Regarding downloading of NMMS Exam Admission tickets for the year 2024-25
ಮೇಲ್ಕಂಡ ವಿಷಯ ಹಾಗು ಉಲ್ಲೇಖಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ: 02.02.2025 ಭಾನುವಾರದಂದು ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು Admission Ticket) 8.2.2.2.2 ವೆಬ್ ಸೈಟ್ NMMS Login ನಲ್ಲಿ ದಿನಾಂಕ:09.01.2025 ರಿಂದ ಲಭ್ಯಮಾಡಲಾಗಿದೆ. (https://kseab.karnataka.gov.in/)
ಮಂಡಳಿಯ ಶಾಲಾ ಲಾಗಿನ್‌ನಲ್ಲಿ ದೊರೆಯುವ ಪ್ರವೇಶ ಪತ್ರಗಳನ್ನು ಶಾಲಾ ಮುಖ್ಯಶಿಕ್ಷಕರು/ಪ್ರಾಂಶುಪಾಲರು Download ಮಾಡಿಕೊಂಡು ಸಹಿ ಮಾಡಿ ಮೊಹರನ್ನು ಹಾಕಿ ವಿದ್ಯಾರ್ಥಿಗಳಿಗೆ ವಿತರಿಸುವುದು. ಪ್ರವೇಶ ಪತ್ರವಿಲ್ಲದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರುಪಡಿಸಲಾಗುವುದಿಲ್ಲ.
• ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯು ಪರೀಕ್ಷೆ ಬರೆಯುವ ಕೇಂದ್ರ, ಪರೀಕ್ಷೆಯ ಹೆಸರು, ವೇಳಾಪಟ್ಟಿ ಮತ್ತು ವಿದ್ಯಾರ್ಥಿಯ ಭಾವಚಿತ್ರ ಹಾಗೂ ಇತರೆ ವಿವರಗಳು ಪೂರ್ವ ಮುದ್ರಿತವಾಗಿರುತ್ತವೆ. ಈ ಪೂರ್ವ ಮುದ್ರಿತ ಮಾಹಿತಿಗಳನ್ನು ಪರಿಶೀಲಿಸಿಕೊಂಡು ಸಂಬಂಧಿಸಿದ ವಿದ್ಯಾರ್ಥಿಗಳಿಗೆ ವಿತರಿಸುವುದು ಕಡ್ಡಾಯ.
ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ಅರ್ಜಿ ಸಲ್ಲಿಸುವಾಗ ಯಾವ ಭಾವಚಿತ್ರವನ್ನು Upload ಮಾಡಿರುತ್ತಾರೊ ಅದೇ ಭಾವಚಿತ್ರ ಪೂರ್ವ ಮುದ್ರಿತವಾಗಿರುತ್ತದೆ. ಶಾಲಾ ಹಂತದಲ್ಲಿ ಭಾವಚಿತ್ರಗಳ ಬದಲಾವಣೆಗೆ ಅವಕಾಶವಿರುವುದಿಲ್ಲ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿಗದಿಪಡಿಸಿರುವ ಪರೀಕ್ಷಾ ಕೇಂದ್ರದ ಮಾಹಿತಿಯನ್ನು ಹಾಗೂ ಸೂಕ್ತ ಮಾರ್ಗದರ್ಶನವನ್ನು ಸಂಬಂಧಿಸಿದ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು ನೀಡುವುದು.
ಶಾಲಾ ಮುಖ್ಯಶಿಕ್ಷಕರು/ಪ್ರಾಂಶುಪಾಲರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮೂದು (Entry) ಮಾಡಿರುವ ಹಾಗೂ SATS ಮಾಹಿತಿಗಳೇ ಪ್ರವೇಶ ಪತ್ರದಲ್ಲಿ ಪೂರ್ವ ಮುದ್ರಿತವಾಗಿರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು/ಪ್ರಾಂಶುಪಾಲರಿಗೆ ಮಾಹಿತಿಯನ್ನು ನೀಡಲು ಉಪನಿರ್ದೇಶಕರು (ಅಭಿವೃದ್ಧಿ) NMMS ಪರೀಕ್ಷೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದೆ.
No comments:
Post a Comment
If You Have any Doubts, let me Comment Here