JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, December 12, 2024

Assistant Professor Revised Selection List 2023

  Jnyanabhandar       Thursday, December 12, 2024
Assistant Professor Revised Selection List 2023

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2020ರನ್ವಯ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ: ಇಡಿ 92 ಡಿಸಿಇ 2023(ಇ), ದಿನಾಂಕ: 03.11.2023ರಂದು ಪ್ರಕಟಿಸಲಾಗಿತ್ತು.

ಅದರಂತೆ, ಭೌತಶಾಸ್ತ್ರವಿಷಯದ ಉಳಿಕೆ ಮೂಲ ವೃಂದದಲ್ಲಿ ಒಟ್ಟು 59 ಅಭ್ಯರ್ಥಿಗಳನ್ನು ಅಂತಿಮ ಆಯ್ಕೆ ಪಟ್ಟಿಯಲ್ಲಿ ಪ್ರಕಟಿಸಲಾಗಿದ್ದು ಇದರಲ್ಲಿ ಕ್ರಮ ಸಂಖ್ಯೆ (58)ರಲ್ಲಿ ಶ್ರೀ ಲೋಕೇಶ್, ಎ. ಜೆ. ಇವರನ್ನು ಸಾಮಾನ್ಯ ವರ್ಗ-ಅಂಗವಿಕಲ (Multiple Disability) ಮೀಸಲಾತಿಯಡಿ ಆಯ್ಕೆ ಮಾಡಲಾಗಿತ್ತು.

2021ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಅಭ್ಯರ್ಥಿ ಶ್ರೀ ರವಿತೇಜ.ಜಿ ಇವರು ಭೌತಶಾಸ್ತ್ರ ವಿಷಯಕ್ಕೆ ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವಾಗ ವಿಶೇಷ ಚೇತನ ಮೀಸಲಾತಿಯನ್ನು ನಮೂದಿಸುವ ಸಂದರ್ಭದಲ್ಲಿ ಚಲನವಲನ ವೈಕಲ್ಯತೆ (Locomotor Disability including cerebral palsy, Leprosy Cured, Dwarfism, Acid Attack Victims and Muscular Dystrophy, Autism, Intellectual Disability, Specific Learning Disability and Mental illness) ১০ ನಮೂದಿಸಿರುತ್ತಾರೆ. ಆದರೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಲು ಅರ್ಹ ಅಂಕಗಳನ್ನು ಗಳಿಸಿರದ ಕಾರಣ ಆಯ್ಕೆಯಾಗಿರುವುದಿಲ್ಲ.

ಶ್ರೀ ರವಿತೇಜ ಜಿ. ಇವರು ದೃಷ್ಟಿ ಮಾಂಧ್ರ ಮತ್ತು ಚಲನವಲನ ವೈಕಲ್ಯತೆ ಪ್ರಮಾಣ ಪತ್ರವನ್ನು ಹೊಂದಿದ್ದು ಅರ್ಜಿಯಲ್ಲಿ (Locomotor Disability including cerebral palsy, Leprosy Cured, Dwarfism, Acid Attack Victims and Muscular Dystrophy, Autism, Intellectual Disability, Specific

(0)

Leaming Disability and Mental illness) ಎಂದು ಕೋರಿರುತ್ತಾರೆ. ಆದ್ದರಿಂದ ಸದರಿಯವರನ್ನು Multiple Disability ಮೀಸಲಾತಿಯಲ್ಲಿ ಪರಿಗಣಿಸದೆ ಸಾಮಾನ್ಯ/ವಿಕಲ ಚೇತನ-ಚಲನವಲನ ವೈಕಲ್ಯತೆಯಡಿ ಪರಿಗಣಿಸಲಾಗಿರುತ್ತದೆ.

ಸದರಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಶ್ರೀ ರವಿತೇಜ ಜಿ. ಇವರು ಮಾನ್ಯ ಆಡಳಿತ ನ್ಯಾಯಮಂಡಳಿ, ಬೆಂಗಳೂರು ಇಲ್ಲಿ ಅರ್ಜಿ ಸಂಖ್ಯೆ: 1316/2023 ರ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ದಾವೆ ಸಲ್ಲಿಸಿ ತನ್ನನ್ನು Multiple Disability ಮೀಸಲಾತಿಯಲ್ಲಿ ಪರಿಗಣಿಸುವಂತೆ ಕೋರಿದ್ದನ್ನು ಭಾಗಶಃ ಪರಿಗಣಿಸಿ ದಿನಾಂಕ: 23.11.2023ರಂದು ನೀಡಿದ ಅಂತಿಮ ತೀರ್ಪಿನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಆಯ್ಕೆಯಾಗಿದ್ದ ಶ್ರೀ ಲೋಕೆಶ್ ಎ ಜೆ., ಇವರ ಆಯ್ಕೆಯನ್ನು ರದ್ದುಪಡಿಸಿ ಸದರಿಯವರ ಹುದ್ದೆಗೆ ಎದುರಾಗಿ ಶ್ರೀ ರವಿತೇಜ ಜಿ. ಇವರನ್ನು ಆಯ್ಕೆ ಮಾಡಿ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಆದೇಶ ನೀಡುವಂತೆ ನಿರ್ದೇಶಿಸಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ



logoblog

Thanks for reading Assistant Professor Revised Selection List 2023

Previous
« Prev Post

No comments:

Post a Comment

If You Have any Doubts, let me Comment Here