ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) Frequently asked questions (FAQs)
ಅ. ಫಲಾನುಭವಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು.
1. KASS ಸೌಲಭ್ಯಗಳಿಗೆ ಯಾರು ಅರ್ಹರು?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ/ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
2. ಯೋಜನೆಗೆ ಅರ್ಹ ಅವಲಂಬಿತರು ಯಾರು?
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ "ಕುಟುಂಬ" (Family) ಅಂದರೆ,
೩. ಸರ್ಕಾರಿ ನೌಕರರ ಪತಿ ಅಥವಾ ಪತ್ನಿ
b. ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.
C. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ)
3. KASS ಯೋಜನೆಗೆ ಒಳಪಡದ ನೌಕರರ ವರ್ಗ
ಸಾರ್ವಜನಿಕ ವಲಯದ (public sector establishment) ಇತರೇ ನೌಕರರು ಅಂದರೆ, ಸ್ಥಳಿಯ ಸಂಸ್ಥೆ, ಸ್ನಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯಗಳು, ಶಾಸನಬದ್ಧ ಸಂಸ್ಥೆಗಳು, ಗುತ್ತಿಗೆ/ಹೊರಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.
ಈಗಾಗಲೇ ಬೇರೆ ಆರೋಗ್ಯ ಯೋಜನೆಯಡಿ ಒಳಪಟ್ಟ ಸರ್ಕಾರಿ ನೌಕರರು (ಉದಾ: ಪೊಲೀಸ್ ಇಲಾಖೆಯಲ್ಲಿನ 'ಆರೋಗ್ಯ ಭಾಗ್ಯ' ಯೋಜನೆಗೆ ಒಳಪಟ್ಟ ಸರ್ಕಾರಿ ನೌಕರರು) ಈ ಯೋಜನೆಗೆ ಒಳಪಡುವುದಿಲ್ಲ.
ರಾಜ್ಯ ಸೇವೆಯಲ್ಲಿ ನಿಯೋಜನೆ/ ಎರವಲು ಸೇವೆಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸ್ಥಾಪನೆಯ (Establishment in public sector) ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.
ಸಾರ್ವಜನಿಕ ವಲಯದ ಸ್ಥಾಪನೆ ಎಂದರೇ "ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 5 ರಲ್ಲಿ ನಿರ್ಧಿಷ್ಟಪಡಿಸಲಾದ ಸ್ಥಾಪನೆಗಳ ನೌಕರರು".
ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರವು ರೂಪಿಸಿರುವ ಪ್ರತ್ಯೇಕ ನಿಯಮಗಳು ಅನ್ವಯವಾಗುವ ಇತರೇ ಯಾವುದೇ ವರ್ಗದ ವ್ಯಕ್ತಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here