Government Jobs Classification Details
ಪ್ರತಿ ವರ್ಷ ಭಾರತ ಸರ್ಕಾರ (Indian Government) ಸಾವಿರಾರು ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿ (Job Applications) ಆಹ್ವಾನಿಸುತ್ತದೆ. ಆದರೆ, ಈ ಹುದ್ದೆಗಳ ವರ್ಗೀಕರಣ ಮತ್ತು ಅರ್ಹತೆಗಳ (Qualification) ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅನೇಕ ಅರ್ಹ ಅಭ್ಯರ್ಥಿಗಳು (Eligible Candidates) ತಮಗೆ ಸರಿಯಾಗಿ ಹೊಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಾರೆ
ಉದಾಹರಣೆಗೆ, ಉನ್ನತ ವಿದ್ಯಾಭ್ಯಾಸ (Higher Education) ಪಡೆದ ಅನೇಕರು ಕೇವಲ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಕೂಡ ಕಂಡುಬರುತ್ತದೆ.
ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಉದ್ಯೋಗಗಳನ್ನು A, B, C ಮತ್ತು D ಎಂಬ ನಾಲ್ಕು ಗ್ರೂಪ್ಗಳಾಗಿ ವಿಂಗಡಿಸಿದೆ. ಪ್ರತಿ ಗ್ರೂಪ್ನಲ್ಲಿಯೂ ಕೆಳ ಹಂತದ ಹುದ್ದೆಗಳಿಂದ ಹಿಡಿದು ಉನ್ನತ ಹುದ್ದೆಗಳಿರುತ್ತವೆ. ಅದಕ್ಕೆ ತಕ್ಕ ಹಾಗೇ ಸಂಬಳ, ಸೌಲಭ್ಯ, ಬಡ್ತಿ ಇರುತ್ತದೆ. ಅದರ ಅರ್ಹತೆ ಮತ್ತು ವಿದ್ಯಾಭ್ಯಾಸಗಳು ಕೂಡ ಪ್ರಮುಖ ಪಾತ್ರವಹಿಸುತ್ತೆ.
ಸರ್ಕಾರ ರಚಿಸಿರುವ ಗ್ರೂಪ್ಗಳ ಪೈಕಿ, ಗ್ರೂಪ್ A ಉನ್ನತ ಮಟ್ಟದ ಅಧಿಕಾರ ಒಳಗೊಂಡಿರುತ್ತದೆ. ಗ್ರೂಪ್ B ಮಧ್ಯಮ ಮಟ್ಟದ ಆಡಳಿತವನ್ನು ನಿರ್ವಹಿಸುತ್ತದೆ. ಗ್ರೂಪ್ C ದಾಖಲೆಗಳ ನಿರ್ವಹಣೆಯ ಕರ್ತವ್ಯಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತುಗ್ರೂಪ್ D ಸಹಾಯಕ ಕರ್ತವ್ಯಗಳನ್ನ ನಿರ್ವಹಿಸುತ್ತದೆ.
ಸರ್ಕಾರಿ ಉದ್ಯೋಗಗಳ ವಿಧಗಳು :
1. ಗ್ರೂಪ್ A ಉದ್ಯೋಗಗಳು (ಗೆಜೆಟೆಡ್ ಅಧಿಕಾರಿಗಳು) - ಇವು ಸರ್ಕಾರದ ಅತ್ಯುನ್ನತ ಹುದ್ದೆಗಳಾಗಿರುತ್ತೆ. ನೀತಿ ನಿರೂಪಣೆ, ಆಡಳಿತ, ಯೋಜನೆ ರೂಪಿಸುವುದು ಮತ್ತು ನಾಯಕತ್ವ ವಹಿಸುವುದು ಈ ಗುಂಪಿನ ಹುದ್ದೆಗಳ ಪ್ರಮುಖ ಕರ್ತವ್ಯಗಳು. ಈ ಅಧಿಕಾರಿಗಳ ನೇಮಕಾತಿಯನ್ನು ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಉದಾಹರಣೆಗೆ IAS, IPS, IFS ಅಧಿಕಾರಿಗಳು, ವಿಜ್ಞಾನಿಗಳು, ವೈದ್ಯರನ್ನ ಒಳಗೊಂಡಿರುತ್ತೆ. ಇವರಿಗೆ ಉತ್ತಮ ಸಂಬಳ, ಪ್ರಯಾಣ ಭತ್ಯೆ, ಸರ್ಕಾರಿ ಮನೆ ಮುಂತಾದ ಸೌಲಭ್ಯಗಳಿರುತ್ತವೆ.
