Beat Forester Physical Date 2025
ಈ ಕಚೇರಿಯ ಅಧಿಸೂಚನೆ ದಿನಾಂಕ 2: 17.11.20230, 506 + 34 (0) = 2 540 ಅರಣ್ಯ ರಕ್ಷಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ ಆನ್‌ಲೈನ್ ಮೂಲಕ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರಣ್ಯ ಇಲಾಖೆಯಲ್ಲಿನ ವಿವಿಧ ವೃತ್ತಗಳಲ್ಲಿ ಅಧಿಸೂಚಿತ ಹುದ್ದೆಗಳಿಗೆ ನಿಯಮಾನುಸಾರ 1:20 (ಹುದ್ದೆ:ಅಭ್ಯರ್ಥಿ) ಅಂತಿಮ ಅರ್ಹತಾ ಪಟ್ಟಿಗಳನ್ನು ಆಯಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ/ಅರಣ್ಯ ಸಂರಕ್ಷಣಾಧಿಕಾರಿ ರವರ ಮೂಲಕ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣದಲ್ಲಿ (www.aranya.gov.in) ಈಗಾಗಲೇ ಪ್ರಕಟಿಸಲಾಗಿರುತ್ತದೆ.
ಈ ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತದಲ್ಲಿ ಸದರಿ 1:20 (ಹುದ್ದೆ ಅಭ್ಯರ್ಥಿ) ಅಂತಿಮ ಅರ್ಹತಾ ಪಟ್ಟಿಗಳಲ್ಲಿನ ಅಭ್ಯರ್ಥಿಗಳಿಗೆ () ದೈಹಿಕ ತಾಳ್ವಿಕೆ ಪರೀಕ್ಷೆ [Physical Endurance Test), (ii) ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ [Physical Efficiency Test] ಹಾಗೂ (iii) ಶಾರೀರಿಕ ಮಾನದಂಡಗಳ ಪರೀಕ್ಷೆ [Physical Standard Test)ಗಳನ್ನು ಸಂಬಂಧಿಸಿದ ವೃತ್ತಗಳಲ್ಲಿ ದಿನಾಂಕ:16.04.2025 (ಬುಧವಾರ)ರಿಂದ ಪ್ರಾರಂಭಿಸಿ ಸದರಿ ಪರೀಕ್ಷೆಗಳು ಪೂರ್ಣಗೊಳ್ಳುವವರೆಗೆ ಆಯೋಜಿಸಲಾಗುವುದು.
[ಸೂಚನೆ:- ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಅಭ್ಯರ್ಥಿಯು ಹಾಜರಾಗದಿದ್ದರೆ ಅಂತಹ ಅಭ್ಯರ್ಥಿಯ ಅಭ್ಯರ್ಥಿತ್ವವನ್ನು ರದ್ದು/ಅನರ್ಹಗೊಳಿಸಲಾಗುವುದು ಹಾಗೂ ಬದಲಿ ದಿನಾಂಕವನ್ನು ನೀಡಲಾಗುವುದಿಲ್ಲ.]
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here