Identification of backlog posts of Scheduled Castes and Scheduled Tribes at the time of direct recruitment of government high school teachers and promotion of primary school teachers to the post of high school assistant teachers
ವಿಷಯ: ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ನೇರ ನೇಮಕಾತಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ ಲಾಗ್)ಹುದ್ದೆಗಳನ್ನು ಗುರುತಿಸುವ ಬಗ್ಗೆ.
ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(01) ರ ಪತ್ರದಲ್ಲಿ ಬ್ಯಾಕ್ ಲಾಗ್ ಸಚಿವ ಸಂಪುಟ ಉಪ ಸಮಿತಿ ಸಭೆಯ ನಿರ್ಣಯದಂತೆ, ಸರ್ಕಾರದ ವಿವಿಧ ಇಲಾಖೆಗಳು/ನಿಯಮಗಳು/ಮಂಡಳಿಗಳು /ವಿಶ್ವವಿದ್ಯಾನಿಯಗಳು/ ಸಹಕಾರ ಸಂಸ್ಥೆಗಳು/ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಗುರುತಿಸಲು ತನಿಖಾ ತಂಡವನ್ನು ರಚಿಸಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ, ಹೊರಡಿಸಿರುವ ಮೀಸಲಾತಿ ನಿಯಮಗಳನ್ನಯ ನೇರ ನೇಮಕಾತಿ ಮತ್ತು ಮುಂಬಡ್ತಿಯನ್ನು ಅನುಷ್ಠಾನಗೊಳಿಸಿರುವ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಪರಿಶೀಲಿಸಲು ಸದರಿ ಆಯೋಗದ ತಂಡವನ್ನು ನೇಮಿಸಿರುತ್ತಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಉಲ್ಲೇಖ(2) ರಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಮೂನೆ-01 & 02 ರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿಯನ್ನು ಒದಗಿಸಲು ತಿಳಿಸಿರುತ್ತಾರೆ.
ಇಲಾಖೆಯಲ್ಲಿ 1978 ರಿಂದ 2003 ರ ವರೆಗೆ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರಾಧಿಕಾರಿಯು ರಾಜ್ಯದ 04 ವಿಭಾಗೀಯ ಕಛೇರಿಗಳ ಸಹನಿರ್ದೇಶಕರಾಗಿದ್ದು 2003ನೇ ಸಾಲಿನಿಂದ ನೇಮಕಾತಿ ಪ್ರಾಧಿಕಾರಿಗಳು ರಾಜ್ಯದ 35 ಸುಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು ಆಗಿರುತ್ತಾರೆ. ಹಾಗೂ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಯು 35 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರಾಗಿರುವ ವಿಷಯವನ್ನು ಮಾನ್ಯ ಆಯೋಗದ ಗಮನಕ್ಕೆ ತರಲಾಗಿದೆ.
ಮಾನ್ಯ ಆಯೋಗವು ನಮೂನೆ-01 & 02 ಮಾಹಿತಿ/ದಾಖಲೆಗಳೊಂದಿಗೆ ಖುದ್ದು ಹಾಜರಾಗಿ ಆಯೋಗವು ಅಪೇಕ್ಷಿಸಿರುವ ಮಾಹಿತಿಯನ್ನು ಒದಗಿಸಲು ಸಂಬಂಧಪಟ್ಟ ನೇಮಕಾತಿ/ಬಡ್ತಿ ನೀಡುವ ಕಛೇರಿಯ ಜವಾಬ್ದಾರಿಯುತ ಅಧಿಕಾರಿಗಳನ್ನು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು, ಇಲ್ಲಿಗೆ ನಿಯೋಜಿಸಲು ಸೂಚಿಸಿರುತ್ತಾರೆ.
ಪ್ರಯುಕ್ತ ಆಯೋಗವು ನೀಡಿರುವ ನಮೂನೆ-01 & 02 ನ್ನು ಈ ಪತ್ರಕ್ಕೆ ಲಗತ್ತಿಸುತ್ತಾ ಈ ಕೆಳಕಂಡ ವಿಭಾಗೀಯ ಕಛೇರಿಗಳ ನೇಮಕಾತಿ ಪ್ರಾಧಿಕಾರಿಗಳು, ಜಿಲ್ಲಾ, ನೇಮಕಾತಿ ಪ್ರಾಧಿಕಾರಿಗಳು ಮತ್ತು ಬಡ್ತಿ ನೀಡುವ ಸಕ್ರಮ ಪ್ರಾಧಿಕಾರಿಗಳ ಕಚೇರಿಯಿಂದ ಈ ಪ್ರಕ್ರಿಯೆಗಳ ಸಂಬಂಧ ಜವಾಬ್ದಾರಿಯುತ ಅಧಿಕಾರಿಗಳನ್ನು ಸೂಚಿತ ದಿನಾಂಕದಂದು ಮಾಹಿತಿ/ದಾಖಲೆಗಳೊಂದಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಕಛೇರಿಯಲ್ಲಿ ತಮ್ಮದೇ ಹಾಜರಾಗಿ ಅಪೇಕ್ಷಿತ ಮಾಹಿತಿಯನ್ನು ಸಲ್ಲಿಸಲು ನಿಯೋಜಿಸುವುದು.
ಮೇಲ್ಕಂಡಂತೆ ಮಾಹಿತಿಯನ್ನು ಸಲ್ಲಿಸಿರುವ ಬಗ್ಗೆ. ಈ ಕಛೇರಿಗೆ ವರದಿಯನ್ನು ಸಲ್ಲಿಸಲು ತಿಳಿಸಿದೆ. ಈ ವಿಷಯದಲ್ಲಿನ ಯಾವುದೇ ವಿಳಂಬ ಮಾಡದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸೂಚಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶ್ರೀ ರಮೇಶ್ ಪ್ರ.ದ.ಸ. ದೂರವಾಣಿ ಸಂಖ್ಯೆ: 9880253176 ಇವರನ್ನು ಸಂಪರ್ಕಿಸಲು ಸೂಚಿಸಿದೆ.
No comments:
Post a Comment
If You Have any Doubts, let me Comment Here