ಡ್ರೈವಿಂಗ್ ಲೈಸೆನ್ಸ್ ನವೀಕರಣ ಇಷ್ಟೊಂದು ಸುಲಭನಾ..! ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿದ್ಯಾ? ಈ ಸುಲಭ ಟ್ರಿಕ್ ಫಾಲೋ ಮಾಡಿ ಆನ್‌ಲೈನ್‌ನಲ್ಲಿ ನವೀಕರಿಸಿ. ಹೌದು, ಕೆಲವರ ಡ್ರೈವಿಂಗ್ ಲೈಸೆನ್ಸ್ (Driving License) ಅವಧಿ ಮುಗಿದಿರಬಹುದು. ಇನ್ನೂ ಹಲವರ ಡ್ರೈವಿಂಗ್ ಲೈಸೆನ್ಸ್ ವ್ಯಾಲಿಡಿಟಿ ಕೆಲವೇ ದಿನಗಳಲ್ಲಿ ಮುಗಿಯಲು ಬಂದಿರಬಹುದು. ಇದನ್ನು ನವೀಕರಿಸುವುದು (Driving License Renew) ಮುಖ್ಯ. ನಿಮ್ಮ ಚಾಲನಾ ಪರವಾನಗಿಯ ಅವಧಿ ಹೆಚ್ಚು ಕಾಲ ಉಳಿಯಲು ಬಿಡುವುದರಿಂದ ಅದು ರದ್ದಾಗಬಹುದು. ಇದು ಅನಗತ್ಯ ತೊಂದರೆಗೆ ಕಾರಣವಾಗುತ್ತದೆ.
ನೀವು ಯಾವುದೇ ವಾಹನವನ್ನು ಓಡಿಸಲು ಸಂಚಾರ ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಚಾಲಕರಿಗೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ಮಾಲಿನ್ಯ ಪ್ರಮಾಣಪತ್ರ, ಚಾಲನಾ ಪರವಾನಗಿ ಅಗತ್ಯವಾಗಿ ಬೇಕು. ಈ ಪೈಕಿ, ಡ್ರೈವಿಂಗ್ ಲೈಸೆನ್ಸ್ ಅತ್ಯಂತ ಮುಖ್ಯವಾದ ಮತ್ತು ಮೂಲಭೂತ ದಾಖಲೆಯಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ನೀವು ವಾಹನವನ್ನು ರಸ್ತೆಯಲ್ಲಿ ಇಳಿಸಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದಿದ್ದರೆ, ಈ ಕೂಡಲೇ ನವೀಕರಿಸುವುದು ಉತ್ತಮ. ನೀವು ಈ ರೀತಿ ಆನ್‌ಲೈನ್‌ನಲ್ಲಿ ನವೀಕರಿಸಿಬಹುದು.
ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ನವೀಕರಿಸುವುದು ಹೇಗೆ?
ಹಂತ 1: ಮೊದಲು ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ನಿಮ್ಮ ರಾಜ್ಯದ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಓಪನ್ ಮಾಡಿ.
ಹಂತ 3: 'Apply Online' ಮೇಲೆ ಕ್ಲಿಕ್ ಮಾಡಿ. ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಹಂತ 4: ಇದಾದ ನಂತರ ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.
ಹಂತ 5: ಅಲ್ಲಿ ಕಾಣುವ ಪಟ್ಟಿಯಿಂದ ನಿಮ್ಮ ರಾಜ್ಯವನ್ನು (ಕರ್ನಾಟಕ) ಆಯ್ಕೆ ಮಾಡಿ.
ಹಂತ 6: ನಂತರ 'Select Services in Driving License' ಮೇಲೆ ಕ್ಲಿಕ್ ಮಾಡಿ. ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದ ವಿವಿಧ ಸೇವೆಗಳೊಂದಿಗೆ ಹೊಸ ಪೇಜ್ ಓಪನ್ ಆಗುತ್ತದೆ.
ಹಂತ 7: ಅರ್ಜಿಯನ್ನು ಭರ್ತಿ ಮಾಡಿ. ನಿಮ್ಮ ಜನ್ಮ ದಿನಾಂಕ, ಡ್ರೈವಿಂಗ್ ಲೈಸೆನ್ಸ್ ನಂಬರ್ ಮತ್ತು ಇತರೆ ಅಗತ್ಯ ವಿವರಗಳನ್ನು ನಮೂದಿಸಿ.
ಹಂತ 8: ಬಳಿಕ Restore ಆಯ್ಕೆಯನ್ನು ಆರಿಸಿ. ಲಭ್ಯವಿರುವ ಸೇವೆಗಳ ಪಟ್ಟಿಯಿಂದ ನವೀಕರಣ ಆಯ್ಕೆ ಇರುತ್ತದೆ.
ಹಂತ 9: ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
ಹಂತ 10: ಇದಾದ ಬಳಿಕ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿ ಮಾಡಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ಆನ್‌ಲೈನ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ನಿಮ್ಮ ಬಳಿ ಸಿದ್ಧವಾಗಿಟ್ಟುಕೊಳ್ಳಿ.
ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕೆ ಯಾವೆಲ್ಲ ದಾಖಲೆ ಬೇಕು?
* ಅವಧಿ ಮುಗಿದ ಡ್ರೈವಿಂಗ್ ಲೈಸೆನ್ಸ್.
* ಪಾಸ್‌ಪೋರ್ಟ್ ಅಳತೆಯ ಫೋಟೋ.
* ಫೋಟೋ ಮೇಲೆ ನಿಮ್ಮ ಸಹಿ.
* ಗುರುತಿನ ಚೀಟಿ.
* ವಿಳಾಸದ ದಾಖಲೆ.
No comments:
Post a Comment
If You Have any Doubts, let me Comment Here