Minister Answer Regarding Highschool Assistant Teachers Promotion
ದಿನಾಂಕ 09 ಡಿಸೆಂಬರ್ 2024ರಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಾನ್ಯ ಶಿಕ್ಷಣ ಸಚಿವರಿಗೆ ಪ್ರೌಢ ಶಾಲಾ ಪದವೀಧರ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರ.
ಅ)
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪದವಿಪೂರ್ವ ವಿಭಾಗದ ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡಲು ನಿಯಮದ ಪ್ರಕಾರ ಅವಕಾಶ ಇದೆಯೇ: ಹಾಗಿದ್ದಲ್ಲಿ ಯಾವ ವರ್ಷದವರೆಗೆ ಈ ರೀತಿಯ ಪದೋನ್ನತಿ ನೀಡಲಾಗಿದೆ:(ಮಾಹಿತಿ ನೀಡುವುದು) ಎಂದು ಕೇಳಿದ ಪ್ರಶ್ನೆಗೆ ಉತ್ತರ.
ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 35 ಡಿಜಿಪಿ ದಿನಾಂಕ:15-05-2014ರಲ್ಲಿ ಸರ್ಕಾರಿ ಪದವಿ ಉಪನ್ಯಾಸಕರ ನೇಮಕಾತಿಗೆ 2009 ಪೂರ್ವ ಕಾಲೇಜುಗಳ ಸಂಬಂಧಿಸಿದಂತೆ ನೇರ ನೇಮಕಾತಿಗೆ ಶೇಕಡ 75ರಷ್ಟು ಹುದ್ದೆಗಳನ್ನು ಮತ್ತು ಶೇಕಡ 25ರಷ್ಟು ಹುದ್ದೆಗಳನ್ನು ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಮೂಲಕ ತುಂಬಲು ಅವಕಾಶ ಕಲ್ಪಿಸಲಾಗಿರುತ್ತದೆ. 2013ನೇ ಸಾಲಿನವರೆಗೆ ಪದೋನ್ನತಿ ನೀಡಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here