KCET Exam Time Table 2025
2025ನೇ ಸಾಲಿನ ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ ಮತ್ತು ಫಾರ್ಮಾ-ಡಿ, ಕೃಷಿ ವಿಜ್ಞಾನ ಕೋರ್ಸುಗಳು, ವೆಟರಿನರಿ ಹಾಗು ಬಿ.ಎಸ್.ಸಿ. (ನರ್ಸಿಂಗ್) ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ 16-04-2025 ಮತ್ತು 17-04-2025 ರಂದು ನಡೆಸಲು ದಿನಾಂಕಗಳನ್ನು ನಿಗದಿಪಡಿಸಿದೆ.
ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತಿದೆ.
✓ ಸಿಇಟಿ-2025ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 23-01-2025 ರಿಂದ ಪ್ರಾರಂಭಿಸಲಾಗುವುದು.
ಅಭ್ಯರ್ಥಿಗಳಿಗೆ ಲಾಗಿನ್ ಸಂದರ್ಭದಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಕಳುಹಿಸಿ ಪ್ರಮಾಣೀಕರಿಸಿದ ನಂತರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆ ಯಾವುದೇ ಹಂತದಲ್ಲಿ ಪರಿಗಣಿಸುವುದಿಲ್ಲ.
✓ ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಯು ನಮೂದಿಸುವ ಜಾತಿ / ಜಾತಿ ಆದಾಯ ಪ್ರಮಾಣ ಪತ್ರ ಮತ್ತು 371(ಜೆ) ಆರ್‌ಡಿ ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ಮೀಸಲಾತಿ ವಿವರಗಳನ್ನು ಪಡೆಯಲಾಗುವುದು.
✓ Dea SATS (Student Achievement Tracking System) ಸಂಖ್ಯೆಯ ಆಧಾರದ ಮೇಲೆ ಅಭ್ಯರ್ಥಿಗಳ ವ್ಯಾಸಂಗದ ವಿವರಗಳನ್ನು ವೆಬ್‌ಸರ್ವಿಸ್ ಮೂಲಕ ಪಡೆಯಲಾಗುವುದು.
ನಂತರ ಅಭ್ಯರ್ಥಿಗಳಿಗೆ Claims Certificate ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು,
✓ Claims Certificate a "Successfully Verified" ಎಂದು ನಮೂದಿಸಿದ್ದರೆ ಅಂತಹ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿಗೆ / ಕಾಲೇಜಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ನಂತರದ ದಿನಗಳಲ್ಲಿ ಸಿಇಟಿ ಫಲಿತಾಂಶದ ನಂತರ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here