KEA Forthcoming Recruitment Updates
ಹಲವು ತಿಂಗಳ ಹಿಂದೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಒಟ್ಟು 2,609 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದೀಗ ಈ ಸಂಬಂಧ ಪರೀಕ್ಷೆ (Exam) ಯಾವಾಗ, ಅರ್ಜಿ ಸ್ವೀಕಾರ ಯಾವಾಗ, ಪಠ್ಯಕ್ರಮ ಏನು, ಇತರೆ ಮಾಹಿತಿಗಳನ್ನು ತಿಳಿಸಿದೆ. ಈ ಕುರಿತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಹುದ್ದೆಗಳ ವಿವರ ಹೀಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ, ಸಹಾಯಕ, ಗ್ರಂಥಪಾಲಕ, ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್, ಸಹಾಯಕ, ಕಿರಿಯ ಸಹಾಯಕ ಸೇರಿ ಒಟ್ಟೂ 44ಹುದ್ದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ, ಸಹಾಯಕ ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಕಲ್ಯಾಣಾಧಿಕಾರಿ, ಕಾನೂ ಅಧಿಕಾರಿ, ಇತರೆ ವೃಂದದ ಹುದ್ದೆ ಸೇರಿ ಒಟ್ಟೂ 750ಹುದ್ದೆಗಳು.
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ನಲ್ಲಿ, ಅಧಿಕಾರಿ, ಕಿರಿಯ ಅಧಿಕಾರಿ, ಮಾರಾಟ ಪ್ರತಿನಿಧಿ, ಕಿರಿಯ ಮಾರಾಟ ಪ್ರತಿನಿಧಿ ಸೇರಿ ಒಟ್ಟು 38 ಹುದ್ದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ, ಸಹಾಯಕ ಲೆಕ್ಕಿಗ, ನಿರ್ವಾಹಕ ಸೇರಿ ಒಟ್ಟೂ 1752 ಹುದ್ದೆ. ಹಾಗೂ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸೇರಿ ಒಟ್ಟೂ 25 ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗೆ ವಿವರವಾದ ಅಧಿಸೂಚನೆ ಹೊರಡಿಸಲು ಕಾರಣ
ಸದರಿ ಇಲಾಖೆಗಳಲ್ಲಿನ ಕೆಲವು ಹುದ್ದೆಗಳ ಮೀಸಲಾತಿ/ವರ್ಗಿಕರಣವನ್ನು ಪರಿಷ್ಕರಿಸಲು ಇಲಾಖೆಗಳು ಕೋರಿವೆ. ವಿವರವಾದ ಅಧಿಸೂಚನೆಯಲ್ಲಿನ ನಿಬಂಧನೆಗಳಲ್ಲಿ ಕೆಲವು ಪರಿಷ್ಕರಣೆ ಮಾಡಲು ಇಲಾಖೆಯು ಕೋರಿವೆ. ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯುವ ಸಂಬಂಧ ಇಲಾಖೆಯು ತಡೆಹಿಡಿಯಲು ವಿನಂತಿಸಿವೆ. ಅಲ್ಲದೇ ಈ ಮಧ್ಯೆ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 388 ಸೆನೆನಿ 2024 ದಿನಾಂಕ 25.11.2024 ರಂತೆ ಹೊಸ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿರುವುದಿಲ್ಲ. ( ಹಲವು ಕಾರಣಗಳಿಂದ ಸರ್ಕಾರದ ಮುಂದಿನ ಆದೇಶದವರೆಗೆ, ಯಾವುದೇ ಹುದ್ದೆಗೆ ನೇಮಕ ಅಧಿಸೂಚನೆ ಹೊರಡಿಸುವಂತಿಲ್ಲ ಎಂದು ಹೇಳಲಾಗಿದೆ). ಈ ಕಾರಣಗಳಿಂದ ಸದರಿ ಹುದ್ದೆಗಳಿಗೆ ಸವಿವರ ಅಧಿಸೂಚನೆ ಹೊರಡಿಸಲು ಸಾಧ್ಯವಾಗಿಲ್ಲ ಎಂದು ಕೆಇಎ ಹೇಳಿದೆ.
No comments:
Post a Comment
If You Have any Doubts, let me Comment Here