General Knowledge Question and Answers 2024
🌸 ಕಾನ್‌ಸ್ಟಾಂಟಿನೋಪಲ್‌ನ ಈಗಿನ ಹೆಸರೇನು?
- ಇಸ್ತಾಂಬುಲ್
🌸 ಸಮುದ್ರಯಾನವನ್ನು ಪ್ರೋತ್ಸಾಹಿಸಿದ ಮೊದಲ ದೇಶ ಯಾವುದು?
- ಪೋರ್ಚುಗಲ್
🌸 ಭಾರತದಲ್ಲಿ ಪೋರ್ಚುಗೀಸ್ ಆಡಳಿತಕ್ಕೆ ಭದ್ರ ಬುನಾದಿ ಹಾಕಿದವನು ಯಾರು?
- ಆಲ್ಫಾನ್ಸೋ ಡಿ ಅಲ್ಬುಕರ್ಕ್
🌸 'ಭಾರತದ ನಿಜವಾದ ಪೋರ್ಚುಗೀಸ್ ಸಾಮ್ರಾಜ್ಯದ ನಿರ್ಮಾಪಕ' ಎಂದು ಹೆಸರಾದ ವೈಸ್‌ರಾಯ್ ಯಾರು?
- ಆಲ್ಫಾನ್ಸೋ ಡಿ ಅಲ್ಬುಕರ್ಕ್.
🌸 ಪೋರ್ಚುಗೀಸರು ಹಿಂದೂ ಮಹಿಳೆಯರನ್ನು ವಿವಾಹವಾಗಲು ಪ್ರೋತ್ಸಾಹಿಸುತ್ತಿದ್ದ ಪೋರ್ಚುಗೀಸ್ ಗವರ್ನರ್ ಯಾರು?
- ಆಲ್ಫಾನ್ಸೋ ಡಿ ಅಲ್ಬುಕರ್ಕ್.
🌸 ಪೋರ್ಚುಗೀಸರು ಬಿಜಾಪುರ ಸುಲ್ತಾನರಿಂದ ಗೋವಾ ವಶಪಡಿಸಿಕೊಂಡ ವರ್ಷ ಯಾವುದು?
- ಕ್ರಿ.ಶ 1510.
🌸 ಭಾರತದಲ್ಲಿ ಪೋರ್ಚುಗೀಸ್ ವಸಾಹತು ಸಾಮ್ರಾಜ್ಯದ ರಾಜಧಾನಿ ಯಾವುದು?
- ಗೋವಾ.
🌸 ಭಾರತದಲ್ಲಿ ಪೋರ್ಚುಗೀಸರ ಮುಖ್ಯಾಡಳಿತ ಕೇಂದ್ರ(ರಾಜಧಾನಿ) ಯಾವುದಾಗಿತ್ತು?
- ಗೋವಾ
🌸 ಭಾರತದಲ್ಲಿ ಪೋರ್ಚುಗೀಸರ ಅವನತಿಗೆ ಪ್ರಮುಖ ಕಾರಣವೇನು?
- ಅಲ್ಬುಕರ್ಕನ ಅಸಮರ್ಥ ಉತ್ತಾರಾಧಿಕಾರಿಗಳು.
🌸ಬ್ರಿಟೀಷರು ಪೋರ್ಚುಗೀಸರನ್ನು ಸೋಲಿಸಿದ ಯುದ್ಧ ಯಾವುದು?
- ಸ್ವಾಲಿ ಕದನ.
🌸ಸ್ವಾಲಿ ಕದನ ನಡೆದ ವರ್ಷ ಯಾವುದು?
- 1612
🌸ಪೋರ್ಚುಗೀಸರನ್ನು ಹೂಗ್ಲಿಯಿಂದ ಹೊರದೂಡಿದವರು ಯಾರು?
- ಮೊಘಲರು
🌸ಪೋರ್ಚುಗೀಸರನ್ನು ಬೇಸ್ಸಿನ್‌ನಿಂದ ಹೊರಹಾಕಿದವರು ಯಾರು?
- ಮರಾಠರು
🌸ಭಾರತಕ್ಕೆ ಐರೋಪ್ಯರ ಸಂಪರ್ಕ ವಿಶೇಷವಾಗಿ ಹೆಚ್ಚಿದ್ದು ಯಾರ ಆಗಮನದಿಂದ?
- ಪೋರ್ಚುಗೀಸರ ಆಗಮನದಿಂದ.
🌸ಪೋರ್ಚುಗೀಸರನ್ನು ಬೇಸ್ಸಿನ್‌ನಿಂದ ಹೊರಹಾಕಿದವರು ಯಾರು?
