JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, November 7, 2024

Show cause notice regarding distribution of eggs under PM Poshan scheme for the year 2024-25

  Jnyanabhandar       Thursday, November 7, 2024
Show cause notice regarding distribution of eggs under PM Poshan scheme for the year 2024-25 

2024-25 ನೇ ಸಾಲಿನಲ್ಲಿ ಪಿ ಎಂ ಪೋಷಣ್ ಯೋಜನೆಯಡಿ ರಾಜ್ಯ ಸರ್ಕಾರದ ಮತ್ತು ಅಜೀಂ ಪ್ರೇಮ್ ಜಿ ಫೌಂಡೇಶನ್ ರವರ ಆರ್ಥಿಕ ಅನುದಾನದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ 06 ದಿನಗಳಂದು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆಯನ್ನು ವಿತರಿಸುತ್ತಿರುವ ಬಗ್ಗೆ ಆದೇಶ ಹೊರಡಿಸಿದೆ.

ಉಲ್ಲೇಖ:

1. ಈ ಕಛೇರಿಯ ಸುತ್ತೋಲೆ ಪತ್ರ ಸಂಖ್ಯೆ:ಎಂ1/ಪಿ ಎಂ ಪೋಷಣ್/APF-SNF/E-1509746/2024- 25. 2 12.09.2024 2 2 20.09.2024,

2. ಮಾನ್ಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ 20៥: 15.10.2024 2 29.10.2024.

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ. ರಾಜ್ಯದಲ್ಲಿ ವಾರದ ಎಲ್ಲಾ 06 ದಿನಗಳಿಗೆ ಪ್ರತಿ ವಿದ್ಯಾರ್ಥಿಗೆ ಮೊಟ್ಟೆ ವಿತರಣೆಗೆ ಈಗಾಗಲೇ ದಿನಾಂಕ 25-09-2024 ರಂದು ಸರ್ಕಾರವು ಅಧಿಕೃತ ಚಾಲನೆಯನ್ನು ನೀಡಿರುತ್ತದೆ. ಈ ಕಾರ್ಯಕ್ರಮವು ರಾಜ್ಯ ಸರ್ಕಾರದ ಒಂದು ಪ್ರತಿಷ್ಟಿತ ಕಾರ್ಯಕ್ರಮವಾಗಿದ್ದು ಮಕ್ಕಳಲ್ಲಿರುವ ಅಪೌಷ್ಠಿಕತೆ. ರಕ್ತಹೀನತೆ ಮತ್ತು ಬಹುಪೋಷಕಾಂಶಗಳ ನ್ಯೂನತೆಯನ್ನು ನಿವಾರಿಸಲು, ಮಕ್ಕಳ ದೈಹಿಕ ಆರೋಗ್ಯಯುತ ಬೆಳವಣಿಗೆಯನ್ನು ಉತ್ತೇಜಿಸಲು ಸದರಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಿರುತ್ತದೆ. ಇದರ ಪೂರ್ಣ ಪ್ರಮಾಣದ ಪ್ರಯೋಜನವನ್ನು ಶಾಲಾ ಮಕ್ಕಳು ಪಡೆಯುವಂತಾಗಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿರುತ್ತದೆ. ಇದಕ್ಕೆ ಬೆಂಬಲವಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕಿನ ಅನುಷ್ಠಾನಾಧಿಕಾರಿಗಳು, ಶಾಲಾ ಮುಖ್ಯಸ್ಥರು ಸದರಿ ಕಾರ್ಯಕ್ರಮದ ಅನುಷ್ಠಾನದ ಉದ್ದೇಶವನ್ನು ಸಮರ್ಪಕವಾಗಿ ಮನವರಿಕೆಮಾಡಿಕೊಂಡು ಯಾವುದೇ ಆರೋಪಗಳಿಗೆ ಅವಕಾಶ ಮಾಡಿಕೊಡದೆ ಅತ್ಯಂತ ಕಾಳಜಿಯಿಂದ ಯಶಸ್ವಿಯಾಗಿ ಗುರಿ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸದರಿ ಕಾರ್ಯಕ್ರಮದ ಅನುಷ್ಠಾನದ ಕ್ರಮಗಳ ಬಗ್ಗೆ ಅಜೀಂ ಪ್ರೇಮಜಿ ಫೌಂಡೇಶನ್ ಫಾರ್ ಡೆವಲಪಮೆಂಟ್ (APF) ಸಂಸ್ಥೆಯ ಪರಿಶೀಲನಾ ತಂಡವು ಶಾಲಾ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ರಾಜ್ಯದಲ್ಲಿ Random ಆಗಿ 04 ವಿಭಾಗಗಳು ಸೇರಿದಂತೆ ಒಟ್ಟು 357 ಶಾಲೆಗಳಿಗೆ ಭೇಟಿ ನೀಡಿ Pilot Program Evaluation ಮೌಲ್ಯಮಾಪನ ಅಧ್ಯಯನ ಕಾರ್ಯವನ್ನು ಕೈಗೊಂಡಿರುತ್ತಾರೆ. ದಿನಾಂಕ 15.10.2024 ರಂದು ಸರ್ಕಾರದ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ಮೌಲ್ಯಮಾಪನ ಅಧ್ಯಯನದ ವರದಿಯನ್ನು ಈ ಕೆಳಕಂಡಂತೆ ಮಂಡಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಆದೇಶ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ 

logoblog

Thanks for reading Show cause notice regarding distribution of eggs under PM Poshan scheme for the year 2024-25

Previous
« Prev Post

No comments:

Post a Comment

If You Have any Doubts, let me Comment Here