Government schools TGT, GPT teachers s recruitment, salary information
ಸರ್ಕಾರಿ ಶಾಲೆಗಳ ಟಿಜಿಟಿ, ಜಿಪಿಟಿ ಶಿಕ್ಷಕರ ವೇತನ ನೇಮಕಾತಿ, ವೇತನ ಮಾಹಿತಿ
ಕರ್ನಾಟಕದ ಶಾಲಾ ಶಿಕ್ಷಕರ ನೇಮಕಾತಿ, ವೇತನದ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗಳು ನಡೆದಿವೆ. ವಿಧಾನ ಪರಿಷತ್‌ನಲ್ಲಿ ಕೇಳಿದ್ದ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರವನ್ನು ನೀಡಿದ್ದಾರೆ.
ಟಿಜಿಟಿ ಮತ್ತು ಜಿಪಿಟಿ ಶಿಕ್ಷಕರ ನೇಮಕಾತಿ, ವೇತನದ ಕುರಿತು ಸಚಿವರು ವಿವರಣೆಯನ್ನು ಕೊಟ್ಟಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಕಲಾಪದಲ್ಲಿ ಡಿ. ಟಿ. ಶ್ರೀನಿವಾಸ ಹಾಗೂ ಶಶೀಲ್ ಜಿ. ನಮೋಶಿ ಕೇಳಿದ್ದ ಪ್ರಶ್ನೆಗೆ ಸಚಿವರು ಉತ್ತರವನ್ನು ನೀಡಿದ್ದಾರೆ. 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ಜಿ.ಪಿ.ಟಿ ಶಿಕ್ಷಕರ ಸಂಖ್ಯೆ ಎಷ್ಟು ಹಾಗೂ ಟಿ.ಜಿ.ಟಿ ಶಿಕ್ಷಕರ ಸಂಖ್ಯೆ ಎಷ್ಟು? ಎಂದು ಪ್ರಶ್ನಿಸಲಾಗಿತ್ತು.
2024-25ನೇ ಸಾಲಿನಲ್ಲಿ ಇದ್ದಂತೆ ಅಂದರೆ ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ಒಟ್ಟು ಜಿ.ಪಿ.ಟಿ ಶಿಕ್ಷಕರ ಹುದ್ದೆಗಳು 51,781. ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ ಟಿ.ಜಿ.ಟಿ ಶಿಕ್ಷಕರ ವೃಂದ ಅಸ್ತಿತ್ವದಲ್ಲಿರುವುದಿಲ್ಲ. ಆದರೆ ಈ ಹಿಂದೆ ಕೆಲವು ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯನ್ನು ಸೇರ್ಪಡೆ ಮಾಡಿ ಉನ್ನತೀಕರಿಸಿದ ಸಂದರ್ಭದಲ್ಲಿ 8ನೇ ತರಗತಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲು ಪ್ರೌಢಶಾಲಾ ಸಹ ಶಿಕ್ಷಕರ ವಿದ್ಯಾರ್ಹತ ಹೊಂದಿರುವವರನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ 2001-02ರಿಂದ 2009-10ರ ವರೆಗೆ ಒಟ್ಟು 5,545 ಟಿ.ಜಿ.ಟಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ತದನಂತರ, 2017ರಲ್ಲಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿ 6 ರಿಂದ 8ನೇ ತರಗತಿಗಳಿಗೆ ಬೋಧಿಸಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿ.ಪಿ.ಟಿ) ವೃಂದವನ್ನು ಸೃಜಿಸಲಾಗಿದ್ದು, ಅದರಂತೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಾಥಮಿಕ ಶಾಲೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದ್ದ ಟಿ.ಜಿ.ಟಿ ಶಿಕ್ಷಕರನ್ನು ಹಂತಹಂತವಾಗಿ ಪ್ರೌಢಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ.
