402 Civil PSI Provisional List 2022
2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Provisional Select List ಯನ್ನು ಇದೀಗ ಪ್ರಕಟಿಸಲಾಗಿದೆ.
1. ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ & ಮಹಿಳಾ) ಹಾಗೂ ಸೇವಾನಿರತ ಮಿಕ್ಕುಳಿದ ವೃಂದದ ಮತ್ತು ಕಲ್ಯಾಣ ಕರ್ನಾಟಕ ಹುದ್ದೆಗಳ ನೇಮಕಾತಿಯನ್ನು ಉಲ್ಲೇಖ(1)ರ ಅಧಿಸೂಚನೆಯನ್ವಯ ಕೈಗೊಳ್ಳಲಾಗಿರುತ್ತದೆ. ಸದರಿ ಹುದ್ದೆಗಳ ನೇಮಕಾತಿ ಸಲುವಾಗಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ನಡೆಸಿದ ನಂತರ ಸದರಿ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಬೇಕಾಗಿದ್ದು, ಈ ಸಂಬಂಧ ಉಲ್ಲೇಖ(2)ರ ಸರ್ಕಾರದ ಆದೇಶದನ್ವಯ ಸದರಿ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಉಲ್ಲೇಖ(3)ರಂತೆ ದಿನಾಂಕ: 03.10.2024ರಂದು ನಡೆಸಿ, ಉಲ್ಲೇಖ(4)ರನ್ವಯ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಿ, ಅದರ ಮಾಹಿತಿಯನ್ನು ನೇಮಕಾತಿ ಕಛೇರಿಗೆ ನೀಡಿರುತ್ತದೆ.
2. ವೃಂದ ಮತ್ತು ನೇಮಕಾತಿ (ತಿದ್ದುಪಡಿ) ನಿಯಮಗಳು, 2009, 2016 ಮತ್ತು 2020 ರಲ್ಲಿನ ನಿಯಮಗಳನ್ವಯ ಮೇಲ್ಕಂಡ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನೇಮಕಾತಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಹುದ್ದೆಗಳಂತೆ ಮೆರಿಟ್ ಹಾಗೂ ಮೀಸಲಾತಿಯನುಸಾರ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಿ, ಪ್ರಕಟಿಸಬೇಕಾಗಿರುತ್ತದೆ. ಅದರಂತೆ ಸದರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಉಲ್ಲೇಖ(5)ರಲ್ಲಿ ಸರ್ಕಾರದಿಂದ ನಿರ್ದೇಶನ ಹಾಗೂ ಸ್ಪಷ್ಟಿಕರಣವನ್ನು ಕೋರಲಾಗಿದ್ದು, ಈ ನಿಟ್ಟಿನಲ್ಲಿ ಉಲ್ಲೇಖ(6)ರನ್ವಯ ಸರ್ಕಾರವು ಈ ಕೆಳಕಂಡಂತೆ ನಿರ್ದೇಶನವನ್ನು ನೀಡಿರುತ್ತದೆ.
ಸರ್ಕಾರದ ಪತ್ರ ಸಂಖ್ಯೆ : 5/215/20/2024-222 : 21.12.20240 402
ಪಿ.ಎಸ್.ಐ. (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಕುರಿತಂತೆ ಆಯ್ಕೆ ಪಟ್ಟಿಯನ್ನು ದಿನಾಂಕ: 01.02.2023ರ ಸುತ್ತೋಲೆಯನ್ವಯ ತಯಾರಿಸಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿರುತ್ತದೆ:-
* 1. ದಿನಾಂಕ: 06.06.2020ರ ಸುತ್ತೋಲೆಯನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗನುಗುಣವಾಗಿ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದು.
2. ಆಯ್ಕೆ ಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಆಯ್ಕೆ ಪಟ್ಟಿಯು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂ:16343/2024ರಲ್ಲಿ ನೀಡುವ ಅಂತಿಮ ತೀರ್ಪಿಗೊಳಪಟ್ಟಿರುತ್ತದೆಂದು ಹಾಗೂ ಈ ಆಯ್ಕೆ ಪಟ್ಟಿಯಲ್ಲಿ ವೃಂದ ಬದಲಾವಣೆ, ಮೀಸಲಾತಿ ಪ್ರವರ್ಗ ಬದಲಾವಣೆ, ಅರ್ಹತಾ ಪಟ್ಟಿಯಲ್ಲಿನ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗೊಳಪಟ್ಟಿರುತ್ತದೆ ಎಂಬ ಷರತ್ತುಗಳನ್ನು ವಿಧಿಸುವುದು."
ಅದರಂತೆ ಪ್ರಕಟಿಸಲಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯು ಮೇಲ್ಕಂಡ ಷರತ್ತಿಗೊಳಪಟ್ಟಿರುತ್ತದೆ. ಅಲ್ಲದೇ ಇದನ್ನು ಹೊರತುಪಡಿಸಿ, ಸದರಿ ಆಯ್ಕೆ ಪಟ್ಟಿಯು ಈ ಕೆಳಕಂಡಂತೆ ತಿಳಿಸಿರುವ ಷರತ್ತುಗಳಿಗೂ ಸಹ ಒಳಪಟ್ಟಿರುತ್ತದೆ.
ಎ) ಈ ಆಯ್ಕೆ ಪಟ್ಟಿಯು ನಿಯಮಗಳನುಸಾರ ರಚಿಸಲಾಗಿರುವ ವೈದ್ಯಕೀಯ ಮಂಡಳಿಯು ನಡೆಸುವ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳಿಗೆ ಒಳಪಟ್ಟಿರುತ್ತದೆ.
ಬಿ) ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಇದ್ದ ಕಾರಣದಿಂದ ಸದರಿಯವರಿಗೆ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಇರುವುದಿಲ್ಲ. ಸದರಿ ನೇಮಕಾತಿಯು ಮೇಲೆ ಉಲ್ಲೇಖಿಸಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಸಿ) ಈ ಆಯ್ಕೆ ಪಟ್ಟಿಯು ಮುಂದಿನ ಯಾವುದೇ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ / ಮಾನ್ಯ ಉಚ್ಚ ನ್ಯಾಯಾಲಯ / ಮಾನ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಮಾನಗಳಿಗೆ ಒಳಪಟ್ಟಿರುತ್ತದೆ.
ಆಯ್ಕೆ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here