- ಮರಾಠರು
🌸ಪೋರ್ಚುಗೀಸರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಕರ್ನಾಟಕದ ಪ್ರಮುಖ ರಾಜವಂಶ ಯಾವುದಾಗಿತ್ತು
- ವಿಜಯನಗರದ ಅರಸರು
🌸ಮೊದಲ ಮುದ್ರಣಯಂತ್ರ ಭಾರತಕ್ಕೆ ಬಂದದ್ದು ಎಲ್ಲಿ?
- ಗೋವಾಕ್ಕೆ 1556ರಲ್ಲಿ
🌸ಪೋರ್ಚುಗೀಸರ ಆಗಮನದಿಂದ ಭಾರತಕ್ಕೆ ಬಂದ ಅಮೇರಿಕಾ ಬೆಳೆಗಳು
- ತಂಬಾಕು, ನೆಲಗಡಲೆ, ಈರುಳ್ಳಿ, ಮೆಕ್ಕೆಜೋಳ, ಆಲೂಗಡ್ಡೆ ಇತ್ಯಾದಿ.
🌸ಭಾರತಕ್ಕೆ ಐರೋಪ್ಯ ವಾಸ್ತುಶಿಲ್ಪ ಶೈಲಿಯು ಪರಿಚಿತಗೊಳ್ಳಲು ಕಾರಣರಾದವರು ಯಾರು?
- ಪೋರ್ಚುಗೀಸರು.
🌸ಭಾರತದಲ್ಲಿದ್ದ ಪೋರ್ಚುಗೀಸರ ಪ್ರಮುಖ ನೆಲೆಗಳಾವುವು?
- ಕಲ್ಲಿಕೋಟೆ, ಗೋವಾ, ಬೆಸ್ಸಿನ್, ಸಾಲ್ಸೆಟ್, ಸೇಂಟ್ ಥೋಂ, ಡಿಯು ದಮನ್, ಕೊಚ್ಚಿನ್
🌸ಭಾರತದಲ್ಲಿ ಪೋರ್ಚುಗೀಸರ ಅಧಿಪತ್ಯ ಅಂತ್ಯಗೊಂಡ ವರ್ಷ ಯಾವುದು?
- 1961
🌸ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಹಾಲೆಂಡ್ (ನೆದರಲೆಂಡ್) ದೇಶೀಯರು ಯಾರು?
- ಡಚ್ಚರು
🌸'ಡಚ್ ಈಸ್ಟ್ ಇಂಡಿಯಾ ಕಂಪನಿ'ಯ ಪೂರ್ಣ ಹೆಸರೇನು?
- The United East India Company Of The Netherlands'
🌸ಕಾರ್ಲೇನಿಯಸ್ ಹೌಟ್‌ಮನ್ ಯಾವ ದೇಶದ ವರ್ತಕನಾಗಿದ್ದನು?
- ಡಚ್ ದೇಶದವನು(ಹಾಲೆಂಡ್)
🌸ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
- 1602
🌸ಡಚ್ಚರು ಭಾರತದಲ್ಲಿ ತಮ್ಮ ಪ್ರಥಮ ವ್ಯಾಪಾರಿ ಮಳಿಗೆಯನ್ನು ಸ್ಥಾಪಿಸಿದ ಸ್ಥಳ ಯಾವುದು?
- ಮಚಲೀಪಟ್ಟಣ
🌸 ಡಚ್ಚರು ಮಚಲೀಪಟ್ಟಣ ತಮ್ಮ ವ್ಯಾಪಾರಿ ಮಳಿಗೆಯನ್ನು ಸ್ಥಾಪಿಸಿದ ವರ್ಷ ಯಾವುದು?
- 1605
ಪ್ರಶ್ನೆ 1: ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರನ್ನು ನೇಮಕ ಮಾಡಲಾಗಿದೆ?
ಉತ್ತರ: ರಾಷ್ಟ್ರಪತಿಗಳು
ಪ್ರಶ್ನೆ 2: ಲೋಕಸಭೆಯ ಒಟ್ಟು ಗರಿಷ್ಠ ಬಲ ಎಷ್ಟು?
ಉತ್ತರ: 552
ಪ್ರಶ್ನೆ 3: ಸಂವಿಧಾನದ ಯಾವ ವೇಳಾಪಟ್ಟಿಯು ಸಂವಿಧಾನದಿಂದ ಗುರುತಿಸಲ್ಪಟ್ಟ ಭಾಷೆಗಳ ಪಟ್ಟಿಯನ್ನು ಒಳಗೊಂಡಿದೆ?
ಉತ್ತರ: ಎಂಟನೇ ವೇಳಾಪಟ್ಟಿ
ಪ್ರಶ್ನೆ 4: ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಅನ್ನು ಸಂವಿಧಾನದ ಯಾವ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ?
ಉತ್ತರ: ಭಾಗ IV
ಪ್ರಶ್ನೆ 5: ರಾಜ್ಯಸಭೆ ಸದಸ್ಯನಾಗಲು ಇರುವ ಕನಿಷ್ಠ ವಯಸ್ಸು ಎಷ್ಟು..?
