Bangalore City District VAO Final Selection List 2024
ಬೆಂಗಳೂರು ನಗರ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 32 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇಮಕಾತಿ ಮಾಡುವ ಕುರಿತಂತೆ 1:1 ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಕುರಿತು.
ಉಲ್ಲೇಖ:
1. ಈ ಪ್ರಾಧಿಕಾರದಿಂದ ತಾತ್ಕಾಲಿಕ 1:1 ದಿನಾಂಕ: 16.01.2025.
2. ಮುರಳಿ ಎಸ್.ಪಿ ಬಿನ್ ಭೈಲಾಂಜನಪ್ಪ ರವರ ಮನವಿ ದಿನಾಂಕ: 17.01.2025.
3. ವೀರಭದ್ರಾಚಾರ್ ವಿ.ಎಂ ರವರ ಮನವಿ ದಿನಾಂಕ: 21.01.2025.
***
ವಿಷಯಕ್ಕೆ ಸಂಬಂಧಿಸಿದಂತೆ, ಬೆಂಗಳೂರು ನಗರ ಜಿಲ್ಲಾ ಕಂದಾಯ ಘಟಕದಲ್ಲಿನ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ 1:1 ಅಂತಿಮ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸದರಿ ಆಯ್ಕೆ ಪಟ್ಟಿಗೆ ಉಲ್ಲೇಖ(2) ಮತ್ತು (3) ರಂತೆ ಅಭ್ಯರ್ಥಿಯಾದ ಎಸ್.ಪಿ ಮುರಳಿ ಮತ್ತು ವೀರಭದ್ರಾಚಾರ್. ವಿ.ಎಂ ಇವರು ಮನವಿ ಸಲ್ಲಿಸಿ GM-PH ನಲ್ಲಿ ಆಯ್ಕೆಯಾದ ಮೋಹನ್ ಕುಮಾರ್ ಆಯ್ಕೆಯಾಗಿದ್ದು ಸರ್ಕಾರದ ಆದೇಶದಂತೆ ಶಾಶ್ವತ ಅಂಗವಿಕಲತೆ ಇದ್ದರೆ ಮಾತ್ರ ಪರಿಗಣಿಸಬೇಕು ಮತ್ತು ಜಯಶ್ರೀ. ಜೆ ಇವರು ಆಯ್ಕೆ ವಯೋಮಿತಿ ಮೀರಿದ್ದು, ನಿರ್ದಿಷ್ಟಪಡಿಸಿದ ಅಂಗವಿಕಲತೆ Locomotor ಗೆ ಅರ್ಹತೆ ಇಲ್ಲದ ಕಾರಣ GM-PH ಆಯ್ಕೆ 1:1, 1:2 ಅಭ್ಯರ್ಥಿಗಳನ್ನು ಮತ್ತೊಮ್ಮೆ ಸರ್ಕಾರದ ಮಾರ್ಗಸೂಚಿಗಳಂತೆ ಪರಿಶೀಲಿಸಿ GM-PH ಮೀಸಲಾತಿಗೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಕೋರಿರುತ್ತಾರೆ ಹಾಗೂ ವೀರಭದ್ರಾಚಾರ್. ವಿ.ಎಂ ದಿನಾಂಕ: 16.01.2025 ರಂದು ಪ್ರಕಟವಾದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದ್ದು ಕ್ರ.ಸಂ. 29 ರಲ್ಲಿ GM-Rural ಅಲ್ಲಿ 127.5 ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದ್ದು, ಆದರೆ ಕ್ರ.ಸಂ. 6 ರಲ್ಲಿ 130 ಅಂಕ ಪಡೆದ ಅಭ್ಯರ್ಥಿಯನ್ನು 2ಎ-Rural ಅಲ್ಲಿ ಆಯ್ಕೆ ಮಾಡಲಾಗಿದ್ದು ಹಾಗೂ ಕ್ರ.ಸಂ. 32 ರಲ್ಲಿ GM-ಕೆ.ಎಂ.ಎಸ್ ಅಭ್ಯರ್ಥಿಯು 127.75 ಅಂಕ ಪಡೆದಿರುವ ಹಾಗೂ ಕ್ರ.ಸಂ. 3 ರಲ್ಲಿ 2ಎ-ಕೆ.ಎಂ.ಎಸ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಯು 127.75 ಪಡೆದಿರುವ ಅಭ್ಯರ್ಥಿಗಳನ್ನು ಮೆರಿಟ್ ನಲ್ಲಿ ಹೆಚ್ಚಿನ ರಾಂಕ್ ಪಡೆದ ಆಧಾರದ ಮೇಲೆ GM ನಲ್ಲಿ ಆಯ್ಕೆ ಮಾಡಲು ಹಾಗೂ ಅಭ್ಯರ್ಥಿಯ ವಯಸ್ಸಿನ ಆಧಾರದ ಮೇಲೆ ಆಯ್ಕೆ ಮಾಡಿರುವ ಪಟ್ಟಿಯನ್ನು ಪರಿಶೀಲಿಸುವಂತೆ ಕೋರಿಕೊಂಡಿರುತ್ತಾರೆ.
