Regarding promotion from Government High School Assistant Teacher (Grade-2) cadre to Government High School Head Teacher/equivalent Group-B cadre
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು / ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸೂಚನೆ ನೀಡಿದೆ.
ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಬಡ್ತಿಗೆ ಅರ್ಹರಿರುವ ಸರ್ಕಾರಿ ಪ್ರೌಢ / ಪದವಿ ಪೂರ್ವ ಕಾಲೇಜುಗಳಲ್ಲಿ (ಪ್ರೌಢ ಶಾಲಾ ವಿಭಾಗ) ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರುಗಳ ಜೇಷ್ಠತಾ ಪಟ್ಟಿಯನ್ನು ಉಲ್ಲೇಖ (1) ರಂತೆ ಪ್ರಕಟಿಸಿ, ಸದರಿ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಅರ್ಹತೆ ಹೊಂದಿದ ಸಹ ಶಿಕ್ಷಕರುಗಳಿಗೆ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಲು ಉಲ್ಲೇಖ (2) ರ ಈ ಕಚೇರಿ ಜ್ಞಾಪನದಂತೆ ತಿಳಿಸಲಾಗಿತ್ತು.
ಪ್ರಸ್ತುತ ಉಲ್ಲೇಖ (3) ರಂತೆ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರುಗಳ ಪರಿಷ್ಕೃತ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪ್ರಯುಕ್ತ, ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಲು ಉಲ್ಲೇಖ (2) ರ ಈ ಕಚೇರಿ ಜ್ಞಾಪನವನ್ನು ತಿದ್ದುಪಡಿಮಾಡಿ. ಬಡ್ತಿಗಾಗಿ ಅರ್ಹತೆ ಹೊಂದಬಹುದಾದ ಈ ಕೆಳಕಾಣಿಸಿದ ಶಿಕ್ಷಕರುಗಳ ಬಡ್ತಿ ಪ್ರಸ್ತಾವನೆಗಳನ್ನು ಹೊಸದಾಗಿ ಸಲ್ಲಿಸಲು
ಸ್ಥಾನಪನ್ನ ಬಡ್ತಿಗಾಗಿ ಅರ್ಹರಿರುವ ಶಿಕ್ಷಕರುಗಳ ಜೇಷ್ಠತಾ ಸಂಖ್ಯೆಗಳು ಈ ಕೆಳಗಿನ ಪಟ್ಟಿಯಲ್ಲಿರುತ್ತವೆ.
No comments:
Post a Comment
If You Have any Doubts, let me Comment Here