2. ಗ್ರೂಪ್ B ಉದ್ಯೋಗಗಳು (ಗೆಜೆಟೆಡ್ ಮತ್ತು ನಾನ್-ಗೆಜೆಟೆಡ್) - ಇವು ಗ್ರೂಪ್ A ಮತ್ತು C ಉದ್ಯೋಗಗಳ ನಡುವಿನ ಹುದ್ದೆಗಳಾಗಿರುತ್ತೆ. ಕೆಲವು ಹುದ್ದೆಗಳು ಗೆಜೆಟೆಡ್ ಆಗಿದ್ದರೆ ಇನ್ನು ಕೆಲವು ಗೆಜೆಟೆಡ್ ಅಲ್ಲದೇ ಇರುವುದು ಅಂದ್ರೆ ಇದಕ್ಕೆ ನಾನ್ ಗೆಜೆಟೆಡ್ ಅಂತ ಹೇಳ್ತಾರೆ. ಗ್ರೂಪ್ A ಅಧಿಕಾರಿಗಳ ನೀತಿಗಳನ್ನು ಜಾರಿಗೊಳಿಸುವುದು, ತಂಡಗಳನ್ನು ನಿರ್ವಹಿಸುವುದು ಮತ್ತು ಆಡಳಿತಾತ್ಮಕ ಕೆಲಸಗಳನ್ನು ಮಾಡುವುದು ಇವರ ಕರ್ತವ್ಯವಾಗಿರುತ್ತೆ. ಉದಾಹರಣೆಗೆ ಸೆಕ್ಷನ್ ಅಧಿಕಾರಿಗಳು, ಇನ್ಸ್‌ಪೆಕ್ಟರ್‌ಗಳು, ಅಸಿಸ್ಟೆಂಟ್ ಎಂಜಿನಿಯರ್‌ಗಳನ್ನ ಒಳಗೊಂಡಿರುತ್ತೆ. ಇವರಿಗೆ ಉತ್ತಮ ಸಂಬಳ ಮತ್ತು ಬಡ್ತಿ ಪಡೆಯುವ ಅವಕಾಶಗಳಿರುತ್ತವೆ.
3. ಗ್ರೂಪ್ C ಉದ್ಯೋಗಗಳು (ಕಾರ್ಯಾಚರಣೆ ಸಿಬ್ಬಂದಿ) - ಕಚೇರಿ ಕೆಲಸಗಳು, ದಾಖಲೆಗಳ ನಿರ್ವಹಣೆ, ಡೇಟಾ ಎಂಟ್ರಿ ಮುಂತಾದ ಕೆಲಸಗಳನ್ನು ಈ ಗುಂಪಿನ ನೌಕರರು ಮಾಡುತ್ತಾರೆ. ಉದಾಹರಣೆಗೆ ಕ್ಲರ್ಕ್‌ಗಳು, ಸ್ಟೆನೋಗ್ರಾಫರ್‌ಗಳು, ಡೇಟಾ ಎಂಟ್ರಿ ಆಪರೇಟರ್‌ಗಳಾಗಿರುತ್ತಾರೆ. ಇವರಿಗೆ ಸಾಧಾರಣ ಸಂಬಳ ಮತ್ತು ಇತರ ಸೌಲಭ್ಯಗಳಿದ್ದರೂ ಬಡ್ತಿ ಪಡೆಯುವ ಅವಕಾಶ ಕಡಿಮೆ.
4. ಗ್ರೂಪ್ D ಉದ್ಯೋಗಗಳು (ಸಹಾಯಕ ಸಿಬ್ಬಂದಿ) - ಕಚೇರಿಗಳಲ್ಲಿ ಸ್ವಚ್ಛತೆ, ಭದ್ರತೆ, ಫೈಲ್‌ಗಳನ್ನು ಸಾಗಿಸುವುದು ಮುಂತಾದ ಕೆಲಸಗಳನ್ನು ಈ ಗುಂಪಿನ ನೌಕರರು ಮಾಡುತ್ತಾರೆ. ಉದಾಹರಣೆಗೆ ಪ್ಯೂನ್, ಚಾಲಕರು, ಭದ್ರತಾ ಸಿಬ್ಬಂದಿ, ಸ್ವೀಪರ್‌ಗಳಾಗಿರುತ್ತಾರೆ. ಇವರಿಗೆ ಕಡಿಮೆ ಸಂಬಳ ಮತ್ತು ಸೌಲಭ್ಯಗಳಿದ್ದರೂ, ಕಾಲಾನಂತರದಲ್ಲಿ ಗ್ರೂಪ್ C ಹುದ್ದೆಗಳಿಗೆ ಬಡ್ತಿ ಪಡೆಯುವ ಅವಕಾಶ ಇರುತ್ತದೆ.
ಹೀಗೆ ಭಾರತ ಸರ್ಕಾರ ಉದ್ಯೋಗಗಳನ್ನ ನಾಲ್ಕು ಗ್ರೂಪ್ಗಳಾಗಿ ವಿಂಗಡಿಸಿದೆ. ಈ ಎಲ್ಲಾ ಉದ್ಯೋಗಾವಕಾಶಗಳಿಗೂ ಅರ್ಜಿ ಹಾಕಲು ಸರ್ಕಾರ ಅವಕಾಶ ನೀಡಲಿದ್ದು, ಅರ್ಹರು ಈ ಗ್ರೂಪ್ಗಳ ಬಗ್ಗೆ ತಿಳಿದುಕೊಂಡು ಅರ್ಜಿ ಹಾಕುವುದು ಸೂಕ್ತ.
No comments:
Post a Comment
If You Have any Doubts, let me Comment Here