ಸಮಾನ ಅವಕಾಶ ಇದಯೆ?; ಜಿ.ಪಿ.ಟಿ ಶಿಕ್ಷಕರು ಮತ್ತು ಟಿ.ಜಿ.ಟಿ ಶಿಕ್ಷಕರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆಯೇ?. ತಾರತಮ್ಯವಾಗಿದ್ದಲ್ಲಿ ಅದಕ್ಕೆ ಇರುವ ಕಾರಣಗಳೇನು?. ಟಿ.ಜಿ.ಟಿ ಶಿಕ್ಷಕರಿಗೆ ಮೊದಲ ಪ್ರಾತಿನಿಧ್ಯವಾಗಿದ್ದರೆ ಜಿ.ಪಿ.ಟಿ ಶಿಕ್ಷಕರಿಗೂ ಪ್ರಾತಿನಿಧ್ಯ ನೀಡದಿರಲು ಕಾರಣವೇನು?. ಇತ್ತೀಚಿನ ವರ್ಗಾವಣೆಯಲ್ಲಿ ರಾಜ್ಯದಲ್ಲಿ ಟಿ.ಜಿ.ಟಿ ಶಿಕ್ಷಕರಿಗೆ ಹಾಗೂ ಜಿ.ಪಿ.ಟಿ ಶಿಕ್ಷಕರಿಗೆ ಎಷ್ಟು ಅವಕಾಶ? ಎಂದು ಪ್ರಶ್ನಿಸಲಾಗಿತ್ತು.
ಸಚಿವರು ಉತ್ತರದಲ್ಲಿ ಜಿ.ಪಿ.ಟಿ ಮತ್ತು ಟಿ.ಜಿ.ಟಿ ಹುದ್ದೆಗಳು ಪತ್ಯೇಕ ವೃಂದದ ಹುದ್ದೆಗಳಾಗಿದ್ದು, ಪ್ರತ್ಯೇಕ ನೇಮಕಾತಿ ವಿಧಾನ, ಕನಿಷ್ಠ ವಿದ್ಯಾರ್ಹತೆ ಮತ್ತು ಪ್ರತ್ಯೇಕ ವೇತನ ಶ್ರೇಣಿ ಹೊಂದಿರುತ್ತವೆ. ಟಿ.ಜಿ.ಟಿ ಶಿಕ್ಷಕರ ಹುದ್ದೆಯು ಪ್ರೌಢಶಾಲಾ ಸಹಶಿಕ್ಷಕರ ವೃಂದದ ಹುದ್ದೆಯಾಗಿದ್ದು, ವೇತನ ಶ್ರೇಣಿ ರೂ 54,175-99,400 ಆಗಿರುತ್ತದೆ. ಜಿ.ಪಿ.ಟಿ ಶಿಕ್ಷಕರನ್ನು 6 ರಿಂದ 8 ನೇ ತರಗತಿಗಳ ಬೋಧನೆಗಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಯ ವೇತನ ಶ್ರೇಣಿ ರೂ. 44,425-83,700 ಆಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಜಿ.ಪಿ.ಟಿ ಮತ್ತು ಟಿ. ಜಿ. ಟಿ ಶಿಕ್ಷಕರಿಗೆ ಪ್ರತ್ಯೇಕವಾಗಿ ವರ್ಗಾವಣೆಯಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಟಿ.ಜಿ.ಟಿ ಶಿಕ್ಷಕರು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಜಿ.ಪಿ.ಟಿ ಶಿಕ್ಷಕರು (6-8 ನೇ ತರಗತಿಗೆ) ನೇಮಕಾತಿಯಾದ ನಂತರ 10 ವರ್ಷಗಳ ಕಾಲ ವರ್ಗಾವಣೆಗೆ ಆರ್ಹರಲ್ಲ ಎಂಬ ನೇಮಕಾತಿಯ ಷರತ್ತಿನನ್ವಯ ವರ್ಗಾವಣೆ ಪಡೆಯಲು ಅವಕಾಶವಿರುವುದಿಲ್ಲ. ಜಿ.ಪಿ.ಟಿ ಶಿಕ್ಷಕರು ಪ್ರಾಥಮಿಕ ಶಾಲೆಗಳಿಗೆ ಹಾಗೂ ಟಿ.ಜಿ.ಟಿ ಶಿಕ್ಷಕರು ಪ್ರೌಢಶಾಲೆಗಳಿಗೆ ವರ್ಗಾವಣೆ ಪಡೆಯಲು ಅರ್ಹರಾಗಿರುತ್ತಾರೆ. 2023-24ನೇ ಸಾಲಿನಲ್ಲಿ 2565 ಟಿ.ಜಿ.ಟಿ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದು 289 ವರ್ಗಾವಣೆಯಾಗಿರುತ್ತದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
No comments:
Post a Comment
If You Have any Doubts, let me Comment Here