JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, March 2, 2025

Krishna River Short Information

  Jnyanabhandar       Sunday, March 2, 2025
Krishna River Short Information 

🛶 *ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ* 

👇🌻⚜️🔅🌸👇👇👇👇

🔸 ದಕ್ಷಿಣ ಭಾರತದ ಅತ್ಯಂತ 2ನೇ ಉದ್ದವಾದ ನದಿ , 

🔹 ಉಗಮ ಸ್ಥಾನ= ಮಹಾರಾಷ್ಟ್ರದ ಮಹಾಬಲೇಶ್ವರ

🔸 ಅಂತ್ಯಗೊಳ್ಳುವ ಸ್ಥಳ= ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ

🔹 ಕೃಷ್ಣಾನದಿಯ ಒಟ್ಟು ಉದ್ದ= 1400 Km

🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= 483 (480km ಕೆಲವಂದು ಪುಸ್ತಕದಲ್ಲಿ)

🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ

🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇
1) ಮಹಾರಾಷ್ಟ್ರ , 
2) ಕರ್ನಾಟಕ . 
3) ತೆಲಂಗಾಣ, 
4) ಆಂಧ್ರಪ್ರದೇಶ, 

🔹 ಕೃಷ್ಣಾ ನದಿಯು ಪೂರ್ವಕ್ಕೆ ಹರಿಯುವ ನದಿ ಯಾಗಿದೆ, 

🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= ತುಂಗಭದ್ರ ನದಿ

🔹 *ಕೃಷ್ಣಾ ನದಿಯ ಉಪನದಿಗಳು* 👇
1) ತುಂಗಭದ್ರ , 
2) ಭೀಮಾ . 
3) ಪಂಚಗಂಗಾ , 
4) ದೂದ್ ಗಂಗಾ , 
5) ಕೊಯ್ನಾ , 
6) ವೆನ್ನಾ . 
7) ಪಾಲೆರು . 
8) ಮೂಸಿ . 
9) ದಿಂಡಿ . 
10) ಮಲಪ್ರಭಾ , 
11) ಘಟಪ್ರಭಾ, 
12) ಧೋಣಿ . 
13) ಮುನ್ನೇರು . 

🔸 *ಕೃಷ್ಣಾ ನದಿಗೆ ಕಟ್ಟಿರುವ ಅಣೆಕಟ್ಟುಗಳು* 👇 

1) ಆಲಮಟ್ಟಿ ಅಣೆಕಟ್ಟು

"ಲಾಲ್ ಬಹುದ್ದೂರ್ ಶಾಸ್ತ್ರಿ " ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು, 

👉2005 ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)


👉ಆಲಮಟ್ಟಿ ಜಲಾಶಯದ ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು  ಸೇರಿದೆ ,  

2) ನಾರಾಯಣಪುರ ಅಣೆಕಟ್ಟು👇

" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ ಬಸವಸಾಗರ ಜಲಾಶಯ ಎಂದು ಕರೆಯುತ್ತಾರೆ, 

3) ನಾಗಾರ್ಜುನ ಸಾಗರ ಅಣೆಕಟ್ಟು👇

👆ಇದು ಕೃಷ್ಣಾನದಿಗೆ ಆಂಧ್ರಪ್ರದೇಶದ  ನಂದಿಗೊಂಡ ಗ್ರಾಮದ ಬಳಿ ನಿರ್ಮಿಸಲಾಗಿದೆ. 

👉 *ನಾಗರ್ಜುನ್ ಸಾಗರ ಅಣೆಕಟ್ಟನ್ನು ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು  ಅವರು ಉದ್ಘಾಟಿಸಿದರು.* 

👉 ಈ ನಾಲೆಗೆ ಎರಡು ದಂಡೆಗಳಿವೆ, 
1) ಬಲದಂಡೆ ನಾಲೆಯನ್ನು= ಜವಾಹರಲಾಲ್ ನಾಲೆ ಎಂದು ಕರೆದರೆ, 

2) ಎಡದಂಡೆ ನಾಲೆ ಯನ್ನು= ಲಾಲ್ ಬಹುದ್ದೂರ್ ಶಾಸ್ತ್ರಿ ನಾಲೆ ಎಂದು ಕರೆಯುತ್ತಾರೆ, 

3) ತುಂಗಭದ್ರ ಅಣೆಕಟ್ಟು
ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ ಪಂಪ ಸಾಗರ ಎಂದು ಕರೆಯುತ್ತಾರೆ ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ, 



👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ ತಿರುಮಲೈ  ಅಯ್ಯಂಗಾರ್**

🔸 ಶ್ರೀಶೈಲಂ ಡ್ಯಾಮ್ ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ, 

🔹 ಕೊಯ್ನಾ ಡ್ಯಾಮ್ ಇರುವುದು= ಮಹಾರಾಷ್ಟ್ರ, 

🔸 ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)

🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)
👉 ಗೋಕಾಕ್ ಜಲಪಾತವನ್ನು ಕರ್ನಾಟಕದ ನಯಾಗರ ಎಂದು ಕರೆಯುತ್ತಾರೆ, 

ಕೂಡಲ ಸಂಗಮದಲ್ಲಿ  ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾಗುತ್ತದೆ, 



🔹 ಕೃಷ್ಣ ನದಿ ಜಲ ವಿವಾದವು= ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ನಡುವೆ ಇದೆ, 

🔸 *ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು* 👇

 *1) ಆರ್.ಎಸ್  ಬಚಾವತ್ ಆಯೋಗ-1969.* 
" ಈ ಆಯೋಗವು 1976ರಲ್ಲಿ ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇

1) ಮಹಾರಾಷ್ಟ್ರ= 560 TMC 

2) ಕರ್ನಾಟಕ= 700 TMC

3) ಆಂಧ್ರ ಪ್ರದೇಶ್= 800 TMC

2) ಬ್ರಿಜೇಶ್ ಕುಮಾರ ಯೋಗ-2010👇

1) ಮಹಾರಾಷ್ಟ್ರ= 666 TMC

2) ಕರ್ನಾಟಕ= 911 TMC

3) ಆಂಧ್ರ ಪ್ರದೇಶ್= 1001 TMC
logoblog

Thanks for reading Krishna River Short Information

Previous
« Prev Post

No comments:

Post a Comment

If You Have any Doubts, let me Comment Here