JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, November 7, 2024

Sir C.V.Raman Birth Anniversary

  Jnyanabhandar       Thursday, November 7, 2024
*ನವ್ಹಂಬರ 07-ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ ಭಾರತ ರತ್ನ ಚಂದ್ರಶೇಖರ ವೆಂಕಟರಾಮನ್ (ಸರ್ ಸಿ. ವಿ. ರಾಮನ್) ಅವರ ಜನ್ಮದಿನದ ಸ್ಮರಣೆಗಳು....*
ಸರ್ ಸಿ.ವಿ.ರಾಮನ್ (Sir C.V.Raman) ಎಂದು ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ.ಅಷ್ಟೇ ಏಕೆ, ಏಷ್ಯದಲ್ಲೇ ಮೊತ್ತಮೊದಲ ಬಾರಿಗೆ ನೊಬೆಲ್ ಪಾರಿತೋಷಿಕ ಪಡೆದ ಭಾರತೀಯ ವಿಜ್ಞಾನಿ.ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.
ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು.ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, ಪಾರ್ವತಿ ಅಮ್ಮಾಳ್.ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಇವರ ಎಳೆತನದ ವಿದ್ಯಾಭ್ಯಾಸ ವಿಶಾಖಪಟ್ಟಣದಲ್ಲಿ ಆಯಿತು.ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.
ನವೆಂಬರ್ 21, 1970 ರಲ್ಲಿ, 'ಪ್ರೊ.ರಾಮನ್' ರವರು, ದೇಮಹಳ್ಳಿಯಲ್ಲಿ ನಿಧನರಾದರು
*#ಹಲವು ಮೊದಲುಗಳ ಸರದಾರ:*
- ಇವರು ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ (Science and Technology) ನೊಬೆಲ್‌ ಪಡೆದ ಮೊದಲ ಭಾರತೀಯ, ಮೊದಲ ಏಷ್ಯನ್‌ ಹಾಗೂ ಮೊದಲ ಶ್ವೇತವರ್ಣೀಯರಲ್ಲದ ವ್ಯಕ್ತಿ!
- ರಾಮನ್ ಅವರು ಮೊದಲು ಕೋಲ್ಕೊತಾದಲ್ಲಿ ಅಕೌಂಟೆಂಟ್‌ ಆಗಿದ್ದರು. 11ನೇ ವಯಸ್ಸಿನಲ್ಲೇ ಹತ್ತನೇ ತರಗತಿ ಪಾಸು ಮಾಡಿದ ಪ್ರತಿಭಾವಂತ. ನಂತರ ಸರಕಾರಿ ಕೆಲಸ ಬಿಟ್ಟು ವಿಜ್ಞಾನ ಪ್ರಯೋಗಕ್ಕಾಗಿ ಕೋಲ್ಕತಾ ಯೂನಿವರ್ಸಿಟಿ ಸೇರಿದರು.
- ರಾಮನ್‌ ಅವರು ಹುಟ್ಟಿದ್ದು ತಮಿಳುನಾಡಿನಲ್ಲಿ ಆದರೂ, ತಮ್ಮ ಜೀವಿತಕಾಲದ ಬಹುಭಾಗವನ್ನು ಬೆಂಗಳೂರಿನಲ್ಲಿ ಕಳೆದರು. ಕರ್ನಾಕಟವೇ ಅವರ ಮನೆಯಾಗಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೊದಲ ನಿರ್ದೇಶಕರಾದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು.
- ಸಂಗೀತದಲ್ಲಿ (Music) ಅವರಿಗೆ ಭಾರೀ ಆಸಕ್ತಿ. ಮೃದಂಗ ಮತ್ತು ತಬಲಾವನ್ನು ಚೆನ್ನಾಗಿ ನುಡಿಸಬಲ್ಲವರಾಗಿದ್ದರು.
- ಭಾರತ ಸ್ವಾತಂತ್ರ್ಯಗೊಂಡ ಬಳಿಕ ಅವರು ದೇಶದ ಮೊತ್ತಮೊದಲ ರಾಷ್ಟ್ರೀಯ ಪ್ರೊಫೆಸರ್‌ ಆದವರು.


#BirthAnniversary
logoblog

Thanks for reading Sir C.V.Raman Birth Anniversary

Previous
« Prev Post

No comments:

Post a Comment

If You Have any Doubts, let me Comment Here