ಸದರಿ ಕೋರಿಕೆಯ ಬಗ್ಗೆ ಪುನರ್ ಪರಿಶೀಲಿಸಲಾಗಿ, ದಾಖಲಾತಿ ಪರಿಶೀಲನೆಗೆ ಹಾಜರಾಗಿದ್ದ 85 ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆ ಪ್ರಕಟಿಸಲಾಗಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ ನ್ಯೂನತೆಯನ್ನು ಸರಿಪಡಿಸಿ ಅತೀ ಹೆಚ್ಚು ಅಂಕ ಗಳಿಸಿರುವ ಅರ್ಹ ಅಭ್ಯರ್ಥಿಯನ್ನು GM ನಲ್ಲಿ ಪರಿಗಣಿಸಿದ ಹಿನ್ನೆಲೆಯಲ್ಲಿ ವಿಎ5474684 - ಶ್ಯಾಮ್ ವಿಟ್ಟಲ್ ಅಮ್ಮಾಟೆ - C-2A Others ಮತ್ತು PA8032191 - ವೀರಭದ್ರಾಚಾರಿ V.M - 2A Rural, PA5723770 ಚಿನ್ಮಯಿ ಅರುಣ್ ಕೊಪ್ಪಾಡ್ರೆ 2a-women ಇವರ ಹೆಸರನ್ನು 1:1 ಅಂತಿಮ ಆಯ್ಕೆ ಪಟ್ಟಿಗೆ ಸೇರ್ಪಡೆ ಮಾಡಲಾಗಿರುತ್ತದೆ. ಹಾಗೂ ವಿಎ5867230 – ಮಂಜುನಾಥ್ ರಾವಾಸಾಹೆಬ್ ವಾಲಿಕರ್ - ಎಸ್.ಟಿ - ರೂರಲ್, ವಿಎ6140882 -ಅಂಕಿತ ಎನ್. - ಜಿಎಂ-ವುಮೆನ್ ಮತ್ತು ವಿಎ8053332 - ಶಿವಕುಮಾರ್ ಬಸವರಾಜ್ ಗೋಲಿಪಾಲೆ GM-ರೂರಲ್ ಇವರನ್ನು ತಾತ್ಕಾಲಿಕ ಪಟ್ಟಿಯಲ್ಲಿ ಇರುವ ಇವರನ್ನು ಹೊರತುಪಡಿಸಿ 1:1 ಅಂತಿಮ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಿಸಿದೆ.
ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಇದ್ದ ಮಾತ್ರಕ್ಕೆ ಅಭ್ಯರ್ಥಿಗಳನ್ನು ನೇಮಕಾತಿ ಬಗ್ಗೆ ಯಾವುದೇ ಹಕ್ಕು ಸಾಧಿಸಲು ಬರುವುದಿಲ್ಲ. ಪ್ರಾಧಿಕಾರದಿಂದ ಮೂಲ ದಾಖಲೆಯ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳ ದಾಖಲೆಗಳಲ್ಲಿ ಲೋಪದೋಷಗಳೇನಾದರೂ ಕಂಡುಬಂದಲ್ಲಿ, ಸದರಿ ಅಭ್ಯರ್ಥಿಗಳನ್ನು ಸಹ ಆಯ್ಕೆ ಪ್ರಕ್ರಿಯೆಯಿಂದ ಕೈ ಬಿಡಲಾಗುವುದು ಎಂಬ ಅಂಶವನ್ನು ತಿಳಿಯಪಡಿಸಿದೆ.
No comments:
Post a Comment
If You Have any Doubts, let me Comment Here