Regarding the simplifying of documents and certificates to be submitted regarding the services of private schools
ಖಾಸಗಿ ಶಾಲೆಗಳ ಸೇವೆಗೆ ಸಂಬಂಧಿಸಿದಂತೆ ಸಲ್ಲಿಸಬೇಕಾದ ದಾಖಲೆ/ದೃಢೀಕರಣ ಪತ್ರಗಳನ್ನು ಸರಳೀಕರಿಸಿರುವ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಖಾಸಗಿ ಅನುದಾನರಹಿತ/ಅನುದಾನಿತ ಶಾಲೆಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ, ಅನುದಾನರಹಿತ ಶಾಲೆಗಳಿಗೆ ಸಂಬಂಧಿಸಿದಂತೆ ಉನ್ನತೀಕರಿಸಿದ ತರಗತಿಗಳಿಗೆ ನೊಂದಣಿ ಇತರೆ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಲು ನಿರಾಕ್ಷೇಪಣಾ ಪತ್ರ ನೀಡಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ನಿರ್ವಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ SATS ತಂತ್ರಾಂಶದಲ್ಲಿ ಲಭ್ಯಗೊಳಿಸಿರುವ ಶಾಲಾ ಲಾಗಿನ್ನಲ್ಲಿ ಶಾಲೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು/ದೃಢೀಕರಣ ಪತ್ರಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಿದ್ದು ಅದರಂತೆ ಶಾಲಾ ಆಡಳಿತ ಮಂಡಳಿಯವರು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಉಲ್ಲೇಖ-1 ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಸದರಿ ದಾಖಲೆಗಳ ಸಂಬಂಧ ಉಲ್ಲೇಖ-2 ರ ನಡವಳಿಯಲ್ಲಿ ನಿರ್ದೇಶಿಸಿದಂತೆ ಉಲ್ಲೇಖ-1ರ ಸುತ್ತೋಲೆಯಲ್ಲಿ ಸೂಚಿಸಿದ ದಾಖಲೆಗಳು ಮತ್ತು ಶಾಲಾ ಆಡಳಿತ ಮಂಡಳಿಗಳ ದೃಢೀಕರಣ ಪತ್ರಗಳನ್ನು ಸರಳೀಕರಿಸಿ ಉಲ್ಲೇಖ-3ರಂತೆ ಸರ್ಕಾರದ ಅನುಮೋದನೆ ಪಡೆಯಲಾಗಿದೆ.
ಅದರಂತೆ ಎಲ್ಲಾ ಶಾಲಾ ಆಡಳಿತ ಮಂಡಳಿಗಳು SATS ತಂತ್ರಾಂಶದಲ್ಲಿ ಲಭ್ಯಗೊಳಿಸಿರುವ ಶಾಲಾ ಲಾಗಿನ್ ನಲ್ಲಿ ಈ ಸುತ್ತೋಲೆಯೊಂದಿಗೆ ತಿಳಿಸಿರುವ ದಾಖಲೆಗಳನ್ನು ಮತ್ತು ಶಾಲಾ ಆಡಳಿತ ಮಂಡಳಿಯ ಲೆಡರ್ ಹೆಡ್ / ಛಾಪಾ ಕಾಗದದ ಮೇಲೆ ದೃಢೀಕರಣವನ್ನು ಈ ಸುತ್ತೋಲೆಯೊಂದಿಗೆ ನೀಡಿರುವ ಅನುಬಂಧ- 1 ರಲ್ಲಿ ಸೂಚಿಸಿರುವ ನಮೂನೆಯಂತೆ ಅಪ್ಲೋಡ್ ಮಾಡಲು ಅಗತ್ಯ ಕ್ರಮವಹಿಸುವುದು. ಶಾಲಾ ಆಡಳಿತ ಮಂಡಳಿಗಳು ಪ್ರಥಮ ಮಾನ್ಯತೆ , (First Recognition) / ಮಾನ್ಯತೆ ನವೀಕರಣ (Renewal of Recognition) ಮತ್ತು ನಿರಾಕ್ಷೇಪಣಾ ಪತ್ರಗಳಿಗೆ ಮಂಜೂರಾತಿ ಕೋರಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ SATS ನಲ್ಲಿ ಅಪ್ ಲೋಡ್ ಮಾಡಿರುವ ದಾಖಲೆಗಳು/ದೃಢೀಕರಣ ಪತ್ರಗಳು ತಂತಾನೇ ಸೆಳೆಯಲ್ಪಡುತ್ತವೆ. ಈ ಪ್ರಕ್ರಿಯೆಯಿಂದ ಶಾಲಾ ಆಡಳಿತ ಮಂಡಳಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರತಿ ಬಾರಿ ಹೊಸದಾಗಿ ದಾಖಲೆಗಳನ್ನು ಸಲ್ಲಿಸುವ ಸಮಯ ಉಳಿತಾಯವಾಗುವುದು.
ಹೆಚ್ಚಿನ ಮಾಹಿತಿಗಾಗಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here