JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, December 1, 2024

General Knowledge Question and Answers

  Jnyanabhandar       Sunday, December 1, 2024
General Knowledge Question and Answers 

🌸ನೊಬೆಲ ಪ್ರಶಸ್ತಿ ಪ್ರಧಾನ ಮಾಡುವ ದಿನಾಂಕ 
ಉತ್ತರ:- ಡಿಸೆಂಬರ 10
🌸 ನೊಬೆಲ್ ಪ್ರಶಸ್ತಿಯನ್ನು ಡಿಸೆಂಬರ 10 ರೆಂದೇ ಪ್ರಧಾನ ಮಾಡಲು ಕಾರಣ
ಉತ್ತರ:-ಡಿಸೆಂಬರ 10  ಅಲ್ಪ್ರೆಡ್ ನೊಬೆಲ್ ಅವರ ಸ್ಮಣ್ಯತಿಥಿ ದಿನವಾಗಿದೆ.
🌸ಶಾಂತಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಯಾವ ದೇಶದಲ್ಲಿ ಪ್ರಧಾನ ಮಾಡಲಾಗುತ್ತದೆ
ಉತ್ತರ:- ನಾರ್ವೆ
🌸ಉಳಿದ 5 ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಯಾವ ದೇಶದಲ್ಲಿ ಪ್ರಧಾನ ಮಾಡಲಾಗುತ್ತದೆ
ಉತ್ತರ:- ಸ್ವೀಡನ್
🌸ಭಾರತ & ಏಷ್ಯಾ ಖಂಡದಲ್ಲೇ ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದ ಮೊದಲಿಗರು
ಉತ್ತರ:-ರವೀಂದ್ರನಾಥ್ ಟ್ಯಾಗೋರ್ ( ಗೀತಾಂಜಲಿ )
🌸ಸರ್.ಸಿ. ವಿ.ರಾಮನ್ ರವರು ನೊಬೆಲ್ ಪ್ರಶಸ್ತಿಯನ್ನು ಪಡೆದ ಕ್ಷೇತ್ರ
 ಉತ್ತರ:- ಭೌತಶಾಸ್ತ್ರ
( ವರ್ಷ -1930, ಸಂಶೋಧನೆ - ಬೆಳಕಿನ ಚದುರುವಿಕೆ)
🌸ಮಾನಸ ಹುಲಿದಾಮ ಇರುವ ರಾಜ್ಯ 
ಉತ್ತರ:- ಅಸ್ಸಾಂ 
🌸ಮಹಾರಾಷ್ಟ್ರದ ಮುಂಬೈನಲ್ಲಿರುವ ಉದ್ಯಾನವನ 
ಉತ್ತರ:- ತರೋಬಾ ರಾಷ್ಟ್ರೀಯ ಉದ್ಯಾನವನ
🌸ಪ್ರಸಿದ್ಧ  ಪೆರಿಯಾರ್ ಅಭಯಾರಣ್ಯ ಹೊಂದಿರುವ ಸ್ಥಳ 
ಉತ್ತರ:- ಕೇರಳ

🌸ರಾಜ್ಯಸಭಾ ಸದಸ್ಯರು ಕನಿಷ್ಠ ಇಷ್ಟು
    ವಯಸ್ಸಿರಾಗಿರಬೇಕು? 
ಉತ್ತರ:- 30 ವರ್ಷಗಳು
🌸ದಿ ಹಾಲ್ ಆಫ್ ಫೇಮ್ ಇದಕ್ಕೆ 
     ಸಂಬಂಧಿಸಿದ್ದು? 
ಉತ್ತರ:- ಕ್ರಿಕೆಟ್
🌸ಪೆನ್ನಿಲಿನ ಔಷಧಿಯನ್ನು ಕಂಡುಹಿಡಿದವರು? 
ಉತ್ತರ:- ಅಲೆಕ್ಸಾಂಡರ್ ಪ್ಲೆಮಿಂಗ್
🌸ಆನಂದ ಮಠ ಪುಸ್ತಕದ ಲೇಖಕರು?
