JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, March 8, 2025

P Lankesh Birth Anniversary

  Jnyanabhandar       Saturday, March 8, 2025
*ಮಾರ್ಚ್ 08-.ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ ಪಿ.ಲಂಕೇಶ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು:*

ಪಾಳ್ಯದ ಲಂಕೇಶಪ್ಪ ಅವರು ಪಿ.ಲಂಕೇಶ್ ಎಂದು ಪ್ರಸಿದ್ಧಿ. ಇವರು ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು.ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ -ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ.
*#ಜನನ, ವಿದ್ಯಾಭ್ಯಾಸ:*
ಇವರು ಮಾರ್ಚ್ 08, 1935 ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿವಮೊಗ್ಗೆಯಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ (ಸಹ್ಯಾದ್ರಿ ಕಾಲೇಜ್) ಓದಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ( ಆನರ್ಸ್ ) ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿಯನ್ನು ಪಡೆದರು.
*#ಲಂಕೇಶ್ ಪತ್ರಿಕೆ:*
ರಾಜಕೀಯ ಸುದ್ದಿಗಳು, ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಲಂಕೇಶ್ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಸಿ ಎಸ್ ದ್ವಾರಕಾನಾಥ್, ರವೀಂದ್ರ ರೇಷ್ಮೆ, ಸಿರೂರು ರೆಡ್ಡಿ, ಪ್ರೊ. ಬಿ ವಿ ವೀರಭದ್ರಪ್ಪ, ಬಿ. ಕೃಷ್ಣಪ್ಪ, ಪುಂಡಲೀಕ ಶೇಠ್, ಕೋಟಗಾನಹಳ್ಳಿ ರಾಮಯ್ಯ, ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್,, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯ ಕೊಡುಗೆ.
*#ಕೃತಿಗಳು:*
ಲಂಕೇಶರ ಮೊದಲ ಕಥಾಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ, ೧೯೬೩ರಲ್ಲಿ ಪ್ರಕಟವಾಯಿತು
*#ಆತ್ಮಕಥೆ:*
ಹುಳಿ ಮಾವಿನಮರ (ಇದರಲ್ಲಿ ಮಾವಿನ ಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ)
*#ಪ್ರಶಸ್ತಿ/ಪುರಸ್ಕಾರ:*
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೩ -'ಕಲ್ಲು ಕರಗುವ ಸಮಯ' - ಸಣ್ಣ ಕತೆಗಳ ಸಂಗ್ರಹ
ಪಲ್ಲವಿ- ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ರಾಷ್ಟ್ರಪ್ರಶಸ್ತಿ ಲಭಿಸಿದೆ.
*#ಮರಣ:*
ಲಂಕೇಶ್ ಅವರು 2000ರ ಜನವರಿ 25ರಂದು ಅಸು ನೀಗಿದರು.

logoblog

Thanks for reading P Lankesh Birth Anniversary

Previous
« Prev Post

No comments:

Post a Comment

If You Have any Doubts, let me Comment Here