Revised Key Answers for the post of PDO(HK) Examination held on 17-11-2024 is published
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ:ಇ(2)598/2023-24/ಪಿಎಸ್ಸಿ. ದಿನಾಂಕ:15-03-2024ರಲ್ಲಿ ಅಧಿಸೂಚಿಸಲಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 97 ಹೈದ್ರಾಬಾದ್-ಕರ್ನಾಟಕ ಗ್ರೂಪ್-'ಸಿ' ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಿನಾಂಕ:17-11-2024ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ-1 (ವಿಷಯ ಸಂಕೇತ:584) ಮತ್ತು ಪತ್ರಿಕೆ-2 (ವಿಷಯ ಸಂಕೇತ:585)ರ ಕೀ-ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ໖:19-11-2024 ಆಯೋಗದ ವೆಬ್‌ಸೈಟ್ http://kpsc.kar.nic.inನಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ:26-11-2024ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.
ಅದರಂತೆ, ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿ, ಸಾಮಾನ್ಯ ಜ್ಞಾನ ಪತ್ರಿಕೆ-1ರ (ವಿಷಯ ಸಂಕೇತ-584) ಮತ್ತು ಪತ್ರಿಕೆ-2ರ (ವಿಷಯ ಸಂಕೇತ-585) ಗಳಿಗೆ ಸಂಬಂಧಿಸಿದಂತೆ, ಅಂತಿಮವಾಗಿ ಪರಿಷ್ಕೃತಗೊಂಡಿರುವ ಕೀ-ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ಪ್ರಕಟಿಸಲಾಗಿದೆ..
ಸೂಚನೆ: ಪರಿಷ್ಕೃತ ಕೀ-ಉತ್ತರಗಳು ಪ್ರಕಟಿಸಿದ ನಂತರ, ಕೀ-ಉತ್ತರ/ಪರಿಷ್ಕೃತ ಕೀ- ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸಲ್ಲಿಸುವ ಯಾವುದೇ ಮನವಿ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
No comments:
Post a Comment
If You Have any Doubts, let me Comment Here