾವ ಶಿಕ್ಷೆಯನ್ನು ವಿಧಿಸಬಹುದು ಎಂಬುದನ್ನು ನಿಗದಿಪಡಿಸಿರುವುದಿಲ್ಲ. ಇದರಿಂದಾಗಿ ಕೆಲವು ಸಂದರ್ಭಗಳಲ್ಲಿ ಆರೋಪದ ತೀವ್ರತೆಗಿಂತ ವಿಧಿಸಲಾದ ದಂಡನೆಗಳು ಕಡಿಮೆ ಅಥವಾ ಹೆಚ್ಚಿನದಾಗುವ, ಹೊಂದಿದ ಆರೋಪಗಳ ಶಿಸ್ತು ಪ್ರಾಧಿಕಾರಿಗಳು, ಹೋಲಿಸಬಹುದಾದಂತಹ ತೀವ್ರತೆಯನ್ನು ಹೊಂದಿದ ಆರೋಪಗಳ ಪ್ರಕರಣಗಳಲ್ಲಿ ಬೇರೆ ಬೇರೆ ದಂಡನೆಗಳನ್ನು ವಿಧಿಸುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.
ಆದುದ್ದರಿಂದ ಸರ್ಕಾರವು ಇದನ್ನು ಕೂಲಂಕುಷವಾಗಿ ಪರಿಶೀಲಿಸಿ, ಸಾಬೀತಾದಂತಹ ಆರೋಪಗಳಿಗೆ ಅನುಗುಣವಾಗಿ ವಿಧಿಸಬಹುದಾದಂತಹ ದಂಡನೆಗಳು ಉದಾಹರಣೆಗಳನ್ನು ಈ ಕೆಳಗೆ ನಮೂದಿಸಿದೆ ಅಂತ ಮಾಹಿತಿ ನೀಡಿದ್ದಾರೆ.
ದಂಡನೆಗಳ ಅಧಿಕೃತ ಮಾಹಿತಿ.
No comments:
Post a Comment
If You Have any Doubts, let me Comment Here