ಉತ್ತರ: 30 ವರ್ಷ
ಪ್ರಶ್ನೆ 6: ರಾಜ್ಯಸಭೆಯ ಸದಸ್ಯರ ಅಧಿಕಾರ ಅವಧಿ ಎಷ್ಟು..?
ಉತ್ತರ: 6 ವರ್ಷ
ಪ್ರಶ್ನೆ 7: ʼʼವಧವನ್ ಗ್ರೀನ್‌ಫೀಲ್ಡ್ʼʼ ಬಂದರನ್ನು ಯಾವ ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ?
ಉತ್ತರ: ಮಹಾರಾಷ್ಟ್ರ
ಪ್ರಶ್ನೆ 8: 2ನೇ ಭಾರತ-ಕಾರಿಕಾಮ್ ಶೃಂಗಸಭೆ ಎಲ್ಲಿ ನಡೆಯಿತು?
ಉತ್ತರ: ಗಯಾನಾ
ಪ್ರಶ್ನೆ 9: ಯಾವ ಸಂಸ್ಥೆಯು ಇತ್ತೀಚೆಗೆ ವಿಶ್ವದ ಮಕ್ಕಳ ಸ್ಥಿತಿ (SOWC) 2024 ವರದಿಯನ್ನು ಪ್ರಕಟಿಸಿದೆ?
ಉತ್ತರ: ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF)
ಪ್ರಶ್ನೆ:10 ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2024 ಎಲ್ಲಿ ನಡೆಯಿತು?
ಉತ್ತರ: ಗೋವಾ
ಪ್ರಶ್ನೆ 1: ಭಾರತ ಸರ್ಕಾರವು ರಚಿಸಿದ 'ಒಂದು ರಾಷ್ಟ್ರ ಒಂದು ಚುನಾವಣೆ' ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
ಉತ್ತರ: ರಾಮನಾಥ್ ಕೋವಿಂದ್
ಪ್ರಶ್ನೆ 2: ಪ್ರತಿ ವರ್ಷ ಪ್ರವಾಸಿ ಭಾರತೀಯ ದಿನವನ್ನಾಗಿ ಯಾವ ದಿನವನ್ನು ಆಚರಿಸಲಾಗುತ್ತದೆ?
ಉತ್ತರ: ಜನವರಿ 9
ಪ್ರಶ್ನೆ 3: ʼರಿಪಬ್ಲಿಕ್ʼ ಎಂಬ ಮಹಾಕೃತಿಯ ಕರ್ತೃ ಯಾರು?
ಉತ್ತರ: ಪ್ಲೇಟೋ
ಪ್ರಶ್ನೆ 4: ಪ್ರಪಂಚದ ಮೊದಲ ಮರದ ಉಪಗ್ರಹ 'ಲಿಗ್ನೋಸ್ಯಾಟ್'ಅನ್ನು ಇತ್ತೀಚೆಗೆ ಉಡಾವಣೆ ಮಾಡಿದ ದೇಶ ಯಾವುದು.?
ಉತ್ತರ: ಜಪಾನ್
ಪ್ರಶ್ನೆ 5: ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯರೋಗ ವರದಿ 2024ರ ಪ್ರಕಾರ, ಟಿಬಿ ರೋಗಿಗಳ ಪ್ರಕರಣಗಳಲ್ಲಿ ಅಗ್ರ ರಾಷ್ಟ್ರ ಯಾವುದು?
ಉತ್ತರ: ಭಾರತ
ಪ್ರಶ್ನೆ 6: ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ ಎಷ್ಟು..?
ಉತ್ತರ: 6 ವರ್ಷಗಳು
ಪ್ರಶ್ನೆ 7: ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?
ಉತ್ತರ: ಮುಖ್ಯಮಂತ್ರಿ
ಪ್ರಶ್ನೆ 8: ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಳ್ಳುತ್ತಾರೆ..?
ಉತ್ತರ: ರಾಷ್ಟ್ರಪತಿ
ಪ್ರಶ್ನೆ 9: ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗೆ ಇರುತ್ತದೆ..?
ಉತ್ತರ: ರಾಷ್ಟ್ರಪತಿ
ಪ್ರಶ್ನೆ 10: ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?
ಉತ್ತರ: ಭಾಗ 5
🌸ಡಚ್ಚರ ವ್ಯಾಪಾರಿ ಕೇಂದ್ರವಾಗಿದ್ದ ಕುಂದಾಪುರ ಬಳಿಯ ಸ್ಥಳ ಯಾವುದು?
- ಬಸ್ರೂರು.
🌸ಭಾರತದಲ್ಲಿ ಡಚ್ ವ್ಯಾಪಾರಿ ಚಟುವಟಿಕೆಗಳ ರಾಜಧಾನಿ ಯಾವುದಾಗಿತ್ತು?
