KEA KLA Recruitment 2024
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋
⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 28 ವಿವಿಧ ಹುದ್ದೆಗಳ ನೇಮಕಾತಿಗೆ 2024 ಮಾಚ್೯-12 ರಂದು ಹೊರಡಿಸಿದ್ದ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.!
⚫ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ PUC / Degree / BE (CS/IS/E&C) & Typist ವಿದ್ಯಾರ್ಹತೆ ಇರುವವರು 2024 ಡಿಸೆಂಬರ್-04 ರಿಂದ 2025 ಜನವರಿ-01 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವಿವಿಧ ವೃಂದಗಳ ಹುದ್ದೆಗಳಿಗೆಅಧಿಸೂಚನೆಯನ್ನು ದಿನಾಂಕ:12.03.2024ರಂದು ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ:06ರಲ್ಲಿನ ಕಿರಿಯ ಸಹಾಯಕರ ಉಳಿಕೆ ವೃಂದದ ಹುದ್ದೆಗಳ ಕುರಿತಂತೆ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು.
ಹುದ್ದೆಯ ಹೆಸರು: ಕಿರಿಯ ಸಹಾಯಕರು-07 ಹುದ್ದೆಗಳು
ಹುದ್ದೆಗಳ ಸಂಖ್ಯೆ: ಉಳಿಕೆ ಮೂಲ ವೃಂದ 06 ಹುದ್ದೆಗಳು, ಕಲ್ಯಾಣ ಕರ್ನಾಟಕ 01 ಹುದ್ದೆ
ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲು ಪರಿಷ್ಕೃತ ದಿನಾಂಕವು ಈ ಕೆಳಕಂಡಂತಿರುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ
04.12.2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
03.01.2025.
ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ
04.01.2025.
ದಿನಾಂಕ:12.03.2024ರ ಅಧಿಸೂಚನೆಯ ಕ್ರಮ ಸಂಖ್ಯೆ:3(1)ರಲ್ಲಿನ ವಯೋಮಿತಿ ಸಡಿಲಿಕೆ ಕೋಷ್ಠಕದಲ್ಲಿ ನಮೂದಿಸಿರುವ “ಗರಿಷ್ಠ ವಯೋಮಿತಿಗೆ 02 ವರ್ಷಗಳ ಸಡಿಲಿಕೆ ನೀಡಲಾಗಿದೆ” ಎಂಬುದರ ಬದಲಾಗಿ “03 ವರ್ಷಗಳ ಸಡಿಲಿಕೆ ನೀಡಲಾಗಿದೆ” ಎಂಬುದಾಗಿ ಓದಿಕೊಳ್ಳತಕ್ಕದ್ದು.
• ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿನಾಂಕ:12.03.2024ರ ಅಧಿಸೂಚನೆಯಲ್ಲಿ ನಿಗಧಿಪಡಿಸಿರುವ ಎಲ್ಲಾ ಅರ್ಹತೆ, ಸೂಚನೆ, ನಿಬಂಧನೆ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬಹುದಾಗಿದೆ.
No comments:
Post a Comment
If You Have any Doubts, let me Comment Here