General Knowledge Question and Answers
🍂ಜೀತ ಪದ್ಧತಿ ವ್ಯವಸ್ಥೆ ನಿರ್ಮೂಲನ ಕಾಯ್ದೆ-1976ರ ಅನ್ವಯ ಕೆಳಗಿನ ಯಾವ ಹಂತಗಳಲ್ಲಿ ವಿಚಕ್ಷಣಾ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ?
ಉತ್ತರ :-ಜಿಲ್ಲಾ ಮಟ್ಟದಲ್ಲಿ
🍂ಯಾವ ವೇದದಲ್ಲಿ ಸಭಾ ಮತ್ತು ಸಮಿತಿ ಪ್ರಜಾಪತಿಯ ಎರಡು ಹೆಣ್ಣು ಮಕ್ಕಳು ಎಂದು ಹೇಳಲಾಗಿದೆ.?
ಉತ್ತರ :-ಅಥರ್ವಣವೇದ
🍂ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ ಬಣ್ಣಗಳನ್ನು ನಿಷೇಧಿಸಲಾಗಿದೆ.ಈ ಪಟ್ಟಿಗೆ ಸೇರ್ಪಡೆಯಾಗಿರುವ ಹೊಸ ರಾಸಾಯನಿಕ ಯಾವುದು.?
ಉತ್ತರ :-ಲಿಕ್ವಿಡ್ ನೈಟ್ರೋಜನ್
🍂ಮಹಾಭಾರತದ ಕುಂತಲ ಸಾಮ್ರಾಜ್ಯವು ಬಳ್ಳಾರಿಯ ಯಾವ ಪ್ರದೇಶ ಎನ್ನಲಾಗಿದೆ.?
ಉತ್ತರ :- ಕುರುಗೋಡು
🍂''ಗ್ಯಾಂಜೆಟಿಕ್ ಡಾಲ್ಫಿನ್'' ಯಾವ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.?
ಉತ್ತರ :-ಉತ್ತರ ಪ್ರದೇಶ
🍂''ನ್ಯಿಶಿ ಬುಡಕಟ್ಟು'' - ಯಾವ ರಾಜ್ಯದಲ್ಲಿ ಹೆಸರುವಾಸಿ.?
ಉತ್ತರ :- ಅರುಣಾಚಲ ಪ್ರದೇಶ
🪴'ಪಂಗ್ಸಾವೋ' ಕಣಿವೆಯು ಯಾವ ಎರಡು ದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ.
ಉತ್ತರ :- ಭಾರತ ಮತ್ತು ಮೈನ್ಮಾರ್
🪴ಏಳು ದಿನಗಳ ಉತ್ಸವವಾದ 'ಬಾಲಿಯಾತ್ರಾ', ಯಾವ ರಾಜ್ಯದಲ್ಲಿ ನಡೆಯುತ್ತದೆ
🪴ಜಗತ್ತಿನಲ್ಲಿ
ಎಳ್ಳನ್ನು ಬೆಳೆಯುವ ದೇಶಗಳಲ್ಲಿ ಭಾರತದ ಸ್ಥಾನ ಎಷ್ಟನೆಯದು.
ಉತ್ತರ :- ಎರಡನೆಯದು
🪴'ರಾಮ್ ಸರ್' - ಒಪ್ಪಂದದ ಅನ್ವಯ, ಭಾರತದ ಯಾವ ಎರಡು ನಗರಗಳನ್ನು ತೇವಭೂಮಿಯ ನಗರಗಳು ಪಟ್ಟಿಗೆ ಸೇರಿಸಲಾಯಿತು.?
ಉತ್ತರ :- ಇಂದೋರ್ - ಉದಯಪುರ
🪴ದಕ್ಷಿಣ ಭಾರತದಲ್ಲಿರುವ ಏಕೈಕ 'ಬುಡಕಟ್ಟು ರಾಜವಂಶ' ಯಾವುದು..?
- ಮನ್ನರ್ ಬುಡಕಟ್ಟು
🎋'ಕಾಗೋಡು ಭೂ ಚಳುವಳಿ' ಆರಂಭವಾದಗ ಅದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಯಾರು.?
ಉತ್ತರ :- ಶಾಂತವೇರಿ ಗೋಪಾಲಗೌಡರು
🎋'ಗೀಲನ್ ಬರ್ಹೆ' ಲಕ್ಷಣಾವಳಿ ಈ ಖಾಯಿಲೆಯು ಇತ್ತೀಚಿಗೆ ಯಾವ ನಗರದಲ್ಲಿ ಕಾಣಿಸಿಕೊಂಡಿತ್ತು.
ಉತ್ತರ :- ಪುಣೆ
🎋ಕರ್ನಾಟಕದಲ್ಲಿ ಮೊದಲ ಬಾರಿಗೆ ಭುವನೇಶ್ವರಿಯ ವಿಗ್ರಹವನ್ನು ಎಲ್ಲಿ ಸ್ಥಾಪಿಸಲಾಗಿದೆ.
ಉತ್ತರ :ವಿಧಾನ ಸೌಧ
🎋ಅಕ್ಷರ ಪರಿಚಯವೇ ಇಲ್ಲದ ಕಾಲಘಟ್ಟವನ್ನು ಹೀಗೆಂದು ಕರೆಯಲಾಗುವುದು.?
ಉತ್ತರ :- ಪ್ರಾಗೖತಿಹಾಸಿಕ ಕಾಲ
🎋"ಒಂದು ಜನಾಂಗದ ಅಥವಾ ರಾಷ್ಟ್ರದ ಸ್ಮರಣೆಯ ಇತಿಹಾಸ" ಎಂದವರು ಯಾರು.?
ಉತ್ತರ :- ರಾಧಾಕೃಷ್ಣನ್
🎋ಭಾರತದ 'ಇತಿಹಾಸದ ಪಿತಾಮಹ' ಯಾರು.?
ಉತ್ತರ :- ಕಲ್ಲಣ
🎋'ಸಿಲಪ್ಪದಿಗಾರಮ್' - ಎಂಬ ಪ್ರಾಚೀನ ತಮಿಳು ಮಹಾಕಾವ್ಯದ ಕಥಾನಾಯಕಿ ಯಾರು.?
ಉತ್ತರ :- ಕಣ್ಣಗಿ
🎋ಕರ್ನಾಟಕದ ನೂತನ ಕೖಗಾರಿಕಾ ನೀತಿಯ ವರ್ಷ.?
ಉತ್ತರ :- 2025-2030
🎋2025ನೇ ಸಾಲಿನ ಪದ್ಮ ಪುರಸ್ಕಾರ ಎಷ್ಟು ಜನರಿಗೆ ನೀಡಲಾಗಿದೆ.?
ಉತ್ತರ :- 139
'ವೖಟ್ ಲಂಗ್ ಸಿಂಡ್ರೋಮ್' ಕಾಯಿಲೆಗೆ ಯಾವ ಜೀವಿಯು ಕಾರಣ.?
ಉತ್ತರ :- ಬ್ಯಾಕ್ಟೀರಿಯಾ
🎋ವಿಶ್ವಸಂಸ್ಥೆಯ 'ಭದ್ರಾತಾ ಮಂಡಳಿ'ಯಲ್ಲಿ ಸುದೀರ್ಘ ಕಾಲ ಭಾಷಣವನ್ನು ಯಾರು ಮಾಡಿದರು.?
ಉತ್ತರ :- ವಿ. ಕೆ. ಕೃಷ್ಣಮೇನನ್
🎋ಗ್ರಾನೖಟಿನಿಂದ ಕಟ್ಟಿದ ವಿಶ್ವದ ಪ್ರಥಮ ಹಾಗೂ ಬೃಹತ್ ದೇವಾಲಯವು ಯಾವುದು.?
ಉತ್ತರ :- ಬೃಹದೀಶ್ವರ ದೇವಾಲಯ
🌳ನಕ್ಷಾ ಪೈಲಟ್ ಯೋಜನೆ ಉದ್ಘಾಟನೆ
- ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಾಳೆ (ಮಂಗಳವಾರ) 26 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 152 ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯ ಭೂ-ಪ್ರಾದೇಶಿಕ ಜ್ಞಾನ-ಆಧಾರಿತ ಭೂ ಸಮೀಕ್ಷೆ (NAKSHA) ಪೈಲಟ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
- ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಭೂ ಸಂಪನ್ಮೂಲ ಇಲಾಖೆ ನೇತೃತ್ವದ ನಕ್ಷಾ ಯೋಜನೆಯು ನಗರ ಪ್ರದೇಶಗಳಲ್ಲಿ ಭೂ ಸಮೀಕ್ಷೆ ಪ್ರಕ್ರಿಯೆಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿದೆ.
- ಭೂ ದಾಖಲೆಗಳನ್ನು ರಚಿಸುವುದು ಮತ್ತು ನವೀಕರಿಸುವುದು, ಭೂ ಮಾಲೀಕತ್ವದ ನಿಖರವಾದ ದಾಖಲಾತಿಯನ್ನು ಒದಗಿಸುವುದು, ನಗರ ಯೋಜನೆಯನ್ನು ಸುಧಾರಿಸುವುದು ಮತ್ತು ಭೂ ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
🍃NAKSHA ಯೋಜನೆಯ ಪ್ರಯೋಜನ?:
ನಗರ ಭೂ ವಿವಾದಗಳು ಮತ್ತು ಅಸ್ಪಷ್ಟ ಆಸ್ತಿ ದಾಖಲೆಗಳು ಭಾರತದಲ್ಲಿ ಬಹಳ ಹಿಂದಿನಿಂದಲೂ ಒಂದು ದೊಡ್ಡ ಸವಾಲಾಗಿದೆ. NAKSHA ಯೋಜನೆಯು ಮಾಲೀಕತ್ವ ಮತ್ತು ಆಸ್ತಿ ಹಕ್ಕುಗಳ ಬಗ್ಗೆ ಸ್ಪಷ್ಟತೆಯನ್ನು ಒದಗಿಸುವುದು, ಭೂ-ಸಂಬಂಧಿತ ಸಂಘರ್ಷಗಳನ್ನು ಕಡಿಮೆ ಮಾಡುವುದು, ನಗರ ನಿವಾಸಿಗಳಿಗೆ ಜೀವನ ಸುಲಭತೆಯನ್ನು ಸುಧಾರಿಸುವುದು, ಭೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮತ್ತು ನಿಖರವಾದ ಭೂ ನಕ್ಷೆಯ ಮೂಲಕ ಸುಸ್ಥಿರ ನಗರ ಅಭಿವೃದ್ಧಿಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.
17-02-2025
No comments:
Post a Comment
If You Have any Doubts, let me Comment Here