*ನವ್ಹಂಬರ 04-ಶಕುಂತಲಾ ದೇವಿ ಅವರಿಗೆ ಜನ್ಮದಿನದಂದು ಗೌರವಪೂರ್ವಕ ಪ್ರಣಾಮಗಳು:*
*ಖ್ಯಾತ ಗಣಿತಜ್ಞೆ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ದಿವಂಗತ ಶಕುಂತಲಾ ದೇವಿ ಅವರು 1939, ನವೆಂಬರ್ 4 ರಂದು ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಇವರು ಗಣಿತದ ಅತ್ಯಂತ ಸೂಕ್ಷರಹಸ್ಯಗಳೆಲ್ಲಾ ಸಣ್ಣ ವಯಸ್ಸಿನಲ್ಲೇ ಕರಗತವಾಗಿದ್ದವು. ತಮ್ಮ ಐದನೇ ವಯಸ್ಸಿನಲ್ಲಿ ಶಕುಂತಲಾ ದೇವಿಯವರು ಗಣಿತದ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಮನಸಲ್ಲೇ ಲೆಕ್ಕಿಸಿ ಥಟ್ ಎಂದು ಉತ್ತರ ಹೇಳುವ ಆಗಾಧ ಬುದ್ಧಿ ಶಕ್ತಿಯ ಬಾಲಕಿಯಾಗಿದ್ದರು .1977 ರಲ್ಲಿ ಡಲ್ಲಾಸ್ನಲ್ಲಿ 188132517 ವರ್ಗಮೂಲವನ್ನು ವೇಗವಾಗಿ ಕಂಡುಹಿಡಿಯುವ ಸ್ಪರ್ಧೆಯಲ್ಲಿ ಕಂಪ್ಯೂಟರ್‌ನೊಂದಿಗೆ ಸೆಣಸಿ ಗೆದ್ದು ತಮ್ಮ ಸಾಧನೆಯನ್ನು ವಿಶ್ವಕ್ಕೆ ಸಾರಿದರು.ಇಂದು ಈ ಖ್ಯಾತ ಗಣಿತಜ್ಞೆಯ ಜನ್ಮದಿನವಾಗಿದ್ದು ಶಕುಂತಲಾ ದೇವಿಯವರನ್ನು ಸ್ಮರಿಸೋಣ.*
ಮಾನವ ಕಂಪ್ಯೂಟರ್' ಎಂದೇ ವಿಶ್ವಪ್ರಸಿದ್ಧರಾಗಿದ್ದ ಶಕುಂತಲಾದೇವಿಯವರು, ಏಪ್ರಿಲ್ 21, 2013 ರ ರವಿವಾರ ಬೆಳಿಗ್ಯೆ, 8-15ಕ್ಕೆ ಹೃದಯಾಘಾತದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.ಅವರ ಪಾರ್ಥಿವ ಶರೀರವನ್ನು ಬಸವನಗುಡಿಯ ಅವರ ನಿವಾಸಕ್ಕೆ ತಂದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅದೇ ದಿನದ ಸಾಯಂಕಾಲ ೫-೩೦ ರ ಸುಮಾರಿಗೆ 'ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ' ಜರುಗಿತು.ಮೃತರಿಗೆ, (೭೩) ವರ್ಷ ವಯಸ್ಸಾಗಿತ್ತು. ಓರ್ವ ಪುತ್ರಿ, ಅಳಿಯ. ಇಬ್ಬರು ಮೊಮ್ಮಕ್ಕಳು(ಹೆಣ್ಣುಮಕ್ಕಳು) ಸೇರಿದಂತೆ, ಅಪಾರ ಬಂಧು-ಬಳಗ, ಹಾಗೂ ಶಿಷ್ಯ ವೃಂದವನ್ನು ಅವರು ಅಗಲಿ ತೆರಳಿದ್ದಾರೆ.
#ಸಾಧನೆಗಳು:
೧೯೭೭ ರಲ್ಲಿ ಡಲ್ಲಾಸ್ನಲ್ಲಿ 188132517 ವರ್ಗಮೂಲವನ್ನು ವೇಗವಾಗಿ ಕಂಡುಹಿಡಿಯುವ ಸ್ಪರ್ಧೆಯಲ್ಲಿ ಕಂಪ್ಯೂಟರ್‌ನೊಂದಿಗೆ ಸೆಣಸಿ ಗೆದ್ದರು.
ಮತ್ತೊಮ್ಮೆ, ಅಮೇರಿಕಾದ ವಿಶ್ವವಿದ್ಯಾಲಯದಲ್ಲಿ ಅವರಿಗೆ *Find value of x (√x23 = ..) x23 =91674867692003915809866092758538016248310668014430862240712651642793465704086709659 3279205767480806790022783016354924852380335745316935111903596577547340075681688305 6208210161291328455648057801588067711 ದ 23ನೇ ವರ್ಗಮೂಲ ಕಂಡುಹಿಡಿಯುವಂತೆ ಹೇಳಲಾಯಿತು. ಇದಕ್ಕೆ ಅವರು ೫೦ ಸೆಕೆಂಡುಗಳಲ್ಲಿ ಉತ್ತರಿಸಿದರು. ಅವರ ಉತ್ತರ 546372891(x=546372891) ಅನ್ನು ಧೃಡಪಡಿಸಲು UNIVAC 1108 ಕಂಪ್ಯೂಟರ್ ಒಂದು ನಿಮಿಷ ಕಾಲಾವಕಾಶ ತೆಗೆದುಕೊಂಡಿತು.
೧೯೮೦ರ ಜೂನ್ ೧೮ರಂದು, ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ 7,686,369,774,870 ಸಂಖ್ಯೆಯಿಂದ 2,465,099,745, 779 ಸಂಖ್ಯೆಯನ್ನು ಗುಣಿಸುವಂತೆ ಸವಾಲು ಎಸೆಯಲಾಯಿತು. ಇದಕ್ಕೆ ೨೮ ಸೆಕೆಂಡುಗಳಲ್ಲಿ 18,947,668,177,995,426,462,773,730 ಎಂದು ಶಕುಂತಲಾದೇವಿ ಉತ್ತರಿಸಿದ್ದರು. ಈ ಸಂದರ್ಭವನ್ನು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ೧೯೯೫ರಲ್ಲಿ ನಮೂದಿಸಲಾಗಿದೆ.
#BirthAnniversary
No comments:
Post a Comment
If You Have any Doubts, let me Comment Here