*ಜನೆವರಿ 11-ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯಂದು ಗೌರವಪೂರ್ವಕ ಪ್ರಣಾಮಗಳು:*
ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆ ದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯೋಣ....
ಸ್ವಾತಂತ್ರ್ಯ ಹೋರಾಟಗಾರ,ಮಾಜಿ ಪ್ರಧಾನಿ, ಮೇರು ವ್ಯಕ್ತಿತ್ವದ ನಾಯಕ,ಕಷ್ಟದ ಸನ್ನಿವೇಶದಲ್ಲಿ ದೇಶ ಎದೆ ಉಬ್ಬಿಸಿ ನಿಲ್ಲುವಂತೆ ಮಾಡಿದ ಅಪ್ರತಿಮ ಮುತ್ಸದ್ದಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪುಣ್ಯಸ್ಮರಣೆ ಇಂದು.ಜೈ ಜವಾನ್-ಜೈ ಕಿಸಾನ್ ಘೋಷಣೆಯು ದೇಶದ ಭವಿಷ್ಯದ ದಿಕ್ಸೂಚಿ, ಅವರ ಸರಳ ಬದುಕು, ನಮಗೆ ಆದರ್ಶ.ಅವರ ಈ “ಸ್ಮ್ರತಿದಿನ”ದ ಗೌರವ ನಮನಗಳು.
ಚಿಕ್ಕಮೂರ್ತಿ, ಚೊಕ್ಕಮೂರ್ತಿ.ಕೆಲಸ, ಮನಸ್ಸು ಹಾಗೂ ಮಾತು ಮೂರನ್ನೂ ಶುದ್ಧವಾಗಿಟ್ಟುಕೊಂಡು ಬಾಳಿದ ಜೀವ. ನಿರ್ಲಿಪ್ತ, ಸ್ವಾರ್ಥರಹಿತ, ಸರಳತೆಯೇ ಸಾಕಾರಮೂರ್ತಿ.ಇಂಥವರು ನಮ್ಮ ದೇಶದಲ್ಲಿದ್ದವರು. ಭಾರತದ ವೀರ ಪುತ್ರರ ಸಾಲಿಗೆ ಸೇರಿದ ಮಹಾನ್ ಸರಳ ವ್ಯಕ್ತಿ ಅವರೇ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿ. ಇವರು ಭಾರತದ ಎರಡನೇ ಪ್ರಧಾನ ಮಂತ್ರಿ.ಶಾಸ್ತ್ರಿಯವರು ಕಟ್ಟಾ ರಾಷ್ಟ್ರೀಯತಾವಾದಿ ಮತ್ತು ಒಬ್ಬ ನಿಪುಣ ಆಡಳಿತಗಾರರಾಗಿದ್ದರು.ಭಾರತದಲ್ಲಿ ಗಾಂಧೀಜಿಯವರ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಳತೆ, ಸತ್ಯ ಹಾಗೂ ಅಹಿಂಸೆಯನ್ನು ಸಾರಿದ ವ್ಯಕ್ತಿ ಯಾರಾದರೂ ಇದ್ದರೆ ಅದು ನಮ್ಮ ದೇಶದ ಎರಡನೇ ಪ್ರಧಾನಿ ಹಾಗೂ ಶಾಂತಿ ದೂತ ಲಾಲ ಬಹಾದ್ದೂರ ಶಾಸ್ತ್ರಿಜಿಯವರು.ಶಾಸ್ತ್ರಿಜಿಯವರ ಜನ್ಮದಿನ ಹಾಗೂ ಗಾಂಧೀಜಿಯವರ ಜನ್ಮದಿನ ಎರಡು ಒಂದೇ ದಿನವಾಗಿದೆ. ಅಕ್ಟೋಬರ್ 02 ಇಬ್ಬರು ಮಹಾ ಶಾಂತಿದೂತರ ಜನ್ಮದಿನಕ್ಕೆ ಸಾಕ್ಷಿಯಾದ ದಿನವಾಗಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಹುಟ್ಟಿದ್ದು ಅಕ್ಟೋಬರ್ 02, 1904 ವಾರಣಾಸಿಗೆ ಏಳು ಮೈಲಿ ದೂರದಲ್ಲಿರುವ ಮುಘಲ್ ಸರಾಯ್ ಎಂಬ ಊರಿನಲ್ಲಿ. ತಂದೆ ಶಾರದಾ ಪ್ರಸಾದ, ತಾಯಿ ರಾಂದುಲಾರಿ ದೇವಿ.
ಸರಳ ಜೀವನದ ಪ್ರವರ್ತಕ:
ಲಾಲ್ ಬಹದ್ದೂರ್ ಅವರ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾ ದೇವಿಯವರನ್ನು 1927ರಲ್ಲಿ ಅವರು ವಿವಾಹವಾದರು.ವರದಕ್ಷಿಣೆಯ ಒಂದು ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ವಿವಾಹ ಸಾಂಪ್ರದಾಯಿಕವಾಗಿತ್ತು.ವರ ಇದಕ್ಕಿಂತ ಹೆಚ್ಚಿನದೇನನ್ನು ಸ್ವೀಕರಿಸಲಿಲ್ಲ.
'ಭಾರತದ ಸಮಗ್ರತೆ ಹಾಗೂ ರಾಷ್ಟ್ರ ಧ್ವಜದ ಗೌರವ ಕಾಪಾಡಲು ನಮ್ಮ ಬದುಕಿನ ಕೊನೆ ಕ್ಷ ಣದ ವರೆಗೂ ಹೋರಾಡುತ್ತೇವೆ. ಈ ವಿಷಯದಲ್ಲಿ ನಾವೂ ಸಾವಿಗೂ ಅಂಜುವುದಿಲ್ಲ' ಹಾಗೂ 'ಜೈವಾನ್ ಜೈ ಕಿಸಾನ್' ಎಂಬುದು ಅವರ ಪ್ರಮುಖ ಪ್ರಸಿದ್ಧ ಘೋಷವಾಕ್ಯವಾಗಿದೆ. ಅವರು ಕೊನೆವರೆಗೂ ಸರಳ ಖಾದಿಧಾರಿಯಾಗಿದ್ದು ಸ್ವತಃ ನೂಲುತ್ತಿದ್ದರು. ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಜನವರಿ 11, 1966ರಲ್ಲಿ ಶಾಸ್ತ್ರೀಜಿ ಅಕಾಲಿಕವಾಗಿ ಸಾವನ್ನಪ್ಪಿದರು. ಚಿಕ್ಕ ದೇಹ ದೊಡ್ಡ ಆದರ್ಶ, ಮೆದು ದನಿ, ಉಗ್ರ ರಾಷ್ಟ್ರ ಭಕ್ತಿ, ದೇಶದ ಪ್ರಧಾನಿಯಾದರೂ ಸರಳತೆ ಬಿಡದ ವ್ಯಕಿತ್ವ, ಪ್ರಾಮಾಣಿಕತೆಯನ್ನೇ ಜೀವಾಳವಾಗಿಸಿಕೊಂಡು ಬದುಕಿದ ಶಾಸ್ತ್ರೀಜಿಯವರ ಆದರ್ಶ ಸರ್ವರಿಗೂ ಅನುಕರಣೀಯ.
#DeathAnniversary of #Lalbahaddhurshastri
No comments:
Post a Comment
If You Have any Doubts, let me Comment Here