Regarding the implementation or expansion of social security system for officers/employees directly/indirectly appointed by the government.
ಸರ್ಕಾರದಿಂದ ನೇರವಾಗಿ / ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರದ ಆದೇಶ.
ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ವಿಶಾಲ್ ಆರ್. ಸರ್ಕಾರದ ಕಾರ್ಯದರ್ಶಿ, ವಿತ್ತೀಯ ಸುಧಾರಣೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳು/ ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಸರ್ಕಾರಿ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಇತ್ಯಾದಿಗಳಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆ 11 ಲಕ್ಷಕ್ಕೂ ಹೆಚ್ಚು ಇದ್ದು, ಕರ್ನಾಟಕ ಸರ್ಕಾರವು ಮಾದರಿ ಉದ್ಯೋಗದಾತರಾಗಿ, ಸರ್ಕಾರಿ ಮತ್ತು ಇತರ ಸರ್ಕಾರಿ ಅಂಗ (ಸ್ವಾಯತ್ತ) ಸಂಸ್ಥೆಗಳ ವಿವಿಧ ಉದ್ಯೋಗಿಗಳಿಗೆ (ಖಾಯಂ/ ಗುತ್ತಿಗೆ/ ಹೊರಗುತ್ತಿಗೆ ಇತ್ಯಾದಿ) ವಿವಿಧ ಕಲ್ಯಾಣ ಕ್ರಮಗಳನ್ನು (ಪಿಎಫ್, ಕೆಜಿಐಡಿ, ಇಎಸ್‌ಐ, ವೈದ್ಯಕೀಯ ಮರುಪಾವತಿ ಇತ್ಯಾದಿ) ಪರಿಚಯಿಸುವಲ್ಲಿ ನಿರಂತರವಾಗಿ ಪ್ರಮುಖ ಪಾತ್ರವಹಿಸುತ್ತಾ ಬಂದಿರುತ್ತದೆ.
ಅಧಿಕಾರಿ/ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ.
ಇತ್ತೀಚೆಗೆ, ಅನೇಕ ಬ್ಯಾಂಕುಗಳು ಸರ್ಕಾರಿ ಅಧಿಕಾರಿಗಳು/ ನೌಕರರು ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಆಕರ್ಷಕ ಸಂಬಳ ಪ್ಯಾಕೇಜ್‌ಗಳನ್ನು ನೀಡುತ್ತಿವೆ, ಇದರಲ್ಲಿ ಅಧಿಕಾರಿಗಳು/ ನೌಕರರಿಗೆ ವಿವಿಧ ರಿಯಾಯಿತಿಗಳು ಮತ್ತು ಅಧಿಕಾರಿ/ ನೌಕರರ ಕುಟುಂಬಗಳಿಗೆ ಹೆಚ್ಚುವರಿ ಪ್ರಯೋಜನಗಳು ಸೇರಿವೆ.
ಈ ಸಂಬಳ ಪ್ಯಾಕೇಜ್‌ಗಳಲ್ಲಿ, ಬ್ಯಾಂಕುಗಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವನ್ನು ಕಡ್ಡಾಯಗೊಳಿಸದೇ ಇರುವುದು, 2 ಅಥವಾ 3 ತಿಂಗಳ ನಿವ್ವಳ ವೇತನವನ್ನು ಓವರ್ ಡ್ರಾಫ್ಟ್ (ಮುಂಗಡ) ಆಗಿ ನೀಡುವುದು, ವಸತಿ ಸಾಲಗಳ ಮೇಲೆ ಕಡಿಮೆ ಬಡ್ಡಿದರವನ್ನು ವಿಸ್ತರಿಸುವುದು, ಉಚಿತ NEFT/ RTGS ವರ್ಗಾವಣೆಗಳು, ಉಚಿತ ಡಿಮ್ಯಾಂಡ್ ಡ್ರಾಫ್ಟ್‌ಗಳು, ಉಚಿತ ರುಪೇ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ವಿಮೆ, ಬ್ಯಾಗೇಜ್ ವಿಮೆಗಳನ್ನು ನೀಡುವುದು, ಮತ್ತು ಲಾಕರ್ ಬಾಡಿಗೆಯಲ್ಲಿ ರಿಯಾಯಿತಿ ಇತ್ಯಾದಿಗಳನ್ನು ನೀಡುವುದು, ಈ ಕೊಡುಗೆಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here