*ನವ್ಹಂಬರ 20-ಜಾಗತಿಕ/ಸಾರ್ವತ್ರಿಕ ಮಕ್ಕಳ ದಿನ(Global/Universal Children’s Day):*
ಈ ದಿನವು ವಿಶ್ವದ ಮಕ್ಕಳ ಹಕ್ಕುಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಬಡತನ, ತಾರತಮ್ಯ, ಸಶಸ್ತ್ರ ಸಂಘರ್ಷ ಮತ್ತು ಶೋಷಣೆಯ ಪರಿಣಾಮಗಳಿಂದ ಬಳಲುತ್ತಿರುವವರ ವಿರುದ್ಧ ಹೋರಾಟ ಮಾಡಿ ಅವರಿಗೆ ದೊರೆಯುವ ಸೌಲಭ್ಯಗಳನ್ನು ಒದಗಿಸುವುದು.
ನವೆಂಬರ್ 20, 2016 ರಿಂದ ವಿಶ್ವದಾದ್ಯಂತ ಮೊದಲ ಬಾರಿಗೆ ಸಾರ್ವತ್ರಿಕ ಮಕ್ಕಳ ದಿನವನ್ನು ಆಚರಿಸಲಾಯಿತು. ವಿಶ್ವಸಂಸ್ಥೆಯ ಚಾರ್ಟರ್‌ನ ಆದರ್ಶಗಳು ಮತ್ತು ಪ್ರಪಂಚದ ಮಕ್ಕಳ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರ ನಿರ್ಮಾಣದ ಇಟ್ಟಿಗೆಗಳು ರಾಷ್ಟ್ರವನ್ನು ಕಟ್ಟ ಲಾಗುತ್ತಿರುವ ಒಂದು ಮನೆಯೆಂದು ಪರಿಗಣಿಸುವುದಾದರೆ ಮಕ್ಕಳು ಆ ಮನೆ ನಿರ್ಮಾಣದ ಇಟ್ಟಿಗೆಗಳಂತೆ.ನಾವೇಷ್ಟು ಉತ್ತಮವಾದ ಇಟ್ಟಿಗೆಯನ್ನು ಮನೆಯ ನಿರ್ಮಾಣಕ್ಕಾಗಿ ಸಜ್ಜುಗೊಳಿಸುತ್ತೇವೆಯೋ ಅಷ್ಟು ಸುಂದರವಾದ ಮನೆ ನಿರ್ಮಾಣವಾಗುತ್ತದೆ.
ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಪ್ರದಾಯ ಎಲ್ಲವೂ ಉಳಿದು ಬೆಳೆದು ಸಾಗಬೇಕು.ಪ್ರತಿ ಮಗುವಿಗೂ ಅತ್ಯುತ್ತಮ ಪೋಷಣೆಯ ಅಡಿಪಾಯ ದೊರೆಯಬೇಕು.
*#ಇತಿಹಾಸ:*
ನವೆಂಬರ್20, 1959 ರಲ್ಲಿ UNGA ಮಕ್ಕಳ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ದಿನವಾಗಿದೆ. 14 ಡಿಸೆಂಬರ್ 1954 ರಂದು, ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು,ಎಲ್ಲಾ ದೇಶಗಳು ಸಾರ್ವತ್ರಿಕ ಮಕ್ಕಳ ದಿನವನ್ನು ಸ್ಥಾಪಿಸಬೇಕೆಂದು ಶಿಫಾರಸು ಮಾಡಿತು.
ಅದರಂತೆ ಭಾರತದಲ್ಲಿ ಪ್ರತಿ ವರ್ಷ ನವ್ಹಂಬರ ರಂದು 14 ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ.
#ಕೊನೆಯ ಮಾತು:ಮಕ್ಕಳನ್ನು ಒಳ್ಳೆಯವರನ್ನಾಗಿಸಲು ಉತ್ತಮ ಮಾರ್ಗವೆಂದರೆ ಅವರನ್ನು ಸಂತೋಷಪಡಿಸುವುದು. - ಆಸ್ಕರ್ ವೈಲ್ಡ್
#Global/Universal Children’s Day
No comments:
Post a Comment
If You Have any Doubts, let me Comment Here