- ಪುಲಿಕಾಟ್
🌸"ಭಾರತದಲ್ಲಿನ ಡಚ್ಚರ ಶಕ್ತಿ ಯುರೋಪಿನ ಯುದ್ಧರಂಗಗಳಲ್ಲೇ ಬಹುಮಟ್ಟಿಗೆ ಕ್ಷೀಣಿಸಿತು" ಎಂದವರು ಯಾರು?
- ಪಿ. ಇ. ರಾಬರ್ಟ್ಸ್
🌸ಡಚ್ಚರನ್ನು ಸೋಲಿಸಿದ ಇಂಗ್ಲೀಷ್ ಗವರ್ನರ್ ಯಾರು?
- ರಾಬರ್ಟ್ ಕ್ಲೈವ್
🌸ರಾಬರ್ಟ್ ಕ್ಲೈವ್ ಮತ್ತು ಡಚ್ಚರ ನಡುವೆ ನಡೆದ ಯುದ್ಧ ಯಾವುದು?
- ಬಿದ್ರಾ ಕದನ (1759)
🌸ಭಾರತದಲ್ಲಿದ್ದ ಡಚ್ಚರ ಪ್ರಮುಖ ನೆಲೆಗಳಾವುವು?
- ಪುಲಿಕಾಟ್, ನಾಗಪಟ್ಟಣ, ಚಿನ್ಸುರ, ಕಾರೈಕಲ್,ಇತ್ಯಾದಿ
🌸ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
- 1600.
🌸ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರದ ಸನದು ನೀಡಿದವರು ಯಾರು?
- ಬ್ರಿಟನ್ ರಾಣಿ ಎಲಿಜಬೆತ್
🌸ಇಂಗ್ಲೆಂಡಿನ ರಾಣಿ ಈಸ್ಟ್ ಇಂಡಿಯಾ ಕಂಪನಿಗೆ ಸನದು ನೀಡಿದ ವರ್ಷ ಯಾವುದು?
- 1600 ಡಿಸೆಂಬರ್ 31
🌸ವ್ಯಾಪಾರ ರಿಯಾಯ್ತಿಗಳನ್ನು ಬೇಡಿ ಜಹಾಂಗೀರನ ಆಸ್ಥಾನಕ್ಕೆ ಬಂದ ಮೊದಲ ಆಂಗ್ಲ ಯಾರು?
- ಕ್ಯಾಪ್ಟನ್ ವಿಲಿಯಂ ಹಾಕಿನ್ಸ್
🌸ಕ್ಯಾಪ್ಟನ್ ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನಕ್ಕೆ ಬಂದ ವರ್ಷ ಯಾವುದು?
- 1608
🌸ಇಂಗ್ಲೆಂಡ್ ದೊರೆ 1ನೇ ಜೇಮ್ಸ್‌ನ ರಾಯಭಾರಿಯಾಗಿ ಜಹಾಂಗೀರ ಆಸ್ಥಾನಕ್ಕೆ ಬಂದವನು ಯಾರು?
- ಥಾಮಸ್ ರೋ
🌸ಥಾಮಸ್ ರೋ ಜಹಾಂಗೀರನ ಆಸ್ಥಾನಕ್ಕೆ ಬಂದ ವರ್ಷ ಯಾವುದು?
- 1615
🌸 ಮದ್ರಾಸ್ ನಗರ ಸ್ಥಾಪಿಸಿದವರು ಯಾರು?
- ಫ್ರಾನ್ಸಿಸ್ ಡೇ
🌸 ಮದ್ರಾಸ್ ನಗರ ಸ್ಥಾಪನೆಯಾದ ವರ್ಷ ಯಾವುದು?
- 1639
🌸 ಮುಂಬಯಿಯನ್ನು ವರದಕ್ಷಿಣೆ ರೂಪದಲ್ಲಿ ಆಂಗ್ಲರಿಗೆ ನೀಡಿದವರು ಯಾರು?
- ಪೋರ್ಚುಗೀಸರು
🌸 2ನೇ ಚಾರ್ಲ್ಸ್ ದೊರೆಯಿಂದ ಮುಂಬಯಿ, ಕಂಪನಿಗೆ ದೊರೆತ ವರ್ಷ ಯಾವುದು?
- 1668.
🌸 ಕಂಪನಿಗೆ ನಾಣ್ಯ ಟಂಕಿಸುವ ಮತ್ತು ಯುದ್ಧ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ನೀಡಿದವರು ಯಾರು?
- ಇಂಗ್ಲೆಂಡ್ ದೊರೆ 2ನೇ ಚಾರ್ಲ್ಸ್ (1697)
25-12-24
No comments:
Post a Comment
If You Have any Doubts, let me Comment Here