JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, November 14, 2024

Regarding the revision of the rent rate of teachers welfare fund residential rooms

  Jnyanabhandar       Thursday, November 14, 2024

Regarding the revision of the rent rate of teachers' welfare fund residential rooms

ಶಿಕ್ಷಕರ ಕಲ್ಯಾಣ ನಿಧಿಯ ವಸತಿ ಕೊಠಡಿಗಳ ಬಾಡಿಗೆ ದರವನ್ನು ಪರಿಷ್ಕರಿಸುವ ಕುರಿತು ಸರ್ಕಾರದ ಜ್ಞಾಪನ.

ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಶಿಕ್ಷಣ ಕಲ್ಯಾಣ ನಿಧಿಯ ಕಾರ್ಯದರ್ಶಿ, ಖಜಾಂಚಿಗಳು ಜ್ಞಾಪನ ಪತ್ರ ಹೊರಡಿಸಿದ್ದಾರೆ.

ಅದರಲ್ಲಿ ಶಿಕ್ಷಕರ ಕಲ್ಯಾಣ ನಿಧಿಯ ಸಭಾಂಗಣ, ವಸತಿ ಕೊಠಡಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದು, ದಿನಾಂಕ 10-10-2024ರಂದು ನಡೆದ ರಾಜ್ಯ ಸಮಿತಿ ಸಭೆಯ ತೀರ್ಮಾನದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಲಿ ಇರುವ ಬಾಡಿಗೆ ದರಗಳನ್ನು ಪರಿಷ್ಕರಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.

ಹೀಗಿದೆ ಪರಿಷ್ಕೃತ ದರಪಟ್ಟಿ

ಸಭಾಂಗಣ - ವಿದ್ಯಾರ್ಥಿಗಳ, ಶಿಕ್ಷಕರ ನೋಂದಾಯಿತ ಸಂಘಗಳಿಗೆ, ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ರೂ.15000 ಇದ್ದಂತ ದರವನ್ನು ರೂ.20000 ಹಾಗೂ ಜಿಎಸ್ಟಿಗೆ ಹೆಚ್ಚಿಸಲಾಗಿದೆ.
ಇನ್ನೂ ಸಭಾಂಗಣವನ್ನು ಇತರೆ ಇಲಾಖೆಯ ಕಾರ್ಯಕ್ರಮಗಳಿಗೆ, ಖಾಸಗಿ ಸಭೆ ಸಮಾರಂಭಗಳಿಗೆ ನಿಗದಿ ಪಡಿಸಿದ್ದಂತ ರೂ.62000 ದರವನ್ನು ಹಾಗೆಯೇ ಮುಂದುವರೆಸಲಾಗಿದೆ.
ವಸತಿ ಕೊಠಡಿ 2 ಹಾಸಿಗೆಗಳ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ರೂ.200 ಇದ್ದದ್ದು, ರೂ.400ಕ್ಕೆ ಹೆಚ್ಚಿಸಲಾಗಿದೆ. ಇತರೆ ಇಲಾಖೆಯವರಿಗೆ ರೂ.400 ಇದ್ದ ದರವನ್ನು ರೂ.500ಕ್ಕೆ ಏರಿಸಲಾಗಿದೆ.
ವಸತಿ ಕೊಠಡಿಯ 3 ಹಾಸಿಗೆಗಳ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ಈ ಹಿಂದೆ ರೂ.300 ನಿಗದಿ ಪಡಿಸಲಾಗಿತ್ತು. ಈ ದರವನ್ನು ರೂ.600ಕ್ಕೆ ಹೆಚ್ಚಿಸಲಾಗಿದೆ. ಇತರೆ ಇಲಾಖೆಯವರಿಗೆ ರೂ.650 ಇದ್ದ ದರವನ್ನು ರೂ.800ಕ್ಕೆ ಪರಿಷ್ಕರಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ
👇👇👇👇👇




logoblog

Thanks for reading Regarding the revision of the rent rate of teachers welfare fund residential rooms

Previous
« Prev Post

No comments:

Post a Comment

If You Have any Doubts, let me Comment Here