ಉತ್ತರ:-ಬಂಕಿಮ್ ಚಂದ್ರ ಚಟರ್ಜಿ
🌸ಜಾತ್ಯತೀತತೆಯ ಮೇಲಿನ ನಂಬಿಕೆಯಿಂದಾಗಿ ಈ ಕೆಳಗಿನ ಯಾವ ಮುಸ್ಲಿಂ ಆಡಳಿತಗಾರನನ್ನು ಅವರ ಮುಸ್ಲಿಂ ಪ್ರಜೆಗಳು 'ಜಗದ್ಗುರು' ಎಂದು ಪ್ರಶಂಸಿಸಿದರು?
ಉತ್ತರ: - ಇಬ್ರಾಹಿಂ ಆದಿಲ್ ಶಾಹ್
🌸ದೆಹಲಿ ಸುಲ್ತಾನರ ತುಘಲಕ್ ರಾಜವಂಶದ ಕೊನೆಯ ರಾಜ ಯಾರು? 
ಉತ್ತರ:- ನಾಸಿರ್-ಉದ್-ದಿನ್ ಮಹಮ್ಮದ್
🌸ದೆಹಲಿ ಸುಲ್ತಾನರ ಅವಧಿಯಲ್ಲಿ
     ಭೂಮಿಯನ್ನು ಅಳೆಯಲು ಬಳಸಿದ
     ಪದ? 
ಉತ್ತರ:-ಮಸಹತ್
🌸ಚೆಂಗಿಸ್ ಖಾನ್ ನೇತೃತ್ವದಲ್ಲಿ ಮಂಗೋಲರು ಯಾರ ಆಳ್ವಿಕೆಯ ಕಾಲದಲ್ಲಿ ಭಾರತವನ್ನು ಆಕ್ರಮಿಸಿದರು? 
ಉತ್ತರ:- ಇಲ್ತಮಶ್
🌸“ಮಹಮ್ಮದ್ ಗವಾನರ ಪ್ರಸಿದ್ಧ
    ಮದರಸಾ ಎಲ್ಲಿದೆ?
ಉತ್ತರ:-ಬೀದರ್

🌸ಆದಿಕವಿ ಪಂಪನ ಜನ್ಮಸ್ಥಳ ಯಾವುದು? 
ಉತ್ತರ:-ಅಣ್ಣಿಗೇರಿ
🌸ಪ್ರಪಂಚದ ಅತ್ಯುತ್ತಮ ಸ್ವಾಭಾವಿಕ ಬಂದರುಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿರುವ ಕರ್ನಾಟಕದ ಬಂದರು ಯಾವುದು?
ಉತ್ತರ:- ಕಾರವಾರ
🌸ಕ್ಷೀರ ಕ್ರಾಂತಿಯ ಪಿತಾಮಹ ಯಾರು?
    ಉತ್ತರ: - ವರ್ಗಿಸಕುರಿಯನ್ 
🌸ಸುವರ್ಣ (ಚಿನ್ನದ) ಕ್ರಾಂತಿ ಸಂಬಂಧಿಸಿರುವುದು? 
ಉತ್ತರ:- ತೋಟಗಾರಿಕಾ ಉತ್ಪನ್ನ ಅಭಿವೃದ್ಧಿಗೆ
🌸ಹಸಿರು ಕ್ರಾಂತಿ ಪಿತಾಮಹ ಯಾರು?
    ಉತ್ತರ: - ಎಂ.ಎಸ್. ಸ್ವಾಮಿನಾಥನ್ 
🌸ಕ್ಷೀರ ಕ್ರಾಂತಿ ಸಂಬಂಧಿಸಿರುವುದು?
   ಉತ್ತರ:- ಹಾಲು ಮತ್ತು ಹಾಲಿನ ಉತ್ಪನ್ನಗಳ ಅಭಿವೃದ್ಧಿಗೆ
🌸ಭಾರತದ ಮೊದಲ ಜಲವಿದ್ಯುತ್ ಯೋಜನೆ ಯಾವುದು 
ಉತ್ತರ:-- ಶಿವನಸಮುದ್ರ
🌸ಕೊಯ್ನಾ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
ಉತ್ತರ: -ಮಹಾರಾಷ್ಟ್ರ
🌸ಭಾರತದ ಮೊದಲ ಅಣುವಿದ್ಯುತ್ ಕೇಂದ್ರ ಯಾವಾಗ ಸ್ಥಾಪನೆಗೊಂಡಿತು?
