Mysore District 1137 Civil PC Revised Provisional Select List 2022
ಮೈಸೂರು ಜಿಲ್ಲೆಯಲ್ಲಿ ಖಾಲಿ ಇದ್ದ ಒಟ್ಟು 46 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್)ಹುದ್ದೆಗಳಿಗೆ ಉಲ್ಲೇಖ-1ರ ಅಧಿಸೂಚನೆ ಪ್ರಕಾರ ನೇರನೇಮಕಾತಿ ಅಭ್ಯರ್ಥಿಗಳಿಗೆ 27 ಪುರುಷ ಮತ್ತು 10 ಮಹಿಳೆ ಮತ್ತು ಸೇವಾನಿರತ 7 ಪುರುಷ ಮತ್ತು 2 ಮಹಿಳಾ ಅಭ್ಯರ್ಥಿಗಳನ್ನು ಅರ್ಜಿಗಳನ್ನು ಆಹ್ವಾನಿಸಿ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ:25.02.2024 ರಂದು ಬೆಳಗ್ಗೆ 11.00 ಗಂಟೆಯಿಂದ 12.30 ಗಂಟೆಯವರೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ 1:5 ಅನುಪಾತದಲ್ಲಿ ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ (PST / ET) ಪರೀಕ್ಷೆಯನ್ನು ದಿನಾಂಕ:12.07.2024 ರಂದು ನಡೆಸಲಾಗಿರುತ್ತದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ ಬೆಂಗಳೂರು ರವರ ಪತ್ರ ಸಂಖ್ಯೆ 06(ಎಂವೈಎಸ್)/ನೇಮಕಾತಿ-4/2022-23 ದಿನಾಂಕ:29.08.2024ರಲ್ಲಿ ಪಿಎಸ್‌ಟಿ/ಇಟಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ ನೇರ ಮತ್ತು ಸಮತಲ ವರ್ಗೀಕರಣ ಹಾಗೂ ನಿಯಮಗಳನ್ವಯ 1:1ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ತಯಾರಿಸಿ. ಈ ಕಛೇರಿಗೆ ಕಳುಹಿಸಿಕೊಟ್ಟಿರುತ್ತಾರೆ. ಸದರಿ ಪಟ್ಟಿಯನ್ವಯ ಮೈಸೂರು ಜಿಲ್ಲಾ ಘಟಕದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಉಲ್ಲೇಖಿತ (5) ರೀತ್ಯಾ ಪ್ರಕಟಿಸಲಾಗಿತ್ತು.
ಆಯ್ಕೆಗೊಂಡ ಅಭ್ಯರ್ಥಿಗಳಲ್ಲಿ 6 ಪುರುಷ ಮತ್ತು 2 ಮಹಿಳಾ ಅಭ್ಯರ್ಥಿಗಳು ಸ್ವಾಇಚ್ಛೆಯಿಂದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯನ್ನು ನಿರಾಕರಿಸಿರುತ್ತಾರೆ. ಈ ಸಂಬಂಧ ದಿ:06.11.2024ರಂದು ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಕಳುಹಿಸುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ ಬೆಂಗಳೂರು ರವರಿಗೆ ಕೋರಲಾಗಿತ್ತು. ಅದರಂತೆ ಉಲ್ಲೇಖಿತ(6)ರಲ್ಲಿ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಳುಹಿಸಿ ಕೊಟ್ಟಿರುತ್ತಾರೆ. ಅದರಂತೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿ ಪ್ರಥಮ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಷರತ್ತುಗಳು ಮತ್ತು ಆಯ್ಕೆ ಪಟ್ಟಿ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here