Regarding promotion from Education Officer/equivalent cadre to Deputy Director/equivalent cadre
ಶಿಕ್ಷಣಾಧಿಕಾರಿ/ ತತ್ಸಮಾನ ವೃಂದದಿಂದ ಉಪನಿರ್ದೇಶಕರು/ ತತ್ಸಮಾನ ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡುವ ಬಗ್ಗೆ.
ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್-"ಎ" ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗ್ರೂಪ್ "ಎ" ಹಿರಿಯ ಶ್ರೇಣಿ ಉಪನಿರ್ದೇಶಕರು ಹಾಗೂ ತತ್ಸಮಾನ ವೃಂದಕ್ಕೆ, ಸ್ಥಾನಪನ್ನ ಬಡ್ತಿ ನೀಡುವ ಸಂಬಂಧ ಉಲ್ಲೇಖಿತ ಅಧಿಸೂಚನೆಯಲ್ಲಿ ಹೊರಡಿಸಲಾದ ವಯೋನಿವೃತ್ತಿ ಪಟ್ಟಿಯನ್ವಯ 2025ರ ಜುಲೈ ಮಾಹೆಯವರೆಗೆ ವಯೋನಿವೃತ್ತಿಯಿಂದ ತೆರವಾಗುವ ಹುದ್ದೆಗಳನ್ನು ಪರಿಗಣಿಸಿ, ಭರ್ತಿ ಮಾಡಲು ಅರ್ಹ ಅಧಿಕಾರಿಗಳ ಮುಂಬಡ್ತಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ. *
ಪ್ರಯುಕ್ತ ಈ ಪತ್ರದೊಂದಿಗೆ ಅನುಬಂಧಿಸಲಾದ ಪಟ್ಟಿಯಲ್ಲಿ ಗ್ರೂಪ್-"ಎ" ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಈ ಕೆಳಗಿನ ಮಾಹಿತಿ/ ದಾಖಲೆಗಳೊಂದಿಗೆ ನಿಗಧಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ನಿಯಂತ್ರಣಾಧಿಕಾರಿಗಳ ದೃಢೀಕರಣದೊಂದಿಗೆ ದಿನಾಂಕ: 24.01.2025ರ ಒಳಗೆ ಪ್ರಸ್ತಾವನೆಯನ್ನು ಈ ಕಛೇರಿಗೆ ಸಲ್ಲಿಸಲು ಕೋರಿದೆ.
1. ಅನುಬಂಧದಲ್ಲಿನ ಎಲ್ಲಾ ಅಧಿಕಾರಿಗಳು 2019-20 ರಿಂದ 2023-24ನೇ ಸಾಲಿನ ವರೆಗಿನ ಇ ಪಾರ್ ಕಾರ್ಯನಿರ್ವಹಣಾ ವರದಿ ಕಡ್ಡಾಯವಾಗಿ ಅಂಗೀಕರಿಸುವ ಷರಾದೊಂದಿಗೆ ಸಲ್ಲಿಸುವುದು, ತಪ್ಪಿದಲ್ಲಿ ಅಂತಹ ಪ್ರಸ್ತಾವನೆಗಳನ್ನು ಪುರಸ್ಕರಿಸಲಾಗುವುದಿಲ್ಲ.
2. ಪ್ರಸ್ತುತ ದಿನಾಂಕಕ್ಕೆ ಅನುಬಂಧದಲ್ಲಿನ ಎಲ್ಲಾ ಅಧಿಕಾರಿಗಳ ವಿರುದ್ಧ ದೂರು/ಇಲಾಖಾ ವಿಚಾರಣೆ/ ನ್ಯಾಯಾಲಯ ಪ್ರಕರಣ ಇರುವ/ ಇಲ್ಲದಿರುವ ಬಗ್ಗೆ, ದೃಢೀಕರಣ ಪ್ರತಿ.
3. ಈ ಪತ್ರದಲ್ಲಿ ಅನುಬಂಧಿಸಿದ ಅಧಿಕಾರಿಗಳ ಸಂಪೂರ್ಣ ಪ್ರಸ್ತಾವನೆಯನ್ನು ಆಸ್ತಿ ಋಣ ಪಟ್ಟಿಯ ಕಡತದೊಂದಿಗೆ ಆಯಾ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ದೋಷಿಯಾರ್‌ನಲ್ಲಿ ಸಲ್ಲಿಸುವುದು.
4. ಅನುಬಂಧದ ಪಟ್ಟಿಯಲ್ಲಿ ಹೆಸರಿಲ್ಲದ ಜೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿಗಳಿದ್ದಲ್ಲಿ, ಅಂತಹ ಅಧಿಕಾರಿಗಳು ಸಹ ಅಗತ್ಯ ದಾಖಲೆಗಳೊಂದಿಗೆ ಬಡ್ತಿ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here