  ಉತ್ತರ:-1969
🌸ಭಾರತದ ಮೊದಲ ಅಣುವಿದ್ಯುತ್ ಕೇಂದ್ರವು ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?
ಉತ್ತರ: -ತಾರಾಪುರ
ಪ್ರಶ್ನೆ 1: ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ ಯಾವುದು?
ಉತ್ತರ: ಚಿಕ್ಕಬಳ್ಳಾಪುರ
ಪ್ರಶ್ನೆ 2: ಮೈಸೂರು ಚಲೋ ಚಳುವಳಿ ನಡೆದ ವರ್ಷ ಯಾವುದು?
ಉತ್ತರ: 1947
ಪ್ರಶ್ನೆ 3: ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು ಯಾರು?
ಉತ್ತರ: 4ನೇ ಶ್ರೀ ಕೃಷ್ಣರಾಜ ಒಡೆಯರು
ಪ್ರಶ್ನೆ 4: ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?
ಉತ್ತರ: ಮಂಡ್ಯ
ಪ್ರಶ್ನೆ 5: ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದಾಗಿತ್ತು?
ಉತ್ತರ: ಶಿರಾ
ಪ್ರಶ್ನೆ 6: ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು ಯಾರು?
ಉತ್ತರ: ಹುಯಿಗೋಳ ನಾರಾಯಣರಾವ್
ಪ್ರಶ್ನೆ 7: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು?
ಉತ್ತರ: ನಂದಗಡ
ಪ್ರಶ್ನೆ 8: 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರ ಯಾರು?
ಉತ್ತರ: ಮಹಾತ್ಮ ಗಾಂಧೀಜಿ
ಪ್ರಶ್ನೆ 9: ಕರ್ನಾಟಕದಲ್ಲಿ 1842ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ ಯಾವುದು?
ಉತ್ತರ: ಮಂಗಳೂರು ಸಮಾಚಾರ
ಪ್ರಶ್ನೆ 10: ಹಿಂದೂಸ್ತಾನ ಸೇವಾದಳವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು ಯಾರು?
ಉತ್ತರ: ಎನ್.ಎಸ್.ಹರ್ಡೇಕರ್
🌸ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು?
ಉತ್ತರ:- ಡಾ.ಬಿ.ಆರ್.ಅಂಬೇಡ್ಕರ್
🌸'ಭಾರತ ಗಣರಾಜ್ಯಸಂವಿಧಾನ' ಎಂಬ ಕೃತಿಯ ಕರ್ತೃ  
ಉತ್ತರ:- ಡಾ| ಎಂ.ಪಿ.ಶರ್ಮಾ
🌸1976ರಲ್ಲಿ ಸಂವಿಧಾನದ ತಿದ್ದುಪಡಿಗಳನ್ನು ಸುಪ್ರೀಂಕೋರ್ಟ್ ಪ್ರಶ್ನಿಸಲಾಗದಂತೆ ಮಾಡಿದ ತಿದ್ದುಪಡಿ
  ಉತ್ತರ:-– 42ನೆಯ ತಿದ್ದುಪಡಿ
🌸`ಸಮಾಜವಾದ' ಎಂಬ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾದ ವರ್ಷ? 
ಉತ್ತರ:- 1976
🌸ಸ್ವತಂತ್ರ ಭಾರತದ ಮೊದಲನೆ ಗೌರ್ನರ್ ಜನರಲ್ ಆಗಿ ನೇಮಕವಾದವರು 
ಉತ್ತರ:-ಲಾರ್ಡ್ ಮೌಂಟ್ ಬ್ಯಾಟನ್
🌸ನಮ್ಮ ಸಂವಿಧಾನದ ಯಾವ
    ವಿಧಿಯು ಭಾರತವು ರಾಜ್ಯಗಳ ಒಕ್ಕೂಟ ಎಂದು ತಿಳಿಸುತ್ತದೆ ?
ಉತ್ತರ:- ಒಂದನೇ ವಿಧಿ
🌸ಪಾಕಿಸ್ತಾನದ ಮೊದಲನೆ ಗೌರರ್ ಜನರಲ್ 
ಉತ್ತರ:- ಮಹಮದಾಲಿ ಜಿನ್ನಾ
🌸ಸಂವಿಧಾನ ರಚನಾ ಸಭೆಯ ರಚನೆ
   ಉತ್ತರ: - 1946 ಡಿಸೆಂಬರ್
🌸ಬ್ರಿಟಿಷ್ ಸರ್ಕಾರವು 1919ರ ಸುಧಾರಣೆಗಳ ಪರಿಣಾಮಗಳನ್ನು ಪರಿಶೀಲಿಸಲು 1927ರಲ್ಲಿ ರಚಿಸಿದ ಕಮಿಷನ್
ಉತ್ತರ: - ಸೈಮನ್ ಕಮಿಷನ್
🌸ನಮ್ಮ ಸಂವಿಧಾನವು ಜಾರಿಗೆ ಬಂದದ್ದು 
ಉತ್ತರ:-1950 ಜನವರಿ 26
🌸ಯಾರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ದತ್ತು ಪುತ್ರನೆಂದು ಕರೆಯಲಾಗುತ್ತದೆ?
ಉತ್ತರ:- ಲಾರ್ಡ್ ಕರ್ಜನ್
🌸“ಇಂಡಿಯಾ ಟುಡೆ” ಇದು ಯಾರ ಗ್ರಂಥ ? 
ಉತ್ತರ:– ಆರ್.ಪಿ. ದತ್
🌸'ಪಾವರ್ಟಿ ಅಂಡ್ ಆನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ' ಕೃತಿಯ ಕರ್ತೃ?
ಉತ್ತರ: -ದಾದಾಬಾಯಿ ನವರೋಜಿ
🌸ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು? 
ಉತ್ತರ:- ಲಾರ್ಡ್ ವೆಲ್ಲೆಸ್ಲಿ
🌸1857ರ ಮಹಾದಂಗೆಯ ಸಂದರ್ಭದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವ ವಹಿಸಿದವರು?
ಉತ್ತರ:- “ಸರ್ ಕ್ಯಾಂಪ್‌ಬೆಲ್”
🌸1857ರ ಮಹಾದಂಗೆಯ ಅವಧಿಯಲ್ಲಿ ಬ್ರಿಟೀಷ್ ಗವರ್ನರ್ ಜನರಲ್ ಯಾರಾಗಿದ್ದರು?
ಉತ್ತರ:-'ಲಾರ್ಡ್ ಕ್ಯಾನಿಂಗ್'
🌸"1857ರ ಭಾರತದ ಸ್ವಾತಂತ್ರ್ಯ ಸಂಗ್ರಾಮ" ಕೃತಿಯ ಕರ್ತೃ? 
ಉತ್ತರ:- ವಿ.ಡಿ. ಸಾವರ್ಕರ್
🌸"1857ರ ಮಹಾ ಬಂಡಾಯ"ಗ್ರಂಥದ ಕರ್ತೃ?
ಉತ್ತರ: - ಅಶೋಕ ಮೆಹ್ತಾ
🌸'ಸಾವಿರದ ಎಂಟನೂರ ಐವತ್ತೇಳು' (1857) ಗ್ರಂಥದ ಕರ್ತೃ?
ಉತ್ತರ:- ಸುರೇಂದ್ರನಾಥ್ ಸೇನ್
🌸ಯಾವುದನ್ನು ಭಾರತದ 'ಮ್ಯಾಗ್ನಕಾರ್ಟ್' ಎಂದು ಕರೆಯಲಾಗುತ್ತದೆ? 
ಉತ್ತರ: - 1858ರ ವಿಕ್ಟೋರಿಯಾ ರಾಣಿಯ ಘೋಷಣಾ ಪತ್ರ
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here