General Knowledge Question and Answers
🏜ಆರ್ಟಿಕಲ್ 142 ಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು(ಪಿಐಎಲ್) ಪರಮೋಚ್ಚ ನ್ಯಾಯಾಲಯವು ಒಪ್ಪಿಲ್ಲ. ಇದು ಯಾವ ವಿಷಯಕ್ಕೆ ಸಂಬಂಧಿಸಿದೆ?
- ಲೈಂಗಿಕ ದೌರ್ಜನ್ಯ
🏜ಇತ್ತೀಚೆಗೆ ಭಾರತದ ಯಾವ ರಾಜ್ಯದಲ್ಲಿ ಗಂಟಲು ಮಾರಿ ಅಥವಾ ಡಿಫ್ತೀರಿಯಾ ಕಾಣಿಸಿಕೊಂಡಿತು?
- ರಾಜಸ್ಥಾನ
🏜ಭಾರತದಲ್ಲಿ 'ಸೊಕ್ಕು ಅಲೆಗಳು' (ಸೈಲ್ ವೇನ್ಸ್)ಆಗಮಿಸುವ ಸೂಚನೆಯನ್ನು ಎಷ್ಟು ದಿನಗಳ ಮೊದಲೆ ತಿಳಿಸುವ ವ್ಯವಸ್ಥೆಯಿದೆ?
- ಏಳು ದಿನಗಳು
🏜ವಾಯು ಗುಣಮಟ್ಟ ನಿರ್ವಹಣಾ ಆಯೋಗ(ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜೆಂಟ್)ಭಾರತದ ಯಾವ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದೆ?
- ಉತ್ತರ ಭಾಗ
🏜2024 ರ ಅನ್ವಯ ಭಾರತದಲ್ಲಿ ಒಟ್ಟು ಎಷ್ಟು ಪಾರಂಪರಿಕ ಭಾಷೆಗಳಿವೆ?
- 11
🏜ಒಳ ಸೌರಮಂಡಲದ(ಇನ್ನರ್ ಸೋಲಾರ್ ಸಿಸ್ಟಮ್)ಏಕೈಕ ಕುಬ್ಜ ಗ್ರಹವು ಯಾವುದು?
- ಸಿರೆಸ್
🏜ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯವರು ಎಷ್ಟು 'ಆಕಾಶ್ ತೀರ್' ವ್ಯವಸ್ಥೆಗಳನ್ನು ಭಾರತೀಯ ಸೇನೆಗೆ ನೀಡಿದೆ?
- 100
🎙ಅಗ್ನಿಗೋಳ (ರಿಂಗ್ ಆಫ್ ಫೈರ್) ಎಲ್ಲಿದೆ?
- ಶಾಂತ ಮಹಾಸಾಗರ
🎙'ಅಸ್ಥೀಕರಣ ಪರೀಕ್ಷೆ' ಅಥವಾ 'ಆಸಿಫಿಕೇಶನ್ ಟೆಸ್ಟ್' - ಯಾವ ಕ್ಷೇತ್ರದಲ್ಲಿ ಉಪಯುಕ್ತ?
- ವಯಸ್ಸಿನ ನಿರ್ಧಾರ
🎙ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಹಾಗೆ 'ಮ್ಯಾಕಜಿಲ್ಲ' ಎಂದರೆ ಏನು?
- ರಾಕೆಟ್ - ಇಕ್ಕಳ
🎙'ಸಮರ್ಥ್' ಯೋಜನೆಯು ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- ಜವಳಿ
🎙'ಕೊನಾರ್ಕ' ನಗರವು ಯಾವ ನದಿಯ ದಡದ ಮೇಲೆ ಇತ್ತು ಎನ್ನಲಾಗಿದೆ?
- ಚಂದ್ರಭಾಗಾ ನದಿ (ಈಗ ಇಲ್ಲ)
🎙ಕರ್ನಾಟಕದ ಯಾವ ನದಿಯನ್ನು ಚಂದ್ರಭಾಗಾ ನದಿ ಎಂದೂ ಕರೆಯುತ್ತಾರೆ?
- ಭೀಮಾ ನದಿ
🕌'ಹೇಬರ್- ಬಾಶ್ ಪ್ರೋಸೆಸ್' ಯಾವ ಅನಿಲಕ್ಕೆ ಸಂಬಂಧಪಟ್ಟಿದೆ?
- ನೈಟ್ರೋಜನ್
🕌ಅಸ್ಥಿಪಂಜರಗಳ ಸರೋವರ (ಲೇಕ್ ಆಫ್ ಸ್ಕೆಲಿಟನ್ಸ್) ಯಾವ ರಾಜ್ಯದಲ್ಲಿದೆ?
- ಉತ್ತರಾಖಂಡ
🕌ಎಷ್ಟು ವರ್ಷಗಳ ಹಿಂದಿನ ವಿಶ್ವದ ಅತ್ಯಂತ ಪುರಾತನ ಬ್ಯಾಕ್ಟಿರಿಯಗಳು, 'ಬುಶ್ವಾಲ್ಡ್ ಅಗ್ನಿಶಿಲಾ' ಸಂಕೀರ್ಣದಲ್ಲಿ ದೊರೆತಿವೆ?
- 2 ಶತಕೋಟಿ ವರ್ಷ (2 ಬಿಲಿಯನ್)
🕌ಜಪಾನಿ ಭಾಷೆಯಲ್ಲಿ 'ಕೈಜೆನ್' ಎಂದರೆ ಏನು?
- ಸುಧಾರಣೆ
🕌'ಹಾರಿ ಬಿಡು' ಎಂಬ ನುಡಿಗಟ್ಟಿನ ಅರ್ಥವೇನು?
- ಹೊರಟು ಹೋಗು
🕌'ಪ್ರಾಣಿಗಳನ್ನು ಹಿಡಿಯುವ ಬಲೆ' ಎಂಬ ಅರ್ಥವನ್ನು ಕೊಡುವ
- ವಾಗುರೆ
🕌ಹುಡುಗನೊಬ್ಬ ಕಲ್ಲನ್ನು ಶಿವನೆಂದು ಪೂಜಿಸಿದಾಗ,ಶಿವನು ಪ್ರತ್ಯಕ್ಷನಾಗಿ ಯಾವ ಜ್ಯೋತಿರ್ಲಿಂಗವಾದನು?
- ಮಹಾಕಾಲೇಶ್ವರ
🎲ಬನವಾಸಿ ಎಂದ ಕೂಡಲೇ ಯಾವ ಕನ್ನಡ ಕವಿಯ ನೆನಪು ಬರುತ್ತದೆ?
- ಪಂಪ
🎲'ಹಾರೂ ಹಕ್ಕಿ ಪುಚ್ಚಾ ಎಣಿಸು' ಎಂಬ ನುಡಿಗಟ್ಟಿನ ಅರ್ಥವೇನು?
- ಚಾಣಾಕ್ಷನಾಗಿರು
🎲1962 'ವಾಲಾಂಗ್ ಕದನ' ವು ಯಾವ ದೇಶಗಳ ನಡುವೆ ನಡೆಯಿತು?
- ಭಾರತ - ಚೀನಾ
🎲'ರತನ್‌ಕೇನ್, ಮನಿಲಾ ಕೇನ್, ಮಲಕ್ಕಾ ಕೇನ್' ಯಾವ ಜಾತಿಗೆ ಸೇರಿದ ಬಳ್ಳಿ?
- ತೆಂಗು ಜಾತಿ
🎲'ಹಿಬಾಕುಶ' ಇತ್ತೀಚೆಗೆ ಸುದ್ದಿಯಲ್ಲಿದ್ದರು. ಯಾವ ಕಾರಣಕ್ಕಾಗಿ?
- ನೊಬೆಲ್ ಶಾಂತಿ ಪಾರಿತೋಷಕ
🎲ಥಾಡ್ ಕ್ಷಿಪಣಿ ವ್ಯವಸ್ಥೆ (ಥಾಡ್ ಮಿಸೈಲ್ ಸಿಸ್ಟಮ್)ಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
- ಅಮೆರಿಕ
🏝ಹರಪ್ಪ ಚಿತ್ರಲಿಪಿಯ ಆಧಾರದ ಮೇಲೆ,ಕರ್ನಾಟಕವನ್ನು ಏನೆಂದು ಕರೆದಿರುವರು?
- ಕಣ್ಣ + ನೀರ್
🏝ಗೋವಾ ಪ್ರದೇಶವನ್ನು 10 - 14ನೆಯ ಶತಮಾನದವರೆಗೆ ಯಾರು ಆಳಿದರು?
- ಕದಂಬರು
🏝'ಕನ್ನಡ, ಮಲಯಾಳಂ, ತಮಿಳು, ತುಳು' ಭಾಷೆಯ ಶಬ್ದಗಳನ್ನೆಲ್ಲ ಒಳಗೊಂಡ ಭಾಷೆಯು ಯಾವುದು?
- ಕೊಡವ
🏝'ಖೋಟಾ ನಾಣ್ಯ'ಗಳ ಬಗ್ಗೆ ಎಚ್ಚರವಿರಬೇಕೆಂದು ಮೊದಲು ಯಾರು ಎಚ್ಚರಿಸಿದರು?
- ಕೌಟಿಲ್ಯ
🏝'ಭಾರತೀಯ ಅರಣ್ಯಗಳ ಕೃಷಿಕ' ಎಂಬ ಅಭಿದಾನವು ಯಾವ ಹಕ್ಕಿಗೆ ದೊರೆತಿದೆ?
- ಮಂಗಟ್ಟೆ
No comments:
Post a Comment
If You Have any Doubts, let me Comment Here