📓 ಇಂದಿನ ಇತಿಹಾಸ 📓
💐 ಜನವರಿ 12 - ರಾಷ್ಟ್ರೀಯ ಯುವ ದಿನ 💐
👉 ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
👉 1984ರಲ್ಲಿ ಭಾರತ ಸರ್ಕಾರವು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಅಥವಾ ಯುವ ದಿವಸ್ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಂತೆಯೇ 1985ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಯಿತು. ಅಂದಿನಿಂದ ಪ್ರತೀವರ್ಷ ಈ ಯುವ ದಿವಸ್ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
🌹 ಪ್ರಮುಖ ಘಟನೆಗಳು 🌹
👉 ಜನವರಿ 12, 1848 ರಂದು ಮಾರ್ಕ್ವೆಸ್ ಡಾಲ್ ಹೌಸಿ ಅವರು ಭಾರತದ ಗವರ್ನರ್ ಜನರಲ್ ಆದರು. ಯುದ್ಧ ಹಾಗೂ ಸಂಧಾನಗಳ ಮೂಲಕ ರಾಜ್ಯಗಳನ್ನು ಸೇರಿಸಿ ಭಾರತದ ನಕ್ಷೆಯನ್ನು ರೂಪಿಸಿದ ವ್ಯಕ್ತಿ ಎಂದು ಇವರು ಪರಿಗಣಿತನಾಗಿದ್ದಾರೆ.
🎂 ಜನವರಿ 12, 1869 ರಂದು ಜನಿಸಿದ ಭಗವಾನ್ ದಾಸ್ (1869-1958) ಅವರು ಖ್ಯಾತ ವಿದ್ವಾಂಸ, ತತ್ವಜ್ಞಾನಿ, ಸ್ವಾತಂತ್ರ್ಯ ಯೋಧರಾಗಿದ್ದು 'ಭಾರತರತ್ನ' ಪ್ರಶಸ್ತಿ ಪುರಸ್ಕೃತರಾದರು.
👉 ಜನವರಿ 12, 1934 ರಂದು ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ (1894 - 1934) ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.
💐 ಸ್ವಾಮಿ ವಿವೇಕಾನಂದ 💐
🎂 ಸ್ವಾಮಿ ವಿವೇಕಾನಂದರು 1863ರ ಜನವರಿ 12 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಇವರ ಮೂಲ ಹೆಸರು ನರೇಂದ್ರನಾಥ ದತ್ತ.
👉 ಸ್ವಾಮಿ ವಿವೇಕಾನಂದ ಅವರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ.
👉 ಅವರು ರಾಮಕೃಷ್ಣ ಪರಮಹಂಸರ ಮುಖ್ಯ ಶಿಷ್ಯರಾಗಿದ್ದರು. ಅವರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು 1897 ರ ಸುಮಾರಿಗೆ, ಅವರು ಭಾರತಕ್ಕೆ ಮರಳಿದರು ಮತ್ತು ಕಲ್ಕತ್ತಾವನ್ನು ತಲುಪಿದರು, ಅಲ್ಲಿ ಅವರು ಮೇ 1, 1897 ರಂದು ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು.
👉 ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವಂತಹ ಹಲವಾರು ಸಾಮಾಜಿಕ ಸೇವೆಗಳನ್ನು ಈ ಮಿಷನ್ ಅಡಿಯಲ್ಲಿ ನಡೆಸಲಾಗುತ್ತದೆ. ವೇದಾಂತದ ಬೋಧನೆಗಳನ್ನು ಸಮ್ಮೇಳನಗಳು, ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರಗಳು, ದೇಶದಾದ್ಯಂತ ಪುನರ್ವಸತಿ ಕಾರ್ಯಗಳ ಮೂಲಕ ಒದಗಿಸಲಾಯಿತು.ಅವರ ಪ್ರಕಾರ, ಜೀವನದ ಅಂತಿಮ ಗುರಿ ಆತ್ಮದ ಸ್ವಾತಂತ್ರ್ಯವನ್ನು ಸಾಧಿಸುವು.
👉 ಜುಲೈ 04, 1902 ರಂದು ನಿಧನರಾದರು.
🌸🌸🌸🌸🌸🌸🌸🌸
No comments:
Post a Comment
If You Have any Doubts, let me Comment Here