Corrigendum notification regarding Mains Examination for the post of GAZETTED PROBATIONERS 2023-24(TOTAL 384 POST) is published
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ಮುಖ್ಯ ಪರೀಕ್ಷೆ ಕುರಿತು ತಿದ್ದುಪಡಿ ಅಧಿಸೂಚನೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗೆ ಅಧಿಸೂಚನೆಗಳನ್ನು ಕ್ರಮವಾಗಿ 26-02-2024, ಮತ್ತು 13-02-2025ರಂದು ಹೊರಡಿಸಲಾಗಿರುತ್ತದೆ. ದಿನಾಂಕ:13-02-2025ರ ಮುಖ್ಯಪರೀಕ್ಷೆಯ ಅಧಿಸೂಚನೆಯಲ್ಲಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ 1:15 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲು ದಿನಾಂಕ:17-02-2025 ರಿಂದ 03-03-2025ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.
ಮಾನ ಕರ್ನಾಟಕ ಆಡಳಿತ ಮಂಡಳಿಯ ಅರ್ಜಿ ಸಂಖ್ಯೆ:285/2025ರ ಪ್ರಕರಣದಲ್ಲಿ ಸದರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಪ್ರಕ್ರಿಯೆಯನ್ನು abeyanceನಲ್ಲಿ ಇಡಲು ಆದೇಶ ನೀಡಿದ್ದ ಕಾರಣ ಸದರಿ ಪ್ರಕ್ರಿಯೆಯನ್ನು ಸ್ವಗಿತಗೊಳಿಸಲಾಗಿತ್ತು. ಪ್ರಸ್ತುತ, ಸದರಿ ಪ್ರಕರಣದಲ್ಲಿ ದಿನಾಂಕ:25-02-2025ರಂದು ಅರ್ಹರಾದ ಅಭ್ಯರ್ಥಿಗಳಿಂದ ಮುಖ್ಯ ಪರೀಕ್ಷೆಗೆ ಅರ್ಜಿ ಸ್ವೀಕರಿಸಬಹುದೆಂದು ಮಾನ್ಯ ನ್ಯಾಯಮಂಡಳಿಯು ಮಾರ್ಪಾಡು/ಸ್ಪಷ್ಟಿಕರಣ ನೀಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದಿನಾಂಕ:27-02-2025 ರಿಂದ 13-03-2025ರವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಅಧಿಸೂಚನೆ ತಿಳಿಯಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here