Answer to a question asked in the session regarding the implementation of internal reservation
⚫ ಒಳ ಮೀಸಲಾತಿ ಜಾರಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು. ಆಯೋಗವು ತನ್ನ ವರದಿಯನ್ನು ಯಾವಾಗ ಸಲ್ಲಿಸುತ್ತದೆ.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 13-03-2025 ರಂದು ಮಾನ್ಯ ಸಮಾಜ ಕಲ್ಯಾಣ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
ಪ್ರಶ್ನೆ:
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಆಗಸ್ಟ್, 2024 ರಂದು ಒಳಮೀಸಲಾತಿ ನೀಡುವ ಪರವಾಗಿ ತೀರ್ಪು ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಈ ಕುರಿತು ಸರ್ಕಾರದ ನಿಲುವೇನು; (ವಿವರ ನೀಡುವುದು)
ಉತ್ತರ:
ಮಾನ್ಯ ಭಾರತ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಶಿಕ್ಷಣ ಮತ್ತು ರಾಜ್ಯ ಸರ್ಕಾರದ ಅಧೀನದ ಸೇವೆಗಳಲ್ಲಿ ಒಳ | ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ, ಈಗಾಗಲೇ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.
ಪ್ರಶ್ನೆ:
ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡಲು ಸರ್ಕಾರ ಕೈಗೊಂಡ | ಕ್ರಮಗಳೇನು; (ವಿವರ ನೀಡುವುದು).
ಉತ್ತರ:
ಆಯೋಗವು ದಿನಾಂಕ:04-12-2024 ರಂದು ಕಾರ್ಯಭಾರ ವಹಿಸಿಕೊಂಡಿದ್ದು, ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳ ಬಗ್ಗೆ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಪರಿಶಿಷ್ಟ ಜಾತಿಗಳು ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದು, ಸದರಿ ಮೂರು ಪದಗಳನ್ನು ಕೆಲವು ಪರಿಶಿಷ್ಟ ಜಾತಿಯ ಸಮುದಾಯಗಳು ಬಳಕೆ ಮಾಡಲಾಗುತ್ತಿದ್ದು, ಸದರಿ ಜಾತಿಗಳಿಗೆ ಸಂಬಂಧಿಸಿದ ಉಪ ಜಾತಿಗಳ ಜನಸಂಖ್ಯೆ 2011ರ ಜನಗಣತಿಯಲ್ಲಿ ಇಲ್ಲದೇ ಇರುವುದರಿಂದ ಆ ಮಾಹಿತಿಯನ್ನೂ ಸಹ ಸಂಗ್ರಹಿಸಬೇಕಾಗಿದೆ. ಸದರಿ ಆಯೋಗದಿಂದ ದಿನಾಂಕ:10.01.2025 ರಂದು ಎಲ್ಲಾ ಸರ್ಕಾರಿ ಇಲಾಖೆಗಳು/ ನಿಗಮ /ಮಂಡಳಿ/ ಸಂಸ್ಥೆಗಳು/ವಿಶ್ವ ವಿದ್ಯಾಲಯಗಳಿಂದ ವಿವಿಧ ಪರಿಶಿಷ್ಟ ಜಾತಿಗಳ ಅಂಕಿ-ಅಂಶಗಳನ್ನು ಒದಗಿಸಲು ಪತ್ರ ಬರೆಯಲಾಗಿದೆ. ಆಯೋಗದ ನಿರ್ದೇಶನದ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದಲೂ ಸಹ ಎಲ್ಲಾ ಸರ್ಕಾರಿ ಇಲಾಖೆಗಳು/ನಿಗಮ /ಮಂಡಳಿ/ ಸಂಸ್ಥೆಗಳು/ವಿಶ್ವ ವಿದ್ಯಾಲಯಗಳಿಂದ ಅಗತ್ಯ ಮಾಹಿತಿ ಒದಗಿಸುವಂತೆ ໖:14-02-2025ರಂದು ಟಿಪ್ಪಣಿ ಹೊರಡಿಸಲಾಗಿದೆ. ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ಆನ್‌ಲೈನ್ ಮೂಲಕ ಪಡೆಯಲು ವೆಬ್-ಪೋರ್ಟಲ್ ನ್ನು ಸಿದ್ಧಪಡಿಸಲಾಗಿದೆ. ಅಗತ್ಯ ಮಾಹಿತಿಯನ್ನು ಪಡೆಯಲು ಎಲ್ಲಾ ರೀತಿಯ ಕ್ರಮವಹಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ.
No comments:
Post a Comment
If You Have any Doubts